• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟೆನಿಸ್ ಆಟಗಾರ್ತಿ ಶಿಲ್ಪಾರಂತೆ ಮಂಡ್ಯ ನೆಲದಿಂದ ಇನ್ನಷ್ಟು ಪ್ರತಿಭೆಗಳು ಹೊರಬರಲಿ : ಮನ್ಸುಖ್‌ ಮಾಂಡವೀಯ ಕರೆ..

ಕ್ರೀಡಾ ಮೂಲಭೂತ ಸೌಲಭ್ಯಕ್ಕೆ ಬಜೆಟ್ ನಲ್ಲಿ 4000 ಕೋಟಿ ರೂಪಾಯಿ ಮೀಸಲಿಟ್ಟ ಮೋದಿ ಸರ್ಕಾರ, ಖೇಲೋ ಇಂಡಿಯಾ! ವೈಬ್ರೆಂಟ್ ಮಂಡ್ಯ' ನಿನಾದಕ್ಕೆ ಮಂತ್ರಿದ್ವಯರ ಚಾಲನೆ..

ಪ್ರತಿಧ್ವನಿ by ಪ್ರತಿಧ್ವನಿ
March 14, 2026
in Top Story, ಇದೀಗ, ಕರ್ನಾಟಕ, ಕ್ರೀಡೆ, ದೇಶ, ರಾಜಕೀಯ
0
ಟೆನಿಸ್ ಆಟಗಾರ್ತಿ ಶಿಲ್ಪಾರಂತೆ ಮಂಡ್ಯ ನೆಲದಿಂದ ಇನ್ನಷ್ಟು ಪ್ರತಿಭೆಗಳು ಹೊರಬರಲಿ : ಮನ್ಸುಖ್‌ ಮಾಂಡವೀಯ ಕರೆ..
Share on WhatsAppShare on FacebookShare on Telegram

ಮಂಡ್ಯ : ಖೇಲೋ ಇಂಡಿಯಾ ಯೋಜನೆಯು ಭಾರತದ ತಳಮಟ್ಟದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿ ರೂಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದು ಭಾರತ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ.

ADVERTISEMENT
Podcast with farmer Kurubur Shanthakumar :ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ*.!

ಜಿಲ್ಲೆಯಲ್ಲಿಂದು ವಿಸಿ ಫಾರಂನಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಡ್ಯಕ್ಕೆ ಮಂಜೂರಾಗಿರುವ 14 ಕೋಟಿ ರೂಪಾಯಿ ವೆಚ್ಚದ  ನೂತನ ಕ್ರೀಡಾಂಗಣಕ್ಕೆ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜೊತೆಯಾಗಿ ಭೂಮಿಪೂಜೆ ನೆರವೇರಿಸಿ ಅಡಿಗಲ್ಲು ಹಾಕಿ ಮಾತನಾಡಿದರು.

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳು ಹಾಗೂ ಎನ್‌ಡಿಎ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪರಿಶ್ರಮದಿಂದ ಮಂಡ್ಯದಲ್ಲಿ ಈ ಸುಸಜ್ಜಿತ ಕ್ರೀಡಾಂಗಣ ಬರುತ್ತಿದೆ. ಕುಮಾರಸ್ವಾಮಿ ಅವರೇ, ಜನರಿಗಾಗಿ ನೀವು ಮಾಡಿರುವ ಕೆಲಸವು ಜನರು ನಿಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಯಲ್ಲಿಯೇ ಕಾಣುತ್ತಿದೆ ಎಂದು ಕುಮಾರಸ್ವಾಮಿಯವರನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : ಕಲರ್ಸ್‌ ಕನ್ನಡದಲ್ಲಿ ಅಮ್ಮ-ಮಗಳ ಭಾವುಕ ಪಯಣದ ʻರಾಣಿʼ ಆರಂಭ; ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ನಿಮ್ಮ ಮನಗೆಲ್ಲಲು ಬರ್ತಿದೆ ಹೊಸ ಕತೆ

ವಿಶೇಷಚೇತನರ ಬಗ್ಗೆ ನೀವು ಹೊಂದಿರುವ ಮಮತೆ, ಬದ್ಧತೆಯನ್ನು ನಾನು ಕಣ್ಣಾರೆ ನೋಡುತ್ತಿದ್ದೇನೆ. ನನಗೆ ಬಹಳ ಸಂತೋಷ ಉಂಟು ಮಾಡಿದೆ. ನೀವು ಮಾಡುತ್ತಿರುವ ಈ ಕೆಲಸ ಅಭಿನಂದನಾರ್ಹ, ನೀವು ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಮೂಲಕ ವಿಕಲಚೇತನರಿಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಪರಿಸರಕ್ಕೆ ಕೂಡ ಒಳ್ಳೆಯದು ಮಾಡುತ್ತಿದ್ದೀರಿ ಎಂದು ಮಾಂಡವೀಯ ಬಣ್ಣಿಸಿದ್ದಾರೆ.

