ಮಹಾರಾಷ್ಟ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ(VAT) ಪ್ರತಿ ಲೀಟರ್ ಪೆಟ್ರೋಲ್ಗೆ 5 ಹಾಗೂ ಡೀಸೆಲ್ 3 ರೂಪಾಯಿ ಕಡಿತಗೊಳಿಸಿದೆ.
ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 6 ಸಾವಿರ ಕೋಟಿಗಳಷ್ಟು ಹೆಚ್ಚುವರಿ ಹೊರೆಯಾಗಲಿದೆ ಎಂದು ಮಂತ್ರಾಲಯದಲ್ಲಿ ನಡೆದ ಸಂಪುಟ ಸಬೆಯ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಈ ನಿರ್ಧಾರವು ಶಿವಸೇನೆ ಹಾಗು ಬಿಜೆಪಿ ನೇತೃತ್ವದ ಮೃತ್ರಿ ಸರ್ಕಾರದ ಬದ್ದತೆಯ ಭಾಗವಾಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಣ್ಣಿಸಿದ್ದಾರೆ.
