• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, March 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ

ಉದ್ಯಮಿಗಳಿಗೆ ವಿಕಸಿತ ಭಾರತದ ಗುರಿ ಒತ್ತಿ ಹೇಳಿದ ಕೇಂದ್ರ ಸಚಿವರು, ರೇರ್‌ ಅರ್ಥ್‌ ಮ್ಯಾಗ್ನೆಟ್ಸ್:‌ ಉದ್ಯಮ ಪಾಲುದಾರರ ಜತೆ ಮಹತ್ವದ ಚರ್ಚೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ.

ಪ್ರತಿಧ್ವನಿ by ಪ್ರತಿಧ್ವನಿ
January 12, 2026
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ
Share on WhatsAppShare on FacebookShare on Telegram

ಭೂಮಿಯಲ್ಲಿನ ಅಪರೂಪದ ಮ್ಯಾಗ್ನೆಟ್ʼಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಯೋಜನೆಯ ಉದ್ಯಮ ಪಾಲುದಾರರ ಮಹತ್ವದ ಸಭೆಯನ್ನು ನಡೆಸಿದರು.

ADVERTISEMENT

ಬೃಹತ್‌ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಸೋಮವಾರ ನಡೆದ ಈ ಸಭೆಯಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ, ಪರಮಾಣು ಇಂಧನ ಇಲಾಖೆಯ ಕಾರ್ಯದರ್ಶಿ, ಸಿಎಮ್‌ಡಿ, ಐಆರ್‌ಇಎಲ್ (ಭಾರತ) ಲಿಮಿಟೆಡ್ʼನ ನಿರ್ದೇಶಕರು (ತಾಂತ್ರಿಕ), ಎನ್‌ಎಂಡಿಸಿ ನಿರ್ದೇಶಕರು, ಎನ್‌ಎಫ್‌ಟಿಡಿಸಿ ಮತ್ತು ಭಾರತ ಮತ್ತು ವಿದೇಶಗಳ ವಿವಿಧ ಉದ್ಯಮ ಪಾಲುದಾರರು ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಈಗಾಗಲೇ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು; 2047ಕ್ಕೆ ವಿಕಸಿತ ಭಾರತ ಸಾಕಾರಕ್ಕಾಗಿ ವೇಗಗತಿಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ, ಆರ್‌ಇಪಿಎಂಗಳಿಗಾಗಿ ಸ್ವಾವಲಂಬಿ, ಸ್ಥಿತಿಸ್ಥಾಪಕ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪೂರಕ ವ್ಯವಸ್ಥೆಯನ್ನು ಸ್ಥಾಪಿಸುವತ್ತ ಕೇಂದ್ರ ಸರಕಾರ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಎಲ್ಲಾ ಅರ್ಹ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮತ್ತು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭಾರತದ ದೀರ್ಘಕಾಲೀನ ಬೆಳವಣಿಗೆಗೆ ಕೊಡುಗೆ ನೀಡಬೇಕೆಂದು ಸಚಿವರು ಒತ್ತಿ ಹೇಳಿದರು. ಡಿಸೆಂಬರ್ 15, 2025ರಂದು ಈ ಯೋಜನೆಯ ಅಧಿಸೂಚನೆ ಹೊರಡಿಸಲಾಗಿದ್ದು, ಆ ಯೋಜನೆ ಪ್ರಮುಖ ಉದ್ದೇಶ, ಗುರಿಗಳನ್ನು ಸಚಿವರು ಪಾಲುದಾರರಿಗೆ ವಿವರಿಸಿದರು.

ಈ ಯೋಜನೆಯ ಒಟ್ಟು ಹಣಕಾಸು ವೆಚ್ಚವು 7,280 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಯೋಜನೆಯ ಮಾರಾಟದ ಮೇಲಿನ ಮಾರಾಟ, ಸಂಬಂಧಿತ ಪ್ರೋತ್ಸಾಹಕಗಳಲ್ಲಿ 6,450 ಕೋಟಿ ರೂ. ಆಗಿದೆ. ವಾರ್ಷಿಕ ಒಟ್ಟು 6,000 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಸಾಧಿಸಲು 750 ಕೋಟಿ ರೂ.ಗಳ ಬಂಡವಾಳ ಸಬ್ಸಿಡಿಯೂ ಒಟ್ಟು ಮೊತ್ತದಲ್ಲಿ ಸೇರಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಪರೂಪದ ಮ್ಯಾಗ್ನೆಟ್ಸ್‌ʼಗಳ ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸಬೇಕು ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಬೇಕು. ಈ ಯೋಜನೆಯು 7 ವರ್ಷಗಳ ಅವಧಿ ಹೊಂದಿದ್ದು, ಇದರಲ್ಲಿ ಸಮಗ್ರ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಎರಡು ವರ್ಷಗಳ ಅವಧಿ ಮತ್ತು ಮಾರಾಟದ ಮೇಲಿನ ಪ್ರೋತ್ಸಾಹಕ ವಿತರಣೆಗೆ ಐದು ವರ್ಷಗಳ ಅವಧಿ ಇದೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ, ಉದ್ಯಮ ಪ್ರತಿನಿಧಿಗಳು ತಮ್ಮ ಊತ್ಪಾದನಾ ಸಾಮರ್ಥ್ಯದ ವಿವರಗಳನ್ನು ನೀಡಿದರು ಹಾಗೂ ಯೋಜನೆಯಲ್ಲಿ ಸಕ್ತಿಯವಾಗಿ ಭಾಗವಹಿಸುವ ಒಲವನ್ನು ವ್ಯಕ್ತಪಡಿಸಿದರು.

Tags: BJPCMDh.d. kumaraswamyhd kumarswamyHDKIRELJDSMagnetMinister for Heavy Industries and SteelNarendra ModiNMDCPM Narendra ModiSubscity
Previous Post

ಕುಬ್ಜವಾಗುತ್ತಿರುವ ಸಮಾಜದಲ್ಲಿ ಯುವ ಸಮುದಾಯ

Next Post

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

Related Posts

ಕನ್ನಡ ಗೆಳೆಯರ ಬಳಗದ ಸಂಚಾಲಕ ಬ.ಹ.ಉಪೇಂದ್ರ ನಿಧನ
Top Story

ಕನ್ನಡ ಗೆಳೆಯರ ಬಳಗದ ಸಂಚಾಲಕ ಬ.ಹ.ಉಪೇಂದ್ರ ನಿಧನ

by ಪ್ರತಿಧ್ವನಿ
March 5, 2026
0

ಬೆಂಗಳೂರು, ಮಾ. 5: ಕನ್ನಡ ಗೆಳೆಯರ ಬಳಗದ ಸಂಚಾಲಕ, ಎಚ್.ಎ.ಎಲ್‌.ನ ನಿವೃತ್ತ ಡಿಜಿಎಂ ಬಾ.ಹ. ಉಪೇಂದ್ರ (66) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಪೇಂದ್ರ ಅವರಿಗೆ...

Read moreDetails
ಬ್ರ್ಯಾಂಡ್ ಕರ್ನಾಟಕ ಮೂಲಕ 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್–ಮಾರುಕಟ್ಟೆ ಬೆಂಬಲ: ರೋಹಿಣಿ ಸಿಂಧೂರಿ

ಬ್ರ್ಯಾಂಡ್ ಕರ್ನಾಟಕ ಮೂಲಕ 4,000 ಎಂಎಸ್‌ಎಂಇಗಳಿಗೆ ಬ್ರ್ಯಾಂಡಿಂಗ್–ಮಾರುಕಟ್ಟೆ ಬೆಂಬಲ: ರೋಹಿಣಿ ಸಿಂಧೂರಿ

March 5, 2026
ನಿಮ್ಹಾನ್ಸ್‌ನಲ್ಲಿ ಅಂತರಾಷ್ಟ್ರೀಯ ಕ್ಲಿನಿಕಲ್ ನ್ಯೂರೋ ಸೈಕೋಲಾಜಿ ಸಮ್ಮೇಳನಕ್ಕೆ ಚಾಲನೆ

ನಿಮ್ಹಾನ್ಸ್‌ನಲ್ಲಿ ಅಂತರಾಷ್ಟ್ರೀಯ ಕ್ಲಿನಿಕಲ್ ನ್ಯೂರೋ ಸೈಕೋಲಾಜಿ ಸಮ್ಮೇಳನಕ್ಕೆ ಚಾಲನೆ

March 5, 2026
ಹೂಡಿ ವಿಜಯ್ ಕುಮಾರ್ ಸೇರ್ಪಡೆಯಿಂದ ಜೆಡಿಎಸ್‌ಗೆ ಬಲ : ನಿಖಿಲ್ ಕುಮಾರಸ್ವಾಮಿ

ಹೂಡಿ ವಿಜಯ್ ಕುಮಾರ್ ಸೇರ್ಪಡೆಯಿಂದ ಜೆಡಿಎಸ್‌ಗೆ ಬಲ : ನಿಖಿಲ್ ಕುಮಾರಸ್ವಾಮಿ

March 5, 2026
ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ: ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ: ಇಲ್ಲಿದೆ ಮಹತ್ವದ ಮಾಹಿತಿ

March 5, 2026
Next Post
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada