• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕನ್ನಡದಲ್ಲೂ ಬರಲಿದೆ “ಜೋಜು ಜಾರ್ಜ್” ಅಭಿನಯದ ಮಲಯಾಳಂ ಚಿತ್ರ “ಪಣಿ” .

ಪ್ರತಿಧ್ವನಿ by ಪ್ರತಿಧ್ವನಿ
November 23, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ವಾಣಿಜ್ಯ, ವಿಡಿಯೋ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಹೊಂಬಾಳೆ ಫಿಲಂಸ್ (Hombale Films) ಮೂಲಕ ನವೆಂಬರ್ 29 ರಂದು ಕರ್ನಾಟಕದಲ್ಲಿ ಬಿಡುಗಡೆ .

ADVERTISEMENT

ಕಳೆದ ತಿಂಗಳು ಕೇರಳದಲ್ಲಿ ಬಿಡುಗಡೆಯಾದ ಜೋಜು ಜಾರ್ಜ್ ಅಭಿನಯದ ಮತ್ತು ನಿರ್ದೇಶನದ ‘ಪಣಿ’ ಚಿತ್ರವು ಕನ್ನಡಕ್ಕೆ ಡಬ್‍ ಆಗಿ ನ. 29ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಹೊಂಬಾಳೆ ಫಿಲಂಸ್ ಅವರು ಕರ್ನಾಟಕದಲ್ಲಿ ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಚಿತ್ರತಂಡದವರು ಪತ್ರಿಕಾಗೋಷ್ಠಿ ಆಯೋಜಿಸಿ ಹಲವು ವಿಷಯಗಳನ್ನು ಹಂಚಿಕೊಂಡರು.

Siddaramaiah: ಮಹಾರಾಷ್ಟ್ರದಲ್ಲಿ ನಮಗೆ ದೊಡ್ಡ ಹಿನ್ನಡೆಯಾಗಿದೆ ಎಂದ ಸಿಎಂ ಸಿದ್ದರಾಮಯ್ಯ..! #cpyogeshwar

ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದು ಮಾತನಾಡಿದ ಜೋಜು ಜಾರ್ಜ್, ಈ ಚಿತ್ರವು ಕಳೆದ ತಿಂಗಳು ಮಲಯಾಳಂನಲ್ಲಿ (Malayalam)ಬಿಡುಗಡೆಯಾಗಿದೆ. ಇದೀಗ ಕನ್ನಡಕ್ಕೆ ಡಬ್‍ ಆಗಿ ನ. 29 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲಂಸ್‍ (Hombale Films) ಸಂಸ್ಥೆಯು ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದೆ. ಇದೊಂದು ಮಾಸ್‍ ಮತ್ತು ಕಮರ್ಷಿಯಲ್‍ ಚಿತ್ರ (Commercial Film). ಕೇರಳದಲ್ಲಿ ಬಿಡುಗಡೆಯಾಗಿ ಯಶಸ್ವಿಯಗಿದೆ. ಸೇಡಿನ ಕಥೆಯಾದ್ದರಿಂದ, ಎಲ್ಲಾ ಕಡೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಕನ್ನಡದಲ್ಲೂ ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದರು ಎರಡು ವರ್ಷಗಳ ಕಾಲ ಚರ್ಚೆ ನಡೆಸಿ ಚಿತ್ರಕಥೆ ಮಾಡಿದ್ದೇವೆ. ಈ ಚಿತ್ರದಲ್ಲಿ ಸಾಕಷ್ಟು ಹೊಸಬರಿದ್ದಾರೆ. ಇದೊಂದು ಸರಳ ಕಥೆಯಾಗಿದ್ದು, ಅದನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಲಯಾಳಂನಲ್ಲಿ “ಪಣಿ” (Pani) ಎಂದರೆ ಕೆಲಸ ಎಂದರ್ಥ. ಈ ಹಿಂದೆ ನನ್ನ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ, ಯಶಸ್ವಿಯಾಗಿದೆ. ಈ ಚಿತ್ರ ಕೂಡ ಯಶಸ್ವಿಯಾಗಲಿದೆ ಎಂಬ ನಂಬಿಕೆ ಇದೆ.

