• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

ಪ್ರತಿಧ್ವನಿ by ಪ್ರತಿಧ್ವನಿ
August 31, 2026
in Top Story
0
ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Share on WhatsAppShare on FacebookShare on Telegram

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ ಸಾಧ್ಯತೆ ಇದೆ. ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಸ್ತಾವನೆ ಸಿದ್ಧಪಡಿಸಿದೆ.

ADVERTISEMENT

 

ಸುಪ್ರೀಂ ಕೋರ್ಟ್ ನೀಡಿದ್ದ ಎರಡು ವಾರಗಳ ಗಡುವಿನ ಹಿನ್ನೆಲೆಯಲ್ಲಿ ಆಗಸ್ಟ್ 28-29ರಂದು FSSAI ಈ ಪ್ರಸ್ತಾವನೆ ಮುಂದಿಟ್ಟಿದೆ. ಸದ್ಯ ಇದು ಪ್ರಸ್ತಾವನೆಯ ಹಂತದಲ್ಲಿದ್ದು, ಅಂತಿಮ ನಿಯಮಗಳು ಜಾರಿಯಾದ ಬಳಿಕ ಬಿಸ್ಕತ್, ಕೂಲ್‌ಡ್ರಿಂಕ್ಸ್‌, ನಮ್ಕೀನ್ ಸೇರಿದಂತೆ ಹಲವು ಪ್ಯಾಕೆಟ್ ಆಹಾರ ಉತ್ಪನ್ನಗಳ ಮೇಲೆ ಹೊಸ ಎಚ್ಚರಿಕೆ ಲೇಬಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

HD Kumaraswamy : ಸಂವಿಧಾನದ ಬುಕ್‌ ಹಿಡಿದುಕೊಂಡು ಓಡಾಡ್ತಾರೆ ದಿನ Priyank Kharge..! | #pratidhvani

ಪ್ರಸ್ತಾವನೆ ಜಾರಿಯಾದರೆ, ಆಹಾರ ಉತ್ಪನ್ನದ ಪ್ಯಾಕೆಟ್‌ನ ಮುಂಭಾಗದಲ್ಲಿ ನ್ಯೂಟ್ರಿಷನ್ ಮಾಹಿತಿಗಿಂತ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಕೆಂಪು ಬಣ್ಣದ ಷಡ್ಭುಜಾಕಾರದ ಲೇಬಲ್ ಅಳವಡಿಸಲಾಗುತ್ತದೆ. ಅದರಲ್ಲಿ ‘HIGH SUGAR’, ‘HIGH SALT’ ಅಥವಾ ‘HIGH FAT’ ಎಂದು ನಮೂದಿಸುವ ಯೋಜನೆ ಇದೆ.

ಹಂತ ಹಂತವಾಗಿ ನಿಯಮ ಜಾರಿಗೊಳಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಹಾನಿಕಾರಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುವ ಉತ್ಪನ್ನಗಳಿಗೆ ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ನಂತರ ಒಂದೇ ಅಂಶದ ಪ್ರಮಾಣ ಹೆಚ್ಚಿರುವ ಉತ್ಪನ್ನಗಳಿಗೂ ನಿಯಮ ವಿಸ್ತರಿಸುವ ಪ್ರಸ್ತಾವನೆ ಇದೆ.ಆದರೆ ತುಪ್ಪ, ಎಣ್ಣೆ, ಉಪ್ಪು, ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪದಂತಹ ಮೂಲ ಆಹಾರ ಪದಾರ್ಥಗಳಿಗೆ ಈ ನಿಯಮದಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ.