ಮಂಡ್ಯ ನೆಲದಿಂದ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳು ಬಂದಿದ್ದಾರೆ. ಆ ಪೈಕಿ ನಾನು ವಿಕಾಸಗೌಡ, ಕೆ.ಆರ್. ಶಿಲ್ಪಾ ಅವರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಇಂತಹ ಅನೇಕ ಕ್ರೀಡಾಪಟುಗಳು ಮಂಡ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ಮುಖ್ಯವಾಗಿ ವೀಲ್ ಚೇರ್ ಟೆನಿಸ್ ಆಟಗಾರ್ತಿ, ಭಾರತ ನಂಬರ್ ಒನ್ ವೀಲ್ ಚೇರ್ ಟೆನಿಸ್ ಆಟಗಾರ್ತಿ ಆಗಿರುವ ಶಿಲ್ಪಾ ಅವರು ಭಾರತದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗುತ್ತಿದ್ದಾರೆ. ಇಂತಹ ಅಸಂಖ್ಯಾತ ಪ್ರತಿಭೆಗಳು ಇಲ್ಲಿಂದ ಬರಬೇಕು ಎಂದು ಮಾಂಡವೀಯ ಮಂಡ್ಯದ ಪ್ರತಿಭೆಗಳ ಗುಣಗಾಣ ಮಾಡಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ಹನ್ನೊಂದು ವರ್ಷಗಳಲ್ಲಿ ಕ್ರೀಡಾ ಪೂರಕ ವ್ಯವಸ್ಥೆ ಹೆಚ್ಚಿಸಲು ಗಮನಾರ್ಹ ಕೆಲಸ ಮಾಡಿದೆ. ಕಳೆದ ಬಜೆಟ್ ನಲ್ಲಿ ಕ್ರೀಡಾ ಮೂಲಸೌಕರ್ಯ ವೃದ್ಧಿಗೆ 4,000 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಹತ್ತು ವರ್ಷಗಳ ಹಿಂದೆ ಈ ಉದ್ದೇಶಕ್ಕೆ ಕೇವಲ 1200 ಕೋಟಿ ಮಾತ್ರ ಕೊಡಲಾಗುತ್ತಿತ್ತು. ಅದರ ಪ್ರಮಾಣ ಈಗ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದು ಕೇಂದ್ರ ಸಚಿವ ಮಾಂಡವೀಯ ಒತ್ತಿ ಹೇಳುವ ಮೂಲಕ ಕಾಂಗ್ರೆಸ್‌ ಕುಟುಕಿದ್ದಾರೆ.

Tags: BJP MPGovernment of IndiaH D KumaraswamyHandicapJDS KarnatakaKhelo India missionKhelo India vibrant Mandyamandya newsMandya StadiumMansukh MandaviyaNarendra Modinational newsNDA alliancePorbandar MPPratidhvaniSports FacilitiesTennis Player ShilpaUnion MinisterUnion Steel MinisterYouth Affairs and Sports Minister
Previous Post

ದ್ರಾವಿಡ್ ಸೇರಿದಂತೆ ಮೂವರಿಗೆ ಬಿಸಿಸಿಐ ಜೀವಮಾನ ಸಾಧನೆಯ ಪ್ರಶಸ್ತಿ ಗರಿ..

Next Post

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಜ್ಯೋತಿಷಿ ವೇಣುಸ್ವಾಮಿ

Related Posts

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ
Top Story

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ: ಹಿರೇಬಾಗೇವಾಡಿಯಲ್ಲಿ ಪಂಜಿನ ಮೆರವಣಿಗೆ, ರಸ್ತೆ ತಡೆ ಪ್ರತಿಭಟನೆ

by ಪ್ರತಿಧ್ವನಿ
August 6, 2026
0

ಬೆಳಗಾವಿ: ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಬುಧವಾರ ಸಂಜೆ...

Read moreDetails
‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

August 6, 2026
ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

August 6, 2026
ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

August 5, 2026
ನೂತನ ಸಚಿವರು, ಶಾಸಕರಿಗೆ ಕೊಠಡಿ ಹಂಚಿಕೆ: ಯಾರು ಯಾವ ರೂಮ್ ಪಡೆದರು? ಇಲ್ಲಿದೆ ಸಂಪೂರ್ಣ ಪಟ್ಟಿ

ನೂತನ ಸಚಿವರು, ಶಾಸಕರಿಗೆ ಕೊಠಡಿ ಹಂಚಿಕೆ: ಯಾರು ಯಾವ ರೂಮ್ ಪಡೆದರು? ಇಲ್ಲಿದೆ ಸಂಪೂರ್ಣ ಪಟ್ಟಿ

August 5, 2026
Next Post
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಜ್ಯೋತಿಷಿ ವೇಣುಸ್ವಾಮಿ

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಜ್ಯೋತಿಷಿ ವೇಣುಸ್ವಾಮಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada