ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ಗೆ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ʻನಮ್ಮ ತಂದೆ ನನಗೆ ಒಂದು ಕಿವಿಮಾತು ಹೇಳಿದ್ದಾರೆ. ಒಬ್ಬನೇ ಮಗ ಇದ್ದೀಯಾ, ಧೈರ್ಯದಿಂದ ಇರು ಎಂದಿದ್ದಾರೆ. ಕಳೆದ 53 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ.

ನಾನು ಚಿಕ್ಕವನಿದ್ದಾಗ ತಾಯಿ, ತಂಗಿ, ಚಿಕ್ಕಪ್ಪನನ್ನು ಕಳೆದುಕೊಂಡೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ರಾಜ್ಯ ಅಭಿವೃದ್ಧಿ ಆಗಬೇಕೆಂದರೆ 40% ಸರ್ಕಾರ ತೆಗೆಯಬೇಕು. ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಕೇಳ್ತಾರೆ. ನಾವು 70 ವರ್ಷ ಏನು ಮಾಡದಿದ್ರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ದೇಶದ ಸ್ವತಂತ್ರ್ಯಕ್ಕಾಗಿ ಆರ್ಎಸ್ಎಸ್, ಬಿಜೆಪಿ ಹೋರಾಟ ಮಾಡಿಲ್ಲ. ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ನಾನಲ್ಲ. ನನ್ನನ್ನು ಯಾರೂ ಕೆಣಕಲ್ಲ, ಕೆಣಕಿದ್ರೆ ಉತ್ತರ ಕೊಡದೇ ಬಿಡಲ್ಲʼ ಅಂತ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಗೆ ಮಲ್ಲಿಕಾರ್ಜುನ ಖರ್ಗೆ ತಿಗುರೇಟು ನೀಡಿದ್ರು.