ಕೇರಳದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬದಲು ಕರ್ನಾಟಕದಿಂದ ಸ್ಪರ್ಧಿಸಲು ಎಡಪಕ್ಷಗಳು ರಾಹುಲ್ ಗಾಂಧಿಯವರಿಗೆ ಸಲಹೆ ನೀಡಿವೆ.
ಮೂರು ರಾಜ್ಯಗಳಲ್ಲಿನ ಸೋಲಿನ ತಪ್ಪುಗಳನ್ನು ತಿದ್ದಿಕೊಳ್ಳಿ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕಾಂಗ್ರೆಸ್ಗೆ ಹೇಳಿದ ಬೆನ್ನಲ್ಲೇ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್, ಸಿಪಿಐ ನಾಯಕ ಮತ್ತು ಕೇರಳ ಕಂದಾಯ ಸಚಿವ ಕೆ.ರಾಜನ್ ಅವರು ಈ ಬಗ್ಗೆ ಸೋಮವಾರ ಬಹಿರಂಗ ಹೇಳಿಕೆ ನೀಡಿದ್ದಾರೆ.
2023ರ ಲೋಕಸಭೆ ಚುನಾವಣೆಯಲ್ಲೂ ರಾಹುಲ್ ಗಾಂಧಿಯವರು ವಯನಾಡ್ನಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ವಯನಾಡ್ ನಿಂದ ನಿಲ್ಲಬೇಡಿ ಎಂದು ಎಡ ಪಕ್ಷಗಳು ವಿರೋಧಿಸಿದ್ದವು. ವಯನಾಡ್ ಮುಸ್ಲಿಂ ಬಾಹುಳ್ಯದ ಕ್ಷೇತ್ರವಾಗಿರುವ ಕಾರಣ ಇದನ್ನೇ ಕಾಂಗ್ರೆಸ್ ಅಯ್ಕೆ ಮಾಡುತ್ತಿದೆ ಎಂದು ಆರೋಪಿಸಿದೆ., ಎಡಪಕ್ಷಗಳು ಬೇರೆ ಕಡೆಗೆ ಕ್ಷೇತ್ರ ನೋಡುವಂತೆ ರಾಹುಲ್ ಗಾಂಧಿಗೆ ಸಲಹೆ ನೀಡಿದೆ. ಈ ಮೂಲಕ ಐಎನ್ಡಿಐಎನಲ್ಲಿ ಒಡಕು ಇರುವುದನ್ನು ಬಹಿರಂಗ ಮಾಡಿವೆ.

3 ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿರುವುದರಿಂದ ಕೆಲವು INDIA ಪಕ್ಷಗಳ ವರಸೆ ಬದಲಾಗಿದೆ. ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರ ಆರಿಸಿಕೊಳ್ಳುವಂತೆ ಎಡ ಪಕ್ಷಗಳು ರಾಹುಲ್ ಗಾಂಧಿಗೆ ಸಲಹೆ ನೀಡಿವೆ ಎನ್ನಲಾಗುತ್ತಿದೆ.