N. A. Haris : ನಿಮ್ಮ ತ್ಯಾಗದಿಂದಲೇ ಬೆಂಗಳೂರಿನಲ್ಲಿ ಮನೆ ಕಟ್ಟುವವರ ಕನಸು ನನಸಾಗಿದೆ...  #pratidhvani

ಈ ಪ್ರಸ್ತಾವನೆ ಇನ್ನೂ ಅಂತಿಮಗೊಂಡಿಲ್ಲ. ಯಾವ ಪ್ರಮಾಣವನ್ನು ‘ಹೆಚ್ಚು’ ಎಂದು ಪರಿಗಣಿಸಬೇಕು ಮತ್ತು ನಿಯಮ ಯಾವ ದಿನದಿಂದ ಜಾರಿಗೆ ಬರಬೇಕು ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಆಹಾರ ಪ್ಯಾಕೆಟ್‌ಗಳಲ್ಲಿ ತಕ್ಷಣ ಯಾವುದೇ ಬದಲಾವಣೆ ಆಗುವುದಿಲ್ಲ.ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಸೆಪ್ಟೆಂಬರ್ 10ರ ಸುಮಾರಿಗೆ ಪರಿಶೀಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಗ್ರಾಹಕರು ಪ್ಯಾಕೆಟ್‌ ಖರೀದಿಸುವಾಗ ಕೇವಲ ‘ಸರ್ವಿಂಗ್ ಸೈಜ್’ ಗಮನಿಸುವ ಬದಲು ಪ್ರತಿ 100 ಗ್ರಾಂಗೆ ಇರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಪರಿಶೀಲಿಸುವುದು ಉತ್ತಮ. ‘No Added Sugar’ ಎಂದು ಬರೆದಿದ್ದರೂ ಉತ್ಪನ್ನದಲ್ಲಿ ನೈಸರ್ಗಿಕ ಅಥವಾ ಒಟ್ಟು ಸಕ್ಕರೆ ಪ್ರಮಾಣ ಹೆಚ್ಚಿರಬಹುದಾದ್ದರಿಂದ ನ್ಯೂಟ್ರಿಷನ್ ಲೇಬಲ್‌ ಅನ್ನು ಸಂಪೂರ್ಣವಾಗಿ ಓದುವುದು ಮುಖ್ಯ.

ಅದೇ ರೀತಿ, ಪದಾರ್ಥಗಳ ಪಟ್ಟಿಯಲ್ಲಿ (Ingredients) ಮೊದಲಿಗೆ ನಮೂದಿಸಿರುವ ವಸ್ತು ಉತ್ಪನ್ನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ಯಾಕೆಟ್‌ನ ಮುಂಭಾಗದ ಮಾಹಿತಿ ಮಾತ್ರವಲ್ಲದೆ ಹಿಂಭಾಗದಲ್ಲಿರುವ ಪದಾರ್ಥಗಳ ಪಟ್ಟಿ ಹಾಗೂ ಪೌಷ್ಟಿಕಾಂಶದ ವಿವರಗಳನ್ನೂ ಪರಿಶೀಲಿಸುವುದು ಅಗತ್ಯ.

Priyank Kharge : KPSC ಹಗರಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಎದ್ದು ಹೋಗಿದ್ದುHDK ಏಕೆ..? #hdkumaraswamy

ದೂರು ನೀಡುವುದು ಹೇಗೆ?

ಆಹಾರ ಉತ್ಪನ್ನದ ಲೇಬಲ್ ತಪ್ಪುದಾರಿಗೆಳೆಯುವಂತಿದ್ದರೆ ಅಥವಾ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅನುಮಾನವಿದ್ದರೆ, ಪ್ಯಾಕೆಟ್‌ನ ಮುಂಭಾಗ ಮತ್ತು ನ್ಯೂಟ್ರಿಷನ್ ಚಾರ್ಟ್‌ನ ಫೋಟೋ ತೆಗೆದಿಟ್ಟುಕೊಳ್ಳಬಹುದು. ನಂತರ FSSAIಯ ‘Food Safety Connect’ ಆ್ಯಪ್ ಅಥವಾ ‘FoSCoS’ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. 1800-11-2100 ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡುವುದರ ಜೊತೆಗೆ 9868686868ಕ್ಕೆ ವಾಟ್ಸಾಪ್ ಮೂಲಕವೂ ದೂರು ನೀಡಲು ಅವಕಾಶವಿದೆ.

 

Tags: Food LabelFood ProductsFood SafetyFood Safety RulesFSSAIHealth AwarenessHigh FatHigh SaltHigh SugarIndia Food SafetyNutrition LabelPackaged Foodsupreme court
Previous Post

ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

Related Posts

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ
Top Story

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

by ಪ್ರತಿಧ್ವನಿ
August 31, 2026
0

ಸ್ಯಾಂಡಲ್‌ವುಡ್‌ನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ’ದ ಹೊಸ ಸೀಸನ್‌ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದೀಗ ಆತಂಕ ಎದುರಾಗಿದೆ. ನಿಗದಿಯಂತೆ ಸೆಪ್ಟೆಂಬರ್‌ 6ರಂದು ಬಿಗ್‌ಬಾಸ್‌ ಕನ್ನಡ ಸೀಸನ್‌...

Read moreDetails
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

August 31, 2026
KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌: ಬೀದರ್ BJP ಮುಖಂಡನ ಬಂಧನ!

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌: ಬೀದರ್ BJP ಮುಖಂಡನ ಬಂಧನ!

August 31, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada