ನಾಗಮಂಗಲದಲ್ಲಿ (Nagamangala) ನಡೆದ ಗಲಭೆಗೆ ಸಂಬಂಧಪಟ್ಟಂತೆ ಬಿಜೆಪಿ (Bjp) ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಒಂದು ಹೆಜ್ಜೆ ಮುಂದೆ ಹೋಗಿ ಕಿಡಿ ಹೊತ್ತಿಸುವ ಹೇಳಿಕೆ ಕೊಟ್ಟಿದ್ದಾರೆ.
ಹಿಂದೂಗಳು ಶಾಂತಿಯುತವಾಗಿ ಗಣೇಶನ ಮೆರಣಿಗೆ ನಡೆಸುವ ಸಂದರ್ಭದಲ್ಲಿ ಕೂಡ ಈ ರೀತಿಯ ಘಟನೆಗಳು ನಡೆಯುತ್ತಿವೆ. ಗಣೇಶ ಮೆರೆವಣಿಗೆ ಮೇಲೆ ಪೆಟ್ರೋಲ್ ಬಾಂಬ್ (Petrol bomb) ಎಸೆಯಲಾಗಿದೆ, ಮತಾಂದರು ತಲ್ವಾರ್‌ಗಳನ್ನು ಹಿಡಿದು ಝಳಪಿಸಿದ್ದಾರೆ. ಇದು ಹೀಗೆ ಮುಂದುವರೆದಲ್ಲಿ ಹಿಂದೂಗಳು (Hindu) ತಲ್ವಾರ್ ಹಿಡಿಯಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಹೌದು, ಈ ರೀತಿಯ ಘಟನೆಗಳು ಮುಂದುವರೆದರೆ, ಹಿಂದೂಗಳು ಕೂಡ ಆತ್ಮ ರಕ್ಷಣೆಗಾಗಿ, ಪೆಟ್ರೋಲ್ ಬಾಂಬ್ ಎಸೆಯುವುದು, ತಲ್ವಾರ್ ಹಿಡಿಯಲು ಸನ್ನಧರಾಗಬೇಕು ಎಂದು ಪ್ರತಾಪ್ ಸಿಂಹ ಹಿಂದೂಗಳಿಗೆ ಕರೆ ಕೊಟ್ಟಿದ್ದಾರೆ