ಹಾಸನ : ಹಾಸನಕ್ಕೆ ಹೆಚ್ಚಿನ ಅನುದಾನವನ್ನು ತರುವಂತಹ ಸಾಮರ್ಥ್ಯ ಇದ್ದರೆ ಅದು ಕೇವಲ ಶಾಸಕ ಪ್ರೀತಂ ಗೌಡರಿಗೆ ಮಾತ್ರ ಅಂತಾ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹಾಡಿಹೊಗಳಿದ್ದಾರೆ. ಹಾಸನದಲ್ಲಿ ಸೋಮವಾರ ನಡೆದ ಫಲಾನುಭವಿಗಳ ಸಂವಾದ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸರ್ಕಾರದಿಂದ ಹಾಸನಕ್ಕೆ ಎಲ್ಲಾ ರೀತಿಯ ಸವಲತ್ತುಗಳನ್ನು ತರುವ ಕಾರ್ಯವನ್ನು ಪ್ರೀತಂ ಗೌಡ ಅತ್ಯಂತ ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.
ಯಡಿಯೂರಪ್ಪರಿಗೆ ಈ ಪ್ರೀತಂ ಗೌಡ ಅದೆಂತಹ ಮೋಡಿ ಮಾಡಿದ್ದಾರೆ ಎನ್ನೋದನ್ನು ಇಂದಿಗೂ ನಮ್ಮ ಬಳಿ ಹೇಳಿಕೊಂಡಿಲ್ಲ. ನಾನು, ಗೋಪಾಲಯ್ಯ ಎಲ್ಲರೂ ಪ್ರೀತಂ ಗೌಡ ಬಳಿಯಲ್ಲಿ ಯಡಿಯೂರಪ್ಪ ಮೂಡ್ ಚೆನ್ನಾಗಿದ್ಯಾ ಎಂದು ಕೇಳಿಕೊಂಡು ಬಳಿಕ ಅವರನ್ನು ಭೇಟಿಯಾಗುತ್ತಿದ್ದೆವು. ಆದರೆ ಪ್ರೀತಂ ಗೌಡ ಬಂದರು ಅಂದರೆ ಸಾಕು ಅವರು ಯಾವುದೇ ಕೋಪವಿದ್ದರೂ ಸಹ ಬಾರಪ್ಪ ಮಗ ಎಂದು ಕರೆಯುತ್ತಿದ್ದರು ಎಂದು ಪ್ರೀತಂ ಗೌಡ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಾಂಧವ್ಯದ ಬಗ್ಗೆ ಎಸ್.ಟಿ ಸೋಮಶೇಖರ್ ಮಾಹಿತಿ ಹಂಚಿಕೊಂಡರು.

ಯಾರೇ ಶಾಸಕರಾಗಿರಲಿ, ಯಡಿಯೂರಪ್ಪ ಹಾಸನ ಕ್ಷೇತ್ರಕ್ಕೆ ಕೊಟ್ಟಂತಹ ಅನುದಾನ ಹಾಗೂ ಅದನ್ನು ಹಾಸನಕ್ಕೆ ತರುವಂತಹ ಸಾಮರ್ಥ್ಯ ಇರೋದು ಪ್ರೀತಂ ಗೌಡರಿಗೆ ಮಾತ್ರ. ನೇರ ನುಡಿ ಇರುವಂತಹ ಹಾಗೂ ಅಸೆಂಬ್ಲಿಯಲ್ಲಿ ಧೈರ್ಯವಾಗಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುವಂತಹ ಧೈರ್ಯ ಇರುವ ನಾಯಕ ಪ್ರೀತಂ ಗೌಡ. ಈಗ ಸಿಎಂ ಬೊಮ್ಮಾಯಿ ಬಳಿಯಲ್ಲಿಯೂ ಹಾಸನಕ್ಕೆ ಇನ್ನೂ ಏನೇನು ಸೌಲಭ್ಯ ಬೇಕು..? ಇಲ್ಲಿ ಯಾವೆಲ್ಲ ಪ್ರಾಜೆಕ್ಟ್ಗಳನ್ನು ತರಬಹುದು ಎಂಬುದರ ಬಗ್ಗೆ ಪ್ರೀತಂ ಗೌಡ ಚರ್ಚೆ ಮಾಡುತ್ತಲೇ ಇರ್ತಾರೆ ಎಂದು ಹೇಳಿದರು.