ಜಾತ್ರಾ ರಥೋತ್ಸವ ಕೋವಿಡ್ ನಿಯಮಾವಳಿ ಪ್ರಕಾರ ಬೆಳಗ್ಗೆ ೪.೧೫ಕ್ಕೆ ಸರಳವಾಗಿನಡೆಯಿತು.
ದಕ್ಷಿಣ ಭಾರತದ ಕುಂಬಮೇಳ ಎಂದೇ ಖ್ಯಾತಿ ಹೊಂದಿದ್ದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ರಥೋತ್ಸವ ಕೋವಿಡ್ ನಿಯಮಾವಳಿ ಪ್ರಕಾರ ಬೆಳಗ್ಗೆ ೪.೧೫ಕ್ಕೆ ಸರಳವಾಗಿನಡೆಯಿತು.
ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದ್ದಿದ್ದರಿಂದ ರಥವನ್ನು ಯಾವ ವೇಳೆಗೆ ಎಳೆಯಬೇಕು ಎಂಬುದನ್ನು ತಡರಾತ್ರಿವರೆಗೂ ಗೌಪ್ಯವಾಗಿಯೇ ಇಡಲಾಗಿತ್ತು.
ಸೀಮಿತ ಭಕ್ತ ಸಮೂಹದ ನಡುವೆ ಈಗ ಸರಳವಾಗಿ ರಥೋತ್ಸವ ಜರುಗಿದೆ. ಆದರೂ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದು ಕಂಡು ಬಂತು.
ಬೆಳಗಿನ ಜಾವದಲ್ಲಿ ಶ್ರೀ ಗವಿಸಿದ್ದೇಶ್ವರ ಗದ್ದುಗೆಗೆ ಸಾಂಪ್ರದಾಯಿಕವಾಗಿ ನಡೆದುಬಂದಿದ್ದ ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆ ಹಾಗೂ ಲಘು ರಥೋತ್ಸವ ನೆರವೇರಿತು.
ಕೋವಿಡ್ ಹಾಗೂ ಓಮಿಕ್ರಾನ್ ನಿಯಮ ಪಾಲಿಸಲು ಮಠದ ಆವರಣದಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಮಾಡಿದ್ದರು.