ಈ ಹಿಂದೆ ‘ಹುಡುಗ್ರು’, ‘ಕಿಚ್ಚು’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಬಹಳ ದಿನಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ನಾನು ಜೋಜು ಜಾರ್ಜ್ ಅವರ ಅಭಿಮಾನಿ. ಅವರ ಜೊತೆಗೆ ನಟಿಸಬಹುದು ಎಂದು ಊಹಿಸಿರಲಿಲ್ಲ. ಈ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಿಕ್ಕೆ ನಾನು ಆಭಾರಿ. ಈ ಚಿತ್ರದಲ್ಲಿ ನಾನು ಜೋಜು ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕನ್ನಡದಲ್ಲಿ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಸಿನಿಮಾಗೆ ಯಾವುದೇ ಭಾಷೆಯ ಗಡಿ ಇಲ್ಲ. ಮುಂದೆ ಇಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದರು ನಟಿ ಅಭಿನಯ.

ಪತ್ರಿಕಾಗೋಷ್ಠಿಯಲ್ಲಿ ಸಾಗರ್ ಸೂರ್ಯ, ಜುನೈಜ್‍, ಬಾಬ್ಬಿ ಕುರಿಯನ್‍, ಅಭಯಾ ಹಿರಣ್ಮಯಿ, ರಂಜಿತ್‍ ವೇಲಾಯುಧನ್‍ ಮುಂತಾದವರು ಹಾಜರಿದ್ದರು. ಚಿತ್ರವು ಕನ್ನಡಕ್ಕೆ ಡಬ್‍ ಆಗುತ್ತಿರುವ ಸಂಭ್ರಮವನ್ನು ಹಂಚಿಕೊಂಡರು. ಚಿತ್ರವು ಕೇರಳದಲ್ಲಿ ಯಶಸ್ವಿಯಾದಂತೆ, ಕನ್ನಡದಲ್ಲೂ ಯಶಸ್ವಿಯಾಗುತ್ತದೆ ಎಂದು ಆಶಿಸಿದರು.

ಹೊಂಬಾಳೆ ಫಿಲಂಸ್ ವತಿಯಿಂದ ರಾಜೇಶ್‍ ಹಾಜರಿದ್ದು ಈ ಚಿತ್ರ ಕರ್ನಾಟಕದಲ್ಲಿ ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.

Tags: Abhaya HiranmayiHombale FilmsHombale MoviesJoju JargeJunaigeKannada movieKeralaMalayalamSagar SuryaVijay Kiraganduru
Previous Post

ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ, ನಿಖಿಲ್ ಕುಮಾರಸ್ವಾಮಿ..!!

Next Post

104 ಸೋಲುಂಡು ಬೇಸರದಲ್ಲಿದ್ದ ನಿಖಿಲ್‌ಗೆ G.T ದೇವೇಗೌಡ ಸಮಾಧಾನ

Related Posts

ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!
ವಿಶೇಷ

ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

by ಪ್ರತಿಧ್ವನಿ
April 15, 2026
0

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮೃತದೇಹಗಳ ಅಂತ್ಯಕ್ರಿಯೆಗಾಗಿ ಶವದಹನ ಅಥವಾ ಸಮಾಧಿ ಮಾಡುವ ಪದ್ಧತಿ ಸಾಮಾನ್ಯವಾಗಿದೆ. ಆದರೆ ಜಗತ್ತಿನ ಕೆಲವು ಭಾಗಗಳಲ್ಲಿ ಅಚ್ಚರಿ ಹುಟ್ಟಿಸುವ ರೀತಿಯ ವಿಭಿನ್ನ...

Read moreDetails
ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

April 15, 2026
ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

April 15, 2026
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
Next Post
104 ಸೋಲುಂಡು ಬೇಸರದಲ್ಲಿದ್ದ ನಿಖಿಲ್‌ಗೆ G.T ದೇವೇಗೌಡ ಸಮಾಧಾನ

104 ಸೋಲುಂಡು ಬೇಸರದಲ್ಲಿದ್ದ ನಿಖಿಲ್‌ಗೆ G.T ದೇವೇಗೌಡ ಸಮಾಧಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada