
ತುಮಕೂರು:ಮಹಿಳೆಯೊಂದಿಗೆ ಅಸಭ್ಯ ವರ್ತನೆ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್ಪಿಗೆ ಮಧುಗಿರಿ JMFC ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ಘೋಷಿಸಿದೆ.

ದೂರು ನೀಡಲು ಬಂದ ಮಹಿಳೆಯೊಂದಿಗೆ ಕಚೇರಿಯಲ್ಲಿಯೇ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಬಂನಕ್ಕೊಳಗಾಗಿರುವ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅವರನ್ನು ಶನಿವಾರ ಸಂಜೆ 4 ಗಂಟೆಗೆ ಪೊಲೀಸರು ಕೊರ್ಟ್ಗೆ ಹಾಜರುಪಡಿಸಿದ್ದರು.ಲೈಂಗಿಕ ದೌರ್ಜನ್ಯದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ನಂತರ ಸೇವೆಯಿಂದ ಅಮಾನತು ಮಾಡಲಾಗಿತ್ತು.
ನಂತರ ಮಧುಗಿರಿ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದರು.ಶುಕ್ರವಾರ ರಾತ್ರಿ ಬಂಧಿಸಿದ್ದ ಪೊಲೀಸರು ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.ನ್ಯಾಯಾಂಗ ಬಂಧನ ಆದೇಶದ ನಂತರ ತಾಲ್ಲೂಕು ಉಪ ಕಾರಾಗೃಹಕ್ಕೆ ಕಳುಹಿಸಲಾಯಿತು.ಪ್ರಧಾನ ಹಿರಿಯ ನ್ಯಾಯಾಧೀಶೆ ಪ್ರೇಮಿಳಾ ಅವರು ಪ್ರಕರಣದ ವಿಚಾರಣೆ ನಡೆಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನದ ತೀರ್ಪು ನೀಡಿದ್ದಾರೆ.ಕೋರ್ಟ್ನಲ್ಲಿ ಡಿವೈಎಸ್ಪಿ ರಾಮಚಂದ್ರಪ್ಪ ಪರವಾಗಿ ಹಿರಿಯ ವಕೀಲ ರಘುನಾಥ್ ರೆಡ್ಡಿ ವಾದ ಮಂಡಿಸಿದರು. ಸಂತ್ರಸ್ತೆ ಪರವಾಗಿ ತಕಾರಾರು ಮಂಡಿಸಲು ಜನವರಿ 7ರ ವರೆಗೆ ಗಡುವು ನೀಡಲಾಗಿದೆ.






