ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (chinnaswamy stadium) ನಡೆಯುತ್ತಿರುವ ಆರ್ಸಿಬಿ (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಿನ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ತಮ್ಮ ಬ್ಯುಸಿ ಷೆಡ್ಯೂಲ್ ನ ನಡುವೆಯೂ ಐಪಿಎಲ್ (IPL) ಪಂದ್ಯ ವೀಕ್ಷಿಸಲು ಸಿಎಂ ಸಿದ್ದರಾಮಯ್ಯ (Cm siddaramaiah) ಚಿನ್ನಸ್ವಾಮಿ ಸ್ಟೇಡಿಯಂ ಗೆ ಆಗಮಿಸಿದ್ದಾರೆ.

ದಿನ ನಿತ್ಯದ ರಾಜ್ಯ ರಾಜಕೀಯದ ಜಂಜಾದ, ಕೆಲಸದ ಒತ್ತಡದ ನಡುವೆಯೂ ಸಿಎಂ ಸಿದ್ದರಾಮಯ್ಯ RCB ಪಂದ್ಯ ವೀಕ್ಷಿಸಲು ಆಸಕ್ತಿ ತೋರಿದ್ದು ಖುದ್ದು ಸ್ಟೇಡಿಯಂ ನಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಸಚಿವ ಕೆ.ಎನ್ ರಾಜಣ್ಣ, ಸಚಿವ ಭೈರತಿ ಸುರೇಶ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿದರಾಜ್ ಸಾಥ್ ನೀಡಿದ್ದು ಸದ್ಯ ಸಿದ್ದು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.ಈ ಹಿಂದೆಯೂ ಕೆಲ ಸಂದರ್ಭಗಳಲ್ಲಿ ಸಿಎಂ ಸಿದ್ದರಾಮಯ್ಯ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.