ರಾಯಚೂರು : ಕೆಆರ್ಪಿಪಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಇಂದು ರಾಯಚೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಅನ್ನೋದು ಇದೆಯಾ ಅಂತಾ ಪ್ರಶ್ನೆ ಮಾಡಿದ್ದಾರೆ.
ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಹರಿಹಾಯ್ದ ಜನಾರ್ಧನ ರೆಡ್ಡಿ, ಇಷ್ಟರವರೆಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವೇ ಇತ್ತು ಅಲ್ವಾ..? ಇಷ್ಟರವರೆಗೆ ಏನು ಅಭಿವೃದ್ಧಿ ಮಾಡಿದ್ದೀರಿ..? ಜನರಿಂದ ಸಿಳ್ಳೆ, ಚಪ್ಪಾಳೆ ಹೊಡೆಸಿಕೊಳ್ಳುವ ತಾಕತ್ತಿರುವ ಜನಾರ್ಧನ ರೆಡ್ಡಿಯನ್ನು ಮನೆಯಲ್ಲಿ ಕೂರಿಸಿದಿರಿ. ಯಡಿಯೂರಪ್ಪಗೆ ವಯಸ್ಸಾಯ್ತು ಅಂತಾ ಮೂಲೆಗೆ ತಳ್ಳಿದಿರಿ. ಅಡ್ವಾನಿಯನ್ನು ಮೂಲೆಗುಂಪು ಮಾಡಿದ್ರಿ. ಕೂರು ಎಂದರೆ ಕೂರುವ ನಿಲ್ಲು ಎಂದರೆ ನಿಲ್ಲುವ ನಾಯಕರನ್ನು ಇಟ್ಟುಕೊಂಡು ಬಿಜೆಪಿ ಸರ್ಕಾರ ನಡೆಸಿದೆ ಎಂದು ಕಿಡಿಕಾರಿದ್ದಾರೆ.
ಅಂದು ನಾನೇ ಯಡಿಯೂರಪ್ಪರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ ಸಚಿವನ ಸ್ಥಾನದಲ್ಲಿ ನಾನಿದ್ದೆ. ಆದರೆ ಇದೇ ಯಡಿಯೂರಪ್ಪರನ್ನು ಕೂರಿಸಿ ಬೊಮ್ಮಾಯಿ ಏನು ಸಾಧಿಸಿದರು..? ಚುನಾವಣೆ ನಂತರ ನಿಮ್ಮ ಯಾರ ಆಟವೂ ನಡೆಯೋದಿಲ್ಲ ಎಂದು ಗುಡುಗಿದ್ದಾರೆ .