ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ದಾಂಪತ್ಯಕ್ಕೆ ಇಂದು 23 ವರ್ಷ ತುಂಬಿದೆ. ವಿವಾಹದ ಬಳಿಕ ಪತಿ, ಪತ್ನಿ ಪರಸ್ಪರ ಸುಖಃ ದುಖಃಗಳಲ್ಲಿ ಭಾಗಿಯಾಗುವ ಮೂಲಕ ಅನ್ಯೊನ್ಯತೆಯಿಂದ ಜೀವನ ಸಾಗಿಸಿದ್ದರು. ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಅತ್ಯಂತ ಸುಂದರ, ಸುಮಧುರ ದಾಂಪತ್ಯದ ಕ್ಷಣಗಳನ್ನು ಆರಂಭದ ದಿನಗಳಿಂದಲೂ ಅನುಭವಿಸಿದ್ದರು.

ಆದರೆ ಈಗ ದರ್ಶನ್ ಜೈಲಲ್ಲಿರುವುದರಿಂದ ವಿಜಯ್ ನೋವಿನಲ್ಲಿದ್ದಾರೆ. ಅಲ್ಲದೆ ಈ ದಚ್ಚು ಹಾಗೂ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ಸಂಭ್ರಮದ ವಾತಾವರಣ ನೆಲೆಸಬೇಕಿತ್ತು. ಆದರೆ ದಾಸನ ಅನುಪಸ್ಥಿತಿಯಿಂದ ಅದು ಸಾಧ್ಯವಾಗಿಲ್ಲ ಎಂಬ ಕೊರಗು ಹಾಗೂ ನೋವು ವಿಜಯಲಕ್ಷ್ಮಿ ಅವರಲ್ಲಿ ಕಾಡುತ್ತಿದೆ.
ಅಲ್ಲದೆ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಅಗ್ರ ಗಣ್ಯರಾಗಿರುವ ದರ್ಶನ್ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಈ ನಟನ ಬಾಳಲ್ಲಿ ಸದ್ಯ ಸಂಕಷ್ಟದ ದಿನಗಳು ಬಂದೆರಗಿದ್ದು, ಒಂದಾದ ಮೇಲೊಂದರಂತೆ ಕಾಡಿದ ವಿಘ್ನಗಳಿಂದ ನಟನ ಕುಟುಂಬ ನೋವಿನಲ್ಲಿದೆ. ಹೀಗಾಗಿ ಅನಿರೀಕ್ಷಿತವಾಗಿ ನಡೆದ ಒಂದು ಘಟನೆ ಇಡೀ ಕುಟುಂಬದ ಸಂತೋಷವನ್ನೇ ಕಿತ್ತುಕೊಂಡಂತಾಗಿದೆ.
ಇದನ್ನೂ ಓದಿ : ನಾರ್ವೆ ಪತ್ರಕರ್ತೆಯ ಪ್ರಶ್ನೆಗೆ ಮೋದಿ ಮೌನ? ವೈರಲ್ ಆಯ್ತು ಮಹುವಾ ಮೊಯಿತ್ರಾ ಪೋಸ್ಟ್
ದುಖಃದಲ್ಲಿರುವ ನಟ ದರ್ಶನ್..
ಇನ್ನೂ ಕಳೆದ 2024ರಲ್ಲಿ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಬಂದ ಆ ಒಂದು ಘಳಿಗೆಯಿಂದಲೇ ದರ್ಶನ್ ಕೆಟ್ಟ ಸಮಯ ಶುರುವಾಯಿತೇನೋ ಎಂಬ ಭಾವ ಮೂಡುತ್ತಿದೆ. ಅದಾದ ಬಳಿಕ ದರ್ಶನ್ ಜೀವನಕ್ಕೆ ಕಂಟಕದ ದಿನಗಳು ಪ್ರಾರಂಭವಾದವೇನೋ ಎಂಬ ಪ್ರಶ್ನೆಯೂ ಮೂಡುತ್ತಿದೆ. ಕಾರಣ ಕಳೆದ ಕೆಲ ತಿಂಗಳುಗಳ ಬೆಳವಣಿಗೆಗಳನ್ನು ನೋಡಿದಾಗ ಅರ್ಥವಾಗುತ್ತದೆ, ದರ್ಶನ್ ಎಷ್ಟರ ಮಟ್ಟಿಗೆ ದುಖಃದಲ್ಲಿದ್ದಾರೆ ಎಂಬುವುದು ನಮಗೆ ಅರ್ಥವಾಗುತ್ತದೆ.
ಗಂಡನ ಬೆನ್ನಿಗೆ ನಿಂತ ಗಟ್ಟಿಗಿತ್ತಿ!
