Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮೋದಿಯನ್ನು ಇಂದಿರಾ ಗಾಂಧಿಗೆ ಹೋಲಿಸಿದ ದೀದಿ

ಪ್ರತಿಧ್ವನಿ

ಪ್ರತಿಧ್ವನಿ

December 2, 2021
Share on FacebookShare on Twitter

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ನಡುವಿನ ಹೋಲಿಕೆಯನ್ನು ತೆರೆದಿಟ್ಟಿದ್ದಾರೆ. ಜನರು ಹೇಗೆ ಇಂದಿರಾ ಗಾಂಧಿಯನ್ನು ಕ್ಷಮಿಸಿರಲಿಲ್ಲವೋ, ಅದೇ ರೀತಿ ಪ್ರಧಾನಿ ಮೋದಿಯನ್ನೂ ಕ್ಷಮಿಸುವುದಿಲ್ಲ ಎಂದು ಹೇಳಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ನಂತರ ಪ್ರಧಾನಿ ಮೋದಿ ಕ್ಷಮೆ ಕೇಳಿದ್ದರು. ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ 1977ರಲ್ಲಿ ಇಂದಿರಾ ಗಾಂಧಿಯವರೂ ಬಹಿರಂಗ ಕ್ಷಮೆ ಕೇಳಿದ್ದರು. ಆದರೆ, ಜನ ಅವರನ್ನು ಕ್ಷಮಿಸಿರಲಿಲ್ಲ. ಇಂದಿರಾ ಗಾಂಧಿ ತುಂಬಾ ಶಕ್ತಿಶಾಲಿ ನಾಯಕಿಯಾಗಿದ್ದರೂ, ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದು ತುರ್ತು ಪರಿಸ್ಥಿತಿಯ ಕರಾಳ ನೆನಪು ಮಾತ್ರ. ಅದೇ ರೀತಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ನಂತರ ಅದನ್ನು ವಾಪಸ್ ಪಡೆಯುವ ವೇಳೆ ಪ್ರಧಾನಿ ಮೋದಿ ಕ್ಷಮೆ ಕೇಳಿದ್ದರೂ, ದೇಶದ ಜನ ಅವರನ್ನು ಕ್ಷಮಿಸುವುದಿಲ್ಲ, ಎಂದು ಬ್ಯಾನರ್ಜಿ ಹೇಳಿದ್ದಾರೆ.

ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ದೇಶದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಅಸ್ಥಿತ್ವಕ್ಕೆ ತರುವ ಬೃಹತ್ ಯೋಜನೆಯನ್ನು ದೀದಿ ಹಮ್ಮಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದು, ಇದರ ಭಾಗವಾಗಿ ಮುಂಬೈನಲ್ಲಿ ಸಭೆ ನಡೆಸಿದ್ದಾರೆ

.

ಈ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಸಿಎಂ ಮಮತಾ,

“ಯಾವುದೇ ಚರ್ಚೆಯಿಲ್ಲದೇ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಇದಕ್ಕೆ ಕಾರಣ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ. ಉತ್ತರ ಪ್ರದೇಶ ಚುನಾವಣೆಗಾಗಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಬಿಜೆಪಿಯಲ್ಲಿ ಭಯ ಸೃಷ್ಟಿಯಾಗಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಆಲೋಚಿಸುತ್ತಿಲ್ಲ. ದೇಶವನ್ನು ಬದುಕಿಸಬೇಕಾಗಿದೆ. ಚಿಂತಿಸಬೇಡಿ, ಎಲ್ಲವು ಸರಿಯಾಗುತ್ತೆ,” ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್ ನಿಷ್ಕ್ರೀಯತೆಯನ್ನು ದೂಷಿಸಿರುವ ಮಮತಾ ಬ್ಯಾನರ್ಜಿ, ಯುಪಿಎ ಮೈತ್ರಿಕೂಟ ಬಿಜೆಪಿಯ ಫ್ಯಾಸಿಸಂ ವಿರುದ್ದ ಹೋರಾಡದೇ ಇದ್ದದ್ದು ಬಿಜೆಪಿಗೆ ವರದಾನವಾಯಿತು, ಎಂದಿದ್ದಾರೆ.

“ಯಾವ ಯುಪಿಎ? ಈಗ ಯುಪಿಎ ಎಂಬುದು ಅಸ್ಥಿತ್ವದಲ್ಲಿ ಇಲ್ಲ. ಯುಪಿಎ ಮತ್ತು ಎನ್ ಡಿ ಎ ಹೊರತಾಗಿ ಒಂದು ದೃಢವಾದ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾದ ಅಗತ್ಯತೆಯಿದೆ,” ಎಂದು ಅವರು ಹೇಳಿದ್ದಾರೆ.

ಯುಪಿಎ ಮೈತ್ರಿಕೂಟದ ಪ್ರಮುಖ ಭಾಗವಾಗಿದ್ದ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ಮಮತಾ ಬ್ಯಾನರ್ಜಿ ಈ ಮಾತುಗಳನ್ನಾಡಿರುವುದು ತೃತೀಯ ರಂಗ ರಚನೆಯ ಮುನ್ಸೂಚನೆ ಲಭಿಸಿದಂತಿದೆ.

