ಕಿಕ್ ಬಾಕ್ಸಿಂಗ್ನಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ನಿಖಿಲ್(23) ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಜುಲೈ 10ರಂದು ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಿಖಿಲ್ ಪಾಲ್ಗೊಂಡಿದ್ದರು.
ಕಿಕ್ ಬಾಕ್ಸಿಂಗ್ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್ನಲ್ಲೇ ನಿಖಿಲ್ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಎರಡು ದಿನ ಕೋಮಾದಲ್ಲಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು.
ನಿಖಿಲ್ ತಂದೆ ಬಾಕ್ಸರ್ ಆಗಿದ್ದರು. ಕಿಕ್ ಬಾಕ್ಸಿಂಗ್ನಲ್ಲಿ ಹೆಸರು ಮಾಡಬೇಕೆಂದು ನಿಖಿಲ್ ಕನಸು ಕಂಡಿದ್ದ. ಆದರೆ, ವಿಧಿಯಾಟದ ಮುಂದೆ ನಿಖಿಲ್ರ ಜೀವವೇ ಕರಗಿದೆ.
ಕಿಕ್ ಬಾಕ್ಸಿಂಗ್ನ ರಿಂಗ್ನಲ್ಲಿ ನಿಖಿಲ್ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಿಖಿಲ್ರ ಬದುಕಿನ ಕೊನೇ ಕ್ಷಣ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
Also Read : ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಅಭ್ಯರ್ಥಿಯ ನಾಮನಿರ್ದೇಶನ ಸಕಾರಾತ್ಮಕ ಹೆಜ್ಜೆ: ದಲಿತ ಚಿಂತಕ ಕಾಂಚ ಐಲಯ್ಯ | ಭಾಗ-1
Also Read : ಹಿಂದೂ ಧರ್ಮದಿಂದ ದಲಿತರ ಪ್ರಗತಿ ಸಾಧ್ಯವಿಲ್ಲ, ಅಲ್ಪಸಂಖ್ಯಾತ, ದಲಿತ ಸಮಸ್ಯೆ ಒಂದೇ ಅಲ್ಲ: ಕಾಂಚ ಐಲಯ್ಯ | ಭಾಗ-2
Also Read : ಸೆಕ್ಯುಲರ್ ಪಕ್ಷಗಳಿಗೆ ದಲಿತ ಅಸ್ಮಿತೆ ರಾಜಕಾರಣ ಮಾತ್ರ ಸಮಸ್ಯೆ ಏಕೆ? : ಕಾಂಚ ಐಲಯ್ಯ | ಭಾಗ -3