
ಸಂಡೂರು ಉಪ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕೆಂಬ ಪಣ ತೊಟ್ಟಿರುವ ಸಚಿವ ಸಂತೋಷ್ ಲಾಡ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರತಿ ಗ್ರಾಮಗಳಿಗೂ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಗ್ರಾಮಸ್ಥರು ಕೂಡ ಪಕ್ಷಾತೀತವಾಗಿ ತಮ್ಮದೇ ಮನೆ ಮಗನನ್ನು ಸ್ವಾಗತಿಸುವಂತೆ ಲಾಡ್ ಹೋದಲ್ಲೆಲ್ಲ ನೂರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ನಡುವೆ ಇವತ್ತು ಪ್ರಚಾರದ ಮಧ್ಯೆ ಲಾಡ್ ಅವರು ಬುಟ್ಟಿ ಹೊತ್ತು ಸಾಗುತ್ತಿದ್ದ ಮಹಿಳೆಯೊಬ್ಬರ ಜೊತೆ ಮಾತನಾಡುತ್ತ, ಅವರ ಬುಟ್ಟಿಯನ್ನು ಹೊತ್ತುಕೊಂಡಿದ್ದು ವಿಶೇಷವಾಗಿತ್ತು. ಎಂದಿನಂತೆ ಸಹಜವಾಗಿ ಜನರೊಂದಿಗೆ ಬೆರೆಯುವ ಸಂತೋಷ್ ಲಾಡ್ ಅವರು ಹೋದಲ್ಲೆಲ್ಲ ಜನರನ್ನು ಸೆಳೆಯುತ್ತಿರುವುದು ಚುನಾವಣೆಯನ್ನು ಮತ್ತಷ್ಟು ರಂಗಾಗಿಸಿದೆ.