
ತುಮಕೂರು: ತುಮಕೂರು ಜಿಲ್ಲೆಯಲ್ಲಿ 333 ಆಸ್ತಿಗಳನ್ನು ವಕ್ಫ್ ಆಸ್ತಿ ಅಂತೇಳಿ ನಮೂದು ಮಾಡಿ ಅಂತ ಇದೇ ಜಮೀರ್ ಅಹ್ಮದ್ ಆದೇಶ ಮಾಡಿದಾರೆ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಆರೋಪ ಮಾಡಿದ್ದಾರೆ.ನಾನು ಡಿಸಿಯವರಿಗೆ ತಹಶೀಲ್ದಾರ್ ಅವರಿಗೆ ಹೇಳ್ತಿನಿ, ನಿಮಗೆ ತಾಕತ್ತು ಇದ್ರೆ, ಈ ಸರ್ಕಾರಕ್ಕೆ, ಸಿದ್ದರಾಮಯ್ಯನಿಗೆ ತಾಕತ್ತು ಇದ್ರೆ, ನೀವು ಮಾಡ್ರಿ ನೋಡೋಣ ಅಂತ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಕತ್ ಇದ್ರೆ, ಹೇಯ್..! ಜಮೀರ್ ಅಹ್ಮದ್.. ನಿನಗೆ ಧಮ್ ಇದ್ರೆ, ನಿನಗೆ ತಾಕತ್ ಇದ್ರೆ ಮಾಡಿಸು ನೋಡೋಣ. ಜಮೀರ್ ಅಹ್ಮದ್ ನೀನು ನಿಮ್ಮಪ್ಪನಿಗೆ ಹುಟ್ಟಿದ್ರೆ ಮಾಡಿಸು ನೋಡೋಣ. ಏನ್ ತಿಳ್ಕೊಂಡಿದ್ದೀಯಾ ಹಿಂದೂಗಳೆಂದರೆ..? ನಿಮ್ಮನೆ ಗುಲಾಮರು ಅನ್ಕೊಂಡಿದಿಯಾ…? ಏನ್ ನಿಂದು..? ಪಾಕಿಸ್ತಾನ ಅನ್ಕೊಂಡಿದಿಯಾ..? ಬಾಂಗ್ಲಾದೇಶ ಅನ್ಕೊಂಡಿದಿಯಾ..? ಏನಯ್ಯಾ ನೀನು..? ಹೇಯ್ ಜಮೀರ್ ನಿನಗೆ ಎಚ್ಚರಿಕೆ ಕೊಡ್ತಾ ಇದ್ದೀವಿ..! ಕರ್ನಾಟಕ ರಾಜ್ಯದ ಬಿಜೆಪಿ ಘಟಕ ನಿನಗೆ ಎಚ್ಚರಿಕೆ ಕೊಡ್ತಾ ಇದೆ. ನಿನಗೆ ತಾಕತ್ ಇದ್ರೆ, ಧಮ್ ಇದ್ರೆ ಮಾಡ್ಸು ನೋಡೋಣ…? ಎಂದಿದ್ದಾರೆ.
ಇದನೆಲ್ಲ ಯಾರಪ್ಪನ ಮನೆ ಆಸ್ತಿ ಅನ್ಕೊಂಡಿದಿಯಾ ನೀನು..? ನಿಮ್ಮಪ್ಪನ ಮನೆಯ ಆಸ್ತಿ ಅನ್ಕೊಂಡಿದಿಯಾ..? ಏನಯ್ಯಾ ಜಮೀರ್, ನೀನು ಈ ಜಿಲ್ಲೆಯವನು, ಕುಣಿಗಲ್‌ನವನು ಅಂತಾ ಹೇಳಿಕೊಳ್ಳೊಕೆ ನಾಚಿಕೆಯಾಗಬೇಕು. ನಿನಗೆ ಕೊನೆಯ ಎಚ್ಚರಿಕೆ ಇದು.. ನೀನು ಈ ತರಹ ಗೊಂದಲಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಡಿದ್ರೆ.. ಬೀದಿ ಬೀದಿಯಲ್ಲಿ ಓಡಾಡಿಸಿಕೊಂಡು ಪ್ರತಿಭಟನೆ ಮಾಡ್ತಿವಿ. ಸಿದ್ದರಾಮಯ್ಯರಿಗೆ ಚುನಾವಣೆ ಮುಗಿದ ಮೇಲೆ ಮನೆ ಕಡೆ ಕಳುಹಿಸುತ್ತಾರೆ. ಅವಾಗಲೇ ಮ್ಯಾಚ್ ಫಿಕ್ಸ್ ಮಾಡಿಕೊಂಡಿದಾರೆ.. ನೂರಕ್ಕೆ ನೂರು ಸಿದ್ದರಾಮಯ್ಯ ನವೆಂಬರ್ 30 ಆದ ಬಳಿಕ ರಾಜೀನಾಮೆ ಕೊಡ್ತಾರೆ ಎಂದಿದ್ದಾರೆ.