RS 500
RS 1500

SCAN HERE

don't miss it !

ಮಗಳಿಗಾಗಿ  30 ವರ್ಷ ಗಂಡಸಿನ ವೇಷದಲ್ಲಿ ಬದುಕಿದ ದಿಟ್ಟ ಮಹಿಳೆ!
Top Story

ಮಗಳಿಗಾಗಿ  30 ವರ್ಷ ಗಂಡಸಿನ ವೇಷದಲ್ಲಿ ಬದುಕಿದ ದಿಟ್ಟ ಮಹಿಳೆ!

by ಪ್ರತಿಧ್ವನಿ
May 14, 2022
ಧಾರವಾಡ ಕೃಷಿ ಮೇಳ ಮುಂದೂಡಿಕೆ!
ಕರ್ನಾಟಕ

ಧಾರವಾಡ ಕೃಷಿ ಮೇಳ ಮುಂದೂಡಿಕೆ!

by ಪ್ರತಿಧ್ವನಿ
May 18, 2022
ಸಿಎಂ ಬೊಮ್ಮಾಯಿಯವರಿಗೆ ಗಂಡಸ್ತನ ಇದ್ದರೆ ಇಂತಹ ಸಮಯದಲ್ಲಿ ಮೌನವಾಗಿರಬೇಡಿ : ಹೆಚ್‌ಡಿ ಕುಮಾರಸ್ವಾಮಿ | HDK |  Bommai
ಕರ್ನಾಟಕ

ಹಿಂದೂ ಸಂಘಟನೆಗಳು ಮಕ್ಕಳನ್ನು ಉಗ್ರಗಾಮಿಗಳನ್ನಾಗಿ ತಯಾರಿಸಲು ಹೊರಟಿದ್ದಾರೋ? : ಮಾಜಿ ಸಿಎಂ ಹೆಚ್.ಡಿ.ಕೆ ಕಿಡಿ

by ಪ್ರತಿಧ್ವನಿ
May 17, 2022
ಸಚಿವ ಸಂಪುಟ ವಿಸ್ತರಣೆ ಮುನ್ನ BSYರನ್ನು ಭೇಟಿಯಾದ ಸಿಎಂ ಬೊಮ್ಮಾಯಿ : ರಾಜಕೀಯ ವಲಯದಲ್ಲಿ ಕುತೂಹಲ!
ಕರ್ನಾಟಕ

ಸಚಿವ ಸಂಪುಟ ವಿಸ್ತರಣೆ ಮುನ್ನ BSYರನ್ನು ಭೇಟಿಯಾದ ಸಿಎಂ ಬೊಮ್ಮಾಯಿ : ರಾಜಕೀಯ ವಲಯದಲ್ಲಿ ಕುತೂಹಲ!

by ಪ್ರತಿಧ್ವನಿ
May 13, 2022
ಆರ್ ಸಿಬಿಗೆ ಆಘಾತ ನೀಡಿದ ಪಂಜಾಬ್ ಗೆ ಸುಲಭ ಜಯ
ಕ್ರೀಡೆ

ಆರ್ ಸಿಬಿಗೆ ಆಘಾತ ನೀಡಿದ ಪಂಜಾಬ್ ಗೆ ಸುಲಭ ಜಯ

by ಪ್ರತಿಧ್ವನಿ
May 13, 2022
Next Post
ಸಿಎಂ ಬದಲಾವಣೆ ಬಿಜೆಪಿ ನಕ್ಷತ್ರದಲ್ಲಿಯೇ ಇದೆ : ಬಿ.ಕೆ. ಹರಿಪ್ರಸಾದ್ ವ್ಯಂಗ್ಯ

ಸಿಎಂ ಬದಲಾವಣೆ ಬಿಜೆಪಿ ನಕ್ಷತ್ರದಲ್ಲಿಯೇ ಇದೆ : ಬಿ.ಕೆ. ಹರಿಪ್ರಸಾದ್ ವ್ಯಂಗ್ಯ

ವಿಧಾನ ಪರಿಷತ್ ಚುನಾವಣೆ :  ಮೈಸೂರಿನಲ್ಲಿ  ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ : ವಿಜಯೇಂದ್ರ ಹೇಳಿಕೆ

ವಿಧಾನ ಪರಿಷತ್ ಚುನಾವಣೆ : ಮೈಸೂರಿನಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ : ವಿಜಯೇಂದ್ರ ಹೇಳಿಕೆ

ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ ಹಿಂದೂಪರ ಸಂಘಟನೆಗಳು, ಗಾಯಾಳುಗಳನ್ನ ನೋಡಲು ಈಶ್ವರಪ್ಪ ದೌಡು..!

ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ ಹಿಂದೂಪರ ಸಂಘಟನೆಗಳು, ಗಾಯಾಳುಗಳನ್ನ ನೋಡಲು ಈಶ್ವರಪ್ಪ ದೌಡು..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist