ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಮಾಜಿ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಶಂಕಿತ ಉಗ್ರರನ್ನು ಬಿಹಾರದಲ್ಲಿ ಬಂಧಿಸಲಾಗಿದೆ.
೨೦೪೭ರ ಹೊತ್ತಿಗೆ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಬೇಕು ಎಂಬ ಪಣತೊಟ್ಟ ಈ ಇಬ್ಬರು ಶಂಕಿತ ಉಗ್ರರು ಜುಲೈ 12ರಂದು ಬಿಹಾರಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ,
ಪುಲ್ವಾರಿ ಶೆರಿಫ್ ಬಳಿ ಈ ಇಬ್ಬರು 15 ದಿನಗಳ ತರಬೇತಿ ಪಡೆದಿದ್ದರು. ಜುಲೈ 6ಮತ್ತು 7ರಂದು ಪ್ರಧಾನಿ ಹತ್ಯೆ ಕುರಿತು ಚರ್ಚೆ ನಡೆಸಿದ್ದರು. ಶಂಕಿತ ಉಗ್ರರು ಇದ್ದಾರೆ ಎಂಬ ಮಾಹಿತಿ ಆಧಾರಿ ಲಕ್ನೋ ಪೊಲೀಸರು ಪಲ್ವಾರಿ ಶೆರಿಫ್ ಮೇಲೆ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
2047ರಲ್ಲಿ ಭಾರತ ಇಸ್ಲಾಂ ರಾಷ್ಟ್ರವಾಗುತ್ತ ಎಂಬ ತಲೆಹರಹ ಇರುವ ಬರಹಗಳು ಹಾಗೂ ೨೫ ಪಿಎಫ್ ಐ ಕರಪತ್ರಗಳು ಪತ್ತೆಯಾಗಿವೆ.






