• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕರೋನ 3ನೇ ಅಲೆ: 2ನೇ ಅಲೆಯಲ್ಲಿ ಕಲಿತ ಪಾಠಗಳನ್ನು ಸರ್ಕಾರ ಈಗ ಕಾರ್ಯರೂಪಕ್ಕೆ ತರದಿದ್ದರೆ ಮತ್ತಷ್ಟು ಸಾವು ನೋವು.!

Any Mind by Any Mind
June 20, 2021
in ಕರ್ನಾಟಕ, ದೇಶ, ರಾಜಕೀಯ
0
ಕರೋನ 3ನೇ ಅಲೆ: 2ನೇ ಅಲೆಯಲ್ಲಿ ಕಲಿತ ಪಾಠಗಳನ್ನು ಸರ್ಕಾರ ಈಗ ಕಾರ್ಯರೂಪಕ್ಕೆ ತರದಿದ್ದರೆ ಮತ್ತಷ್ಟು ಸಾವು ನೋವು.!
Share on WhatsAppShare on FacebookShare on Telegram

ಕಳೆದ 24 ಗಂಟೆಗಳಲ್ಲಿ ಭಾರತ ಸುಮಾರು 62,000 ಹೊಸ ಕರೋನ ಪಾಸಿಟಿವ್ ವರದಿಯಾಗಿದೆ ಮತ್ತು ಎರಡು ತಿಂಗಳಲ್ಲಿ ಇದೆ ಮೊದಲು ಕನಿಷ್ಠ 1,587 ಸಾವುಗಳನ್ನು ವರದಿ ಮಾಡಿದೆ. ಮುಂಬೈ ಮತ್ತು ನವದೆಹಲಿಯಂತಹ ನಗರಗಳಲ್ಲಿ ಕರೋನ ಪಾಸಿಟಿವಿಟಿ ರೇಟ್ ಕಡಿಮೆಯಾದ ಪರಿಣಾಮ ತಮ್ಮ ಕಠಿಣ ಲಾಕ್‌ಡೌನ್‌ಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಆದರೆ ಕಳೆದ ಎರಡು ತಿಂಗಳುಗಳಲ್ಲಿ ಹತ್ತಾರು ಜನರನ್ನು ಕೊಂದ ಮತ್ತು ಆರೋಗ್ಯ ಮೂಲಸೌಕರ್ಯವನ್ನು ಧ್ವಂಸಗೊಳಿಸಿದ ಸಾಂಕ್ರಾಮಿಕ ಉಲ್ಬಣದಿಂದ ಹೊರಬಂದ ಭಾರತವು ಮೂರನೇ ಅಲೆ ದೇಶವನ್ನು ಮತ್ತೊಮ್ಮೆ ದುರ್ಬಲಗೊಳಿಸುವ ಸಾಧ್ಯತೆಗಳೆ ಹೆಚ್ಚು.

ADVERTISEMENT

ದೆಗಲಿ, ಮಹಾರಾಷ್ಟ್ರ, ಹೈದರಾಬಾದ್ ನಿಂದ ಬೆಂಗಳೂರಿನವರೆಗೂ ಎಲ್ಲಾ ಆಡಳಿತ ಸರ್ಕಾರ ವ್ಯಾಪಾರ, ವ್ಯವಹಾರ, ಆರ್ಥಿಕ ಚಟುವಟಿಕೆಗಳನ್ನು ಮತ್ತೆ ಪುನಾರಂಭಗೊಳಿಸುವ ಮೊದಲು ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಕೇವಲ ಒಂದೇ ಒಂದು ತಿಂಗಳ ಹಿಂದೆ ಕಂಡ ಹೃದಯ ವಿದ್ರಾವಕ ದೃಶ್ಯಗಳನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಮರೆಯಬಾರದು. ಜನರು ತಮ್ಮ ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್‌ಗಳಿಗಾಗಿ ಪರದಾಡಿದ್ದನ್ನು, ಆಸ್ಪತ್ರೆಗಳು ಹಾಸಿಗೆಗಳಾಗಿ ಗೋಗರಿದದನ್ನು. ಆಕ್ಸಿಜನ್ ಇಲ್ಲದೆ ಸಾಲು ಸಾಲು ಹೆಣಗಳು ಬಿದ್ದಿದ್ದನ್ನು, ಐಸಿಯು ಬೆಡ್ ಸಿಗದೆ ಸಾವಿರಾರು ಜನ ಸತ್ತಿದ್ದನ್ನು ಮರೆಯಬಾರದು.

ಇಡೀ ದೇಶವನ್ನು ಆವರಿಸಿರುವ ಒಂದು ಅಲೆಯಾಗಿದ್ದು, ಆ ಅನುಭವದಿಂದ ಕಲಿತ ಪಾಠಗಳನ್ನು ಈಗ ಕಾರ್ಯರೂಪಕ್ಕೆ ತರಬೇಕಾಗಿದೆ.

ಬ್ರೆಜಿಲ್ ಜೊತೆ ಭಾರತವು ಏಳು ದಿನಗಳ ದೈನಂದಿನ ಸರಾಸರಿ ಸಾವುಗಳನ್ನು ವರದಿ ಮಾಡುವ ದೇಶಗಳಲ್ಲಿ ಒಂದಾಗಿದೆ. ಉದಾಹರಣೆಗೆ, ಮಹಾರಾಷ್ಟ್ರದ 9,830 ಹೊಸ ಸೋಂಕಿನ ಸಂಖ್ಯೆ ಭಾರತದ ಒಟ್ಟು 29.76 ಮಿಲಿಯನ್ ಸೋಂಕುಗಳಲ್ಲಿ ಐದನೇ ಒಂದು ಭಾಗವಾಗಿದೆ ಮತ್ತು ಅದರ ಸಾವಿನ ಸಂಖ್ಯೆ 116,000 ಕ್ಕಿಂತ ಹೆಚ್ಚಿರುವುದನ್ನು ಕಾಣಬಹುದು.

ಆದ್ದರಿಂದ ಮೂರನೇ ಅಲೆ ದೇಶಾದ್ಯಂತ ಹರಡುವುದನ್ನು ತಪ್ಪಿಸಬೇಕಾದರೆ ಅಥವಾ ಹೆಚ್ಚು ಹೊಡೆತಗಳಿಂದ ತಪ್ಪಿಸಿಕೊಳ್ಳಬೇಕಾದರೆ, ಸ್ಪಷ್ಟವಾದ ಸಾಂಕ್ರಾಮಿಕ ನಿರ್ವಹಣಾ ಯೋಜನೆಯನ್ನು ಸಿದ್ದಪಡಿಸಿಕೊಳ್ಳುವುದು ಈ ಸಮಯದ ಅತ್ಯಗತ್ಯವಾಗಿದೆ ಮತ್ತು ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ವೃತ್ತಿಪರರು ಮುಂದಿನ ಅಲೆಯನ್ನು ಸಾಧ್ಯವಾದಷ್ಟು ತಡೆಗಟ್ಟುವ ಸ್ಪಷ್ಟ ಗುರಿಯನ್ನು ಹೊಂದಬೇಕಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರೋಟೋಕಾಲ್‌ಗಳನ್ನು ಸ್ಪಷ್ಟವಾಗಿ ಜಾರಿಗೊಳಿಸಬೇಕಿದೆ. ಕೋವಿಡ್ ಕರ್ತವ್ಯಕ್ಕೆ ಜೊತೆಯಾಗುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರಿಯಾದ ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸಬೇಕಾಗಿದೆ. ಸಂಬಂಧಿತ ಆರೋಗ್ಯ ವೃತ್ತಿಪರರಿಗೆ ಕರೋನ ಚಿಕಿತ್ಸೆ ಕುರಿತು ತರಬೇತಿ ನೀಡಲು ಈ ಸಮಯವನ್ನು ಬಳಸಿಕೊಳ್ಳಬೇಕು.

ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸುವಾಗ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ಸೂಕ್ತವಾದ ಕೋವಿಡ್ ನಡವಳಿಕೆಯನ್ನು ಜಾರಿಗೆ ತರಲು ಅವಕಾಶವಿಲ್ಲ ಅಥವಾ ಪ್ರಯೋಜನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ರಾಷ್ಟ್ರೀಯ ವ್ಯಾಕ್ಸಿನೇಷನ್ ಡ್ರೈವ್ ಅನ್ನು ತುರ್ತಾಗಿ ವೇಗಗೊಳಿಸಬೇಕು. ದೇಶದ 950 ಮಿಲಿಯನ್ ಅರ್ಹ ವಯಸ್ಕರಲ್ಲಿ ಕೇವಲ 5% ನಷ್ಟು ಜನರಿಗೆ ಮಾತ್ರ ಲಸಿಕೆ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ.

ಈ ಎಲ್ಲಾ ಸಾಮೂಹಿಕ ಪ್ರಯತ್ನಗಳಿಂದ, ಮುಂದಿನ ಕರೋನ ಮೂರನೇ ಅಲೆಯಿಂದಾಗೂವ ಉಲ್ಬಣವನ್ನು ಎದುರಿಸಲು ಭಾರತ ದೇಶ ಖಂಡಿತವಾಗಿಯೂ ಉತ್ತಮವಾಗಿ ಸಿದ್ಧವಾಗಬಹುದು. ಇಲ್ಲವೇ ಎರಡನೇ ಅಲೆಯ ಚಿತ್ರಣ ಮತ್ತೆ ಮರುಕಳಿಸುವುದರಲ್ಲಿ ಸಂಶಯವಿಲ್ಲ.

Tags: Central GovernmentIndiaKarnataka Government
Previous Post

ಲಸಿಕೆ ಪಡೆದುಕೊಂಡ ಶೇಕಡಾ 95ರಷ್ಟು ಆರೋಗ್ಯ ಕಾರ್ಯಕರ್ತರು ಸೋಂಕಿನಿಂದ ಸುರಕ್ಷಿತ: ಅಧ್ಯಯನ

Next Post

ಕರೋನಾದಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ- ಕೇಂದ್ರ ಸರ್ಕಾರ

Related Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು
ಕರ್ನಾಟಕ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

by ಪ್ರತಿಧ್ವನಿ
April 23, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3)...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಕರೋನಾದಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ- ಕೇಂದ್ರ ಸರ್ಕಾರ

ಕರೋನಾದಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡಲು ಸಾಧ್ಯವಿಲ್ಲ- ಕೇಂದ್ರ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada