ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ಭಾರತೀಯ ಸೇನೆ ಸನ್ನದ್ಧ ಆಗುತ್ತಿದೆ. ರಜೆ ಮೇಲೆ ಹುಟ್ಟೂರಿಗಳಿಗೆ ತೆರಳಿದ್ದ ಭಾರತೀಯ ಸೇನೆಯ ಯೋಧರಿಗೆ ಸೇನೆಯಿಂದ ಬುಲಾವ್ ಬರ್ತಿದೆ. ವಾರದ ಹಿಂದಷ್ಟೇ ಮದುವೆ ಆಗಿದ್ದ ಯೋಧರು ಕರ್ತವ್ಯಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಜೆ ಮೊಟಕುಗೊಳಿಸಿ ಪತ್ನಿ, ಕುಟುಂಬಸ್ಥರನ್ನು ಬಿಟ್ಟು ಸೇನೆಗೆ ಹೋಗಲು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ನಾಲ್ವರು ಯೋಧರು.

ಕಳೆದ ವಾರವಷ್ಟೇ ವಿವಾಹವಾಗಿದ್ದ ಸೇನೆಯಲ್ಲಿರುವ ಸಹೋದರರು. ಉಮೇಶ ಹುಡೇದ್ ಹಾಗೂ ಸಂಗಮೇಶ ಹುಡೇದ್ ಸಹೋದರರು ಸೇನೆಯಲ್ಲಿದ್ದು, ಕಳೆದ ವಾರ ಅಷ್ಟೇ ಮದುವೆ ಆಗಿದ್ದರು. ಸೇನೆಯಿಂದ ತುರ್ತು ಬುಲಾವ್ ಬಂದ ಹಿನ್ನಲೆಯಲ್ಲಿ ನಿನ್ನೆಯೇ ಜಮ್ಮುಗೆ ವಾಪಸ್ ತೆರಳಿದ್ದಾರೆ ಯೋಧ ಉಮೇಶ ಹುಡೇದ್. ಇನ್ನು ಇಂದು ಮತ್ತೋರ್ವ ಸಹೋದರ ಸಂಗಮೇಶ ಹುಡೇದ್ ಕೂಡ ಜಮ್ಮುಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹುಡೇದ್ ಸಹೋದರರ ಬಗ್ಗೆ ತಾಯಿ ಮಾತನಾಡಿದ್ದು, ಮಕ್ಕಳು ದೇಶಸೇವೆ ಮಾಡ್ತಿದ್ದಾರೆ, ಹೋಗಿ ಯುದ್ಧದಲ್ಲಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ. ಕಳೆದ ವಾರ ಮದುವೆ ಆಗಿದ್ದ ಯೋಧ ಶಿವರಾಜ್ ಚಿಕ್ಕನ್ನವರ ಅವರಿಗೂ ಕೂಡ ಸೇನೆಯಿಂದ ಬುಲಾವ್ ಬಂದಿದ್ದು, ಇವರೂ ಕೂಡ ದೇಶ ಸೇವೆಗೆಂದು ಅಸ್ಸಾಂಗೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಶಿವರಾಜ್ ದೇಶಸೇವೆಗೆ ಹೊರಟಿದ್ದನ್ನು ಶಿವರಾಜ್ ಅವರ ಪತ್ನಿ, ತಾಯಿ ಕೂಡ ಮೆಚ್ಚುಗೆ ಮಾತನ್ನಾಡಿ ಬೀಳ್ಕೊಡಲು ಮುಂದಾಗಿದ್ದಾರೆ. ಊಟಿಗೆ ಹೊರಟಿದ್ದ ನವ ದಂಪತಿಗೆ ಫೋನ್ ಶಾಕ್.. ಯುದ್ಧಕ್ಕೆ ಬನ್ನಿ..
ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ತಂಗಿಯ ಮದುವೆಗೆಂದು ರಜೆ ಮೇಲೆ ಬಂದಿದ್ದ ಯೋಧ ಸೇವೆಗೆ ವಾಪಸ್ ಆಗಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ವೀರಯೋಧ ಬಸವಕಿರಣ, ಏಪ್ರಿಲ್ 27ರಂದು ರಜೆ ತೆಗೆದುಕೊಂಡು ಊರಿಗೆ ಬಂದಿದ್ದರು. ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸವಕಿರಣ ಬಿರಾದಾರ ಇದೀಗ ಸೇವೆಗೆ ವಾಪಸ್ ಆಗಿದ್ದಾರೆ.
ಯೋಧ ಬಸವಕಿರಣ ಬಿರಾದಾರ ಹಣೆಗೆ ತಿಲಕವಿಟ್ಟು ಖುಷಿಯಿಂದ ಸೇವೆಗೆ ಕಳುಹಿಸಿದ್ದಾರೆ ಕುಟುಂಬಸ್ಥರು. ಯೋಧ ಬಸವಕಿರಣಗೆ ಅರತಿ ಬೆಳಗಿ, ಹಣೆಗೆ ಕುಂಕುಮವಿಟ್ಟು ಅಕ್ಕ ವಚನಶ್ರೀ ಶುಭ ಹಾರೈಕೆ ಮಾತನ್ನಾಗಿದ್ದಾರೆ. ಭಾರತೀಯ ಸೈನಿಕರ ಮೇಲೆ ಇಡೀ ದೇಶದ ಅಕ್ಕ-ತಂಗಿಯರ ಆಶೀರ್ವಾದವಿದೆ. ನಮ್ಮ ಸೈನಿಕರು ಉಗ್ರರನ್ನ ಮಟ್ಟ ಹಾಕಿ ವಿಜಯಶೀಲರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ದೇಶದ ಯೋಧರಿಗೆ ಶುಭ ಹಾರೈಸಿದ್ದಾರೆ ಯೋಧ ಬಸವಕಿರಣ ಬಿರಾದಾರ ಅಕ್ಕ ವಚನಶ್ರೀ.

ಇನ್ನು ಕಲಬುರಗಿಯಲ್ಲಿ ಹೆಂಡತಿ ಡೆಲಿವರಿಗಾಗಿ ಬಂದಿದ್ದ ಕಲಬುರಗಿ ಮೂಲದ ಯೋಧ ವಾಪಸ್ ಕರ್ತವ್ಯಕ್ಕೆ ಮರಳಿದ್ದಾರೆ. ಮಗು ಜನಿಸಿ ಒಂದು ವಾರದಲ್ಲೇ ಕುಟುಂಬ ಬಿಟ್ಟು ಯುದ್ದಕ್ಕೆ ತೆರಳಿದ್ದಾರೆ ಯೋಧ ಹಣಮಂತರಾಯ್ ಔಸೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಔಸೆ, ಕಳೆದ 20 ವರ್ಷಗಳಿಂದ ಸಿಆರ್ಪಿಏಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಜಮ್ಮುವಿನ ಶ್ರೀನಗರದಲ್ಲಿ ಸೇವೆಯಲ್ಲಿರುವ ಯೋಧ ಹಣಮಂತರಾಯ್ ಔಸೆ, ಒಂದು ತಿಂಗಳು ರಜೆ ಪಡೆದು ಕಳೆದ ಏಪ್ರಿಲ್ 25 ರಂದು ಕಲಬುರಗಿಗೆ ಬಂದಿದ್ದರು. ಹೆಂಡತಿಗೆ ಡೆಲಿವರಿ ಆಗಿ ಒಂದು ವಾರ ಕಳೆದಿದ್ದು, ಗಂಡು ಮಗು ಜನಿಸಿದೆ. ಹೆಂಡತಿ ಹಾಗು ನವಜಾತ ಮಗುವಿನ ಜೊತೆ ಕಾಲ ಕಳೆಯಬೇಕಿದ್ದ ಯೋಧ ಯುದ್ದ ಭೂಮಿಗೆ ಪ್ರಯಾಣ ಮಾಡಿದ್ದಾರೆ.

ಕಾರವಾರವಾರದಲ್ಲಿ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಹೊರಟಿದ್ದಾರೆ ಸಿದ್ದಾಪುರದ ಸೈನಿಕ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೈನಿಕ ಜಯಂತ್ ಮೇ 1 ನೇ ತಾರೀಕು ಮದುವೆಯಾಗಿದ್ದರು. ದೇವರ ಕಾರ್ಯ ಮುಗಿಸಿ ಹನಿಮೂನ್ಗೆಂದು ಊಟಿಗೆ ತೆರಳುತ್ತಿದ್ದ ಜಯಂತ್ ದಂಪತಿಗೆ ಮಾರ್ಗ ಮಧ್ಯೆ ಕೇಂದ್ರ ಕಚೇರಿಯಿಂದ ಬುಲಾವ್ ಬಂದಿದ್ದು, ಕೂಡಲೆ ಹನಿಮೂನ್ ಪ್ಲ್ಯಾನ್ ಮೊಟಕುಗೊಳಿಸಿ ದೇಶ ಸೇವೆಗೆ ಹೊರಟಿದ್ದಾರೆ ಸೈನಿಕ ಜಯಂತ್. ಛತ್ತೀಸ್ ಘಡದಲ್ಲಿ ಭೂಸೇನೆಯಲ್ಲಿ ಉದ್ಯೋಗ ಮಾಡುತ್ತಿದ್ದ ಜಯಂತ್ನನ್ನು ಕುಟುಂಬಸ್ಥರು ಬೀಳ್ಕೊಟ್ಟಿದ್ದಾರೆ.
ಚಿಕ್ಕಾಬಳ್ಳಾಪುರದ ಚಿಂತಾಮಣಿಯ ಚೊಕ್ಕರೆಡ್ಡಿಹಳ್ಳಿಯಿಂದ ಯುದ್ದಕ್ಕೆ ತೆರಳಿದ್ದಾರೆ ಯೋಧ ಅಶೋಕ್. ಸೈನ್ಯಾಧಿಕಾರಿಗಳು ತುರ್ತು ಕರೆ ಹಿನ್ನಲೇ ಪ್ರಯಾಣ ಮಾಡಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸನ್ಮಾನ ಮಾಡಿ ಸೇನೆಗೆ ಕಳುಹಿಸಿಕೊಟ್ಟಿದೆ ಕುಟುಂಬ ವರ್ಗ