ದರ್ಶನ್ ಅದೆಷ್ಟೇ ಸಾಧನೆ ಮಾಡಿರಬಹುದು, ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಕಷ್ಟದ ಕಾಲದಲ್ಲಿ ಜೊತೆಗೆ ನಿಂತ ಜೀವ ಅಂದರೆ ಅದು ವಿಜಯಲಕ್ಷ್ಮಿ. ಬೇರೆ ಹೆಣ್ಣಿನ ವಿಷಯಕ್ಕೆ ಗಂಡ ಜೈಲು ಸೇರಿದ್ರೂ, ಹೆಂಡತಿಯಾಗಿ, ಮಗನ ತಾಯಿಯಾಗಿ ಕೋರ್ಟು-ಕಚೇರಿ ಅಂತ ಇಂದಿಗೂ ಅಲೆಯುತ್ತಿದ್ದಾರೆ. ಗಂಡನ ಒಳಿತಿಗಾಗಿ ಸಿಕ್ಕ ಸಿಕ್ಕ ದೇವಸ್ಥಾನಗಳ ಮೆಟ್ಟಿಲು ಹತ್ತುತ್ತಿದ್ದಾರೆ.
ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ನಿಂದ ಬಿಡುಗಡೆಯ ಆಸೆ ಕೈಜಾರುತ್ತಿದ್ದಂತೆ ವಿಜಯಲಕ್ಷ್ಮಿ ಅವರ ಮನೋಸ್ಥೈರ್ಯವೇ ಕುಗ್ಗಿದಂತಿದೆ. ಅಲ್ಲದೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇರಬೇಕಾಗಿದ್ದ ವಿಜಯಲಕ್ಷ್ಮಿ, ಇದೇ ನೋವಿನಲ್ಲಿ ದರ್ಶನ್ ಫೋಟೋದ ಪಕ್ಕದಲ್ಲಿ ಒಡೆದ ಹೃದಯದ ಎಮೋಜಿ ಪೋಸ್ಟ್ ಮಾಡಿ ತಮ್ಮ ಒಂಟಿತನವನ್ನು ತೋಡಿಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಭಾವುಕ ಪೋಸ್ಟ್..
ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ಭಾವುಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ. ʻಬಿರುಗಾಳಿಯೇ ಬರಲಿ, ಮೌನವೇ ಇರಲಿ ಪ್ರತಿಯೊಂದು ಕ್ಷಣದಲ್ಲೂ ನಾನು ನಿನ್ನ ಕೈ ಹಿಡಿಯುತ್ತೇನೆ. ಸಂದರ್ಭಗಳು ನಮ್ಮನ್ನು ದೂರ ಮಾಡಲು ಪ್ರಯತ್ನಿಸಿದರೂ, ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತದೆ. ಇಡೀ ಜಗತ್ತೇ ನಿನಗೆ ಎದುರಾಗಿ ನಿಂತರೂ, ನಾನು ನಿನ್ನ ಜೊತೆಗೆ ನಿಲ್ಲುತ್ತೇನೆ, ಎಲ್ಲದರ ಮಧ್ಯೆಯೂ ನಿನ್ನನ್ನೇ ಆರಿಸಿಕೊಳ್ಳುತ್ತೇನೆʼ ಎಂದು ನೋವಿನಲ್ಲಿಯೇ ದರ್ಶನ್ ಬಗ್ಗೆ ಮ್ಯಾರೇಜ್ ಆನಿವರ್ಸರಿಯಂದು ವಿಜಯಲಕ್ಷ್ಮಿ ಎಮೋಷನಲ್ ಸ್ಟೇಟಸ್ ಹಂಚಿಕೊಂಡಿದ್ದಾರೆ.
ಗಂಡನಿಗಾಗಿ ಇಷ್ಟೆಲ್ಲಾ ನೋವುಗಳನ್ನು ಅನುಭವಿಸಿರುವ ಪತ್ನಿ ವಿಜಯಲಕ್ಷ್ಮಿ ಋಣವನ್ನು ನಟ ದರ್ಶನ್ ಏಳೇಳು ಜನ್ಮವೆತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲ. ಗಂಡ ಜೈಲಲ್ಲಿದ್ದರೂ ಎದೆಗುಂದೆ, ಅಂಜದೆ, ಅಳುಕದೆ ಗಟ್ಟಿಗಿತ್ತಿಯಾಗಿ ಗಂಡನ ಬಿಡುಗಡೆಗಾಗಿ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಹಗಲಿರುಳು ದರ್ಶನ್ ಬಗ್ಗೆ ಕಾಳಜಿಯಲ್ಲಿರುವ ವಿಜಯಲಕ್ಷ್ಮಿ ಈ ಬಾರಿಯ ವಿವಾಹ ವಾರ್ಷಿಕೋತ್ಸವವನ್ನಾದರೂ ದರ್ಶನ್ ಜೊತೆ ಆಚರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಆ ಸಮಯ ಕೂಡಿ ಬಂದಿಲ್ಲ, ಕಾನೂನು ಹೋರಾಟ ನಡೆಯುತ್ತಿದೆ. ಹೀಗಾಗಿ ಶೀಘ್ರದಲ್ಲೇ ಗಂಡನ ಬಿಡುಗಡೆಗಾಗಿ ಪತ್ನಿ ದೇವಸ್ಥಾನಗಳ ಮೊರೆ ಹೋಗಿದ್ದು, ಇಂದು ಕೂಡ ದಾಸನ ಮಡದಿ ವಿಜಯಲಕ್ಷ್ಮಿ ತಿರುವಣ್ಣಾಮಲೈನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿ ಶುಭ ಗಳಿಗೆಗಾಗಿ ಪ್ರಾರ್ಥಿಸಿದ್ದಾರೆ.






