• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಲವ್‌ ಜಿಹಾದ್‌ ನಿಲ್ಲಬೇಕಾದರೆ, ಭಾರತ ಹಿಂದೂರಾಷ್ಟ್ರವಾಗಬೇಕು: ಕೇರಳ ಶಾಸಕ PC ಜಾರ್ಜ್

by
April 14, 2021
in Uncategorized, ದೇಶ
0
ಲವ್‌ ಜಿಹಾದ್‌ ನಿಲ್ಲಬೇಕಾದರೆ, ಭಾರತ ಹಿಂದೂರಾಷ್ಟ್ರವಾಗಬೇಕು: ಕೇರಳ ಶಾಸಕ PC ಜಾರ್ಜ್
Share on WhatsAppShare on FacebookShare on Telegram

ವಿವಾದಾಸ್ಪದ ಹೇಳಿಕೆಗಳಿಂದಲೇ ಸಾಕಷ್ಟು ಸುದ್ದಿಯಾಗುವ ಕೇರಳದ ಪೂಂಜಾರ್‌ ಕ್ಷೇತ್ರದ ಶಾಸಕ ಪಿ ಸಿ ಜಾರ್ಜ್‌, ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾರೆ.

ADVERTISEMENT

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ ಪಿಸಿ ಜಾರ್ಜ್‌, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೇರಳದ ಎರಡು ಪ್ರಮುಖ ಪ್ರತಿಸ್ಪರ್ಧಿ ಮೈತ್ರಿಗಳಾದ ಎಡ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳು ಭಯೋತ್ಪಾದಕರೊಂದಿಗೆ ಕೈಜೋಡಿಸಿವೆ ಎಂದು ಹೇಳಿದ್ದಾರೆ. ಈ ಎರಡೂ ಮೈತ್ರಿಕೂಟಗಳು ಭಯೋತ್ಪಾದಕರ ಪಟ್ಟಭದ್ರ ಹಿತಾಸಕ್ತಿಯನ್ನು ಕಾಪಾಡುತ್ತಿವೆ ಎಂದು ಆರೋಪಿಸಿದ್ದಾರೆ.

HRDS (Human Resource Development Society) ಎಂಬ ಎನ್‌ಜಿಒ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಿಸಿ ಜಾರ್ಜ್‌, ನರೇಂದ್ರ ಮೋದಿ ಅವರು 2016 ರಲ್ಲಿ ನೋಟು ನಿಷೇಧಗೊಳಿಸಿದ್ದರಿಂದ ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆ ಭಾರತದಲ್ಲಿ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ, 2030 ಕ್ಕೆ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವಾಗಿಸಬೇಕೆಂಬ ಷಡ್ಯಂತ್ರ ಇನ್ನೂ ಮುಂದಕ್ಕೆ ಹೋಗಿದೆ. ಅದಕ್ಕಾಗಿ ನರೇಂದ್ರ ಮೋದಿಯವರನ್ನು ಶ್ಲಾಘಿಸಬೇಕು ಎಂದಿದ್ದಾರೆ.

ಸುಪ್ರಿಂ ಕೋರ್ಟ್‌ ಲವ್‌ ಜಿಹಾದ್‌ ಇಲ್ಲ ಎಂದಿದೆ, ಆದರೆ ನನಗೆ ಗೊತ್ತು. ಲವ್‌ ಜಿಹಾದ್‌ ಇದೆ ಎಂದು. ಸುಪ್ರೀಂ ಕೋರ್ಟ್‌ ಹೇಳಿರುವುದು ತಪ್ಪು ಎಂದು ಹೇಳಿದ್ದೇನೆ. ಕೋರ್‌ಟ್‌ ಏನು ಮಾಡುತ್ತೆ? ಎಂದು ಪ್ರಶ್ನಿಸಿದ ಜಾರ್ಜ್‌, ಈ ನಡೆಗೆ ಅಂತ್ಯ ನೀಡಬೇಕಾದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕು ಎಂದು ಹೇಳಿರುವುದು ವಿವಾದವಾಗುತ್ತದೆ. ಆದರೆ, ಅದನ್ನು ನಾನು ಎದುರಿಸುತ್ತೇನೆ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಮ್ಮದು ಜಾತ್ಯಾತೀತ, ಸಮಾಜವಾದದ ಆಡಳಿತ ವ್ಯವಸ್ಥೆ. ಹಾಗಾಗಿ, ಅಲ್ಲಿ ಲವ್‌ ಜಿಹಾದ್‌ನಂತಹ ಕೃತ್ಯಗಳಿಗೆ ಅವಕಾಶವಿದೆ. ಇದಕ್ಕೆ ತಡೆ ನೀಡಬೇಕಿದ್ದರೆ, ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲೇ ಬೇಕು ಎಂದಿದ್ದಾರೆ.

