ನವದೆಹಲಿ : ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ ವೇಳೆ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ತೆರಳಿದ ವಿಚಾರವನ್ನು ಉಲ್ಲೇಖಿಸಿ ಮಹುವಾ ಮೊಯಿತ್ರಾ ಕೇಂದ್ರ ಸರ್ಕಾರ ಹಾಗೂ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹುವಾ ಮೊಯಿತ್ರಾ ತಮ್ಮ ಎಕ್ಸ್ ಖಾತೆಯಲ್ಲಿ https://x.com/MahuaMoitra/status/2056400127028556276?s=20 “Norwegian media says what GodiMedia can’t” ಎಂದು ಬರೆದು, “ವಿದೇಶ ಪ್ರವಾಸಕ್ಕೆ ಹೋಗುವುದಷ್ಟೇ ಸಾಲದು, ಸ್ವತಂತ್ರ ಸಮಾಜದ ಮೌಲ್ಯಗಳನ್ನು ಕಲಿಯಬೇಕು” ಎಂದು ಟೀಕಿಸಿದ್ದಾರೆ.ಈ ಪೋಸ್ಟ್‌ನಲ್ಲಿ ನಾರ್ವೆ ಮೂಲದ ಪತ್ರಕರ್ತೆ Helle Lyng ಅವರ ವಿಡಿಯೋವನ್ನೂ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ https://x.com/HelleLyngSvends/status/2056349011213181063?s=20 “ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರಶ್ನೆಯನ್ನು ತೆಗೆದುಕೊಳ್ಳಲಿಲ್ಲ; ನಾನು ಅದನ್ನು ನಿರೀಕ್ಷೆಯೂ ಮಾಡಿರಲಿಲ್ಲ” ಎಂದು ಪತ್ರಕರ್ತೆ ಹೇಳಿರುವುದು ಕೇಳಿಬರುತ್ತದೆ.

ಅದೇ ವೇಳೆ ಅವರು ನಾರ್ವೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ 157ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಇದಕ್ಕೂ ಮೊದಲು ಕೂಡ ಪ್ರಧಾನಿ ಮೋದಿ ವಿದೇಶ ಪ್ರವಾಸಗಳ ವೇಳೆ ಪತ್ರಿಕಾಗೋಷ್ಠಿಗಳಲ್ಲಿ ನೇರ ಪ್ರಶ್ನೆಗಳಿಗೆ ಉತ್ತರಿಸದಿರುವ ವಿಚಾರ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು. ಈ ಘಟನೆಯ ಬಳಿಕ ಮತ್ತೆ “ಪ್ರೆಸ್ ಫ್ರೀಡಂ”, “ಗೋದಿ ಮೀಡಿಯಾ” ಹಾಗೂ “ಪ್ರಧಾನಿಯ ಮಾಧ್ಯಮ ಎದುರಾಟ” ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ. https://youtube.com/shorts/tZjoTMSjcz0?si=NUF8F4xsRrot9jq4
ಇತ್ತ ಬಿಜೆಪಿ ಬೆಂಬಲಿಗರು ಮಹುವಾ ಮೊಯಿತ್ರಾ ಪೋಸ್ಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿದೇಶಿ ಮಾಧ್ಯಮಗಳ ಹೇಳಿಕೆಯನ್ನು ಆಧರಿಸಿ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
https://x.com/HelleLyngSvends/status/2056349011213181063?s=20
https://www.instagram.com/reel/DYfZrMFvj8R/?igsh=ZjQ3aHlicWxoZ2J3