ಏಳನೇ ಬಾರಿ ಶಾಸಕರಾಗಿರುವ ಪಿಸಿ ಜಾರ್ಜ್‌, ಈ ಹಿಂದೆ ಹಲವು ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಚರ್ಚ್‌ ಪಾದ್ರಿಯಿಂದ ಅತ್ಯಾಚಾರಕ್ಕೊಳಗಾಗಿದ್ದ ಕ್ರೈಸ್ತ ಸನ್ಯಾಸಿನಿಯನ್ನು  ಅವಮಾನಗೊಳಿಸಿ ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದರು.‌ 12 ಬಾರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿ, 13 ನೇ ಬಾರಿ ಅತ್ಯಾಚಾರವೆಂದು ದೂರು ದಾಖಲಿಸಿದ್ದಾರೆ. ಆಕೆಯೊಬ್ಬ ವೇಶ್ಯೆ ಎಂದು ಸಂತ್ರಸ್ತೆಯನ್ನು ಅಪಮಾನಿಸಿದ್ದರು. ಅದಾದ ಬಳಿಕ ಮಹಿಳಾ ಆಯೋಗಕ್ಕೆ ಬೆದರಿಕೆ ಹಾಕಿಯೂ ಉದ್ಧಟತನ ತೋರಿಸಿದ್ದರು. ಶಾಸಕರ ಹಾಸ್ಟೆಲ್‌ನ ಉದ್ಯೋಗಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದ ಅವರು, ಮಹಿಳಾ ನಿಂದಕ ಹೇಳಿಕೆ ನೀಡಿ ಸಾಕಷ್ಟು ಬಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.

Previous Post

ಲಾಕ್‌ಡೌನ್‌ ಹೇರುವಂತಹ ಪರಿಸ್ಥಿತಿ ನಿರ್ಮಿಸಬೇಡಿ: ರಾಜ್ಯದ ಜನರಿಗೆ ಸರ್ಕಾರದ ಎಚ್ಚರಿಕೆ

Next Post

ಕೆ ಆರ್ ಎಸ್ ಪಕ್ಷದ ‘ಒಂದು ಓಟು ಒಂದು ನೋಟು’ ಅಭಿಯಾನಕ್ಕೆ ಮಹಿಮಾ ಪಟೇಲ್ ದೇಣಿಗೆ

Related Posts

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ
Uncategorized

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

by ಪ್ರತಿಧ್ವನಿ
April 29, 2026
0

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ‘ಸಾಧನಾ ಸೌರಭ’ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಪತ್ರಕರ್ತ ದಿವಂಗತ ರವಿ ಬೆಳೆಗೆರೆ ಕುರಿತು ತೀವ್ರ...

Read moreDetails
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ಕೆ ಆರ್ ಎಸ್ ಪಕ್ಷದ ‘ಒಂದು ಓಟು ಒಂದು ನೋಟು’ ಅಭಿಯಾನಕ್ಕೆ ಮಹಿಮಾ ಪಟೇಲ್ ದೇಣಿಗೆ

ಕೆ ಆರ್ ಎಸ್ ಪಕ್ಷದ ‘ಒಂದು ಓಟು ಒಂದು ನೋಟು’ ಅಭಿಯಾನಕ್ಕೆ ಮಹಿಮಾ ಪಟೇಲ್ ದೇಣಿಗೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada