ಕೋವಿಡ್ ನಿಯಮಾವಳಿಗಳನ್ನು ಅತಾರ್ಕಿಕವಾಗಿ ಸಡಿಲಗೊಳಿಸಿದ ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಟೀಕಿಸಿದ್ದ ಚಿತ್ರನಿರ್ಮಾಪಕಿ ಅಯಿಷಾ ಸುಲ್ತಾನರಿಗೆ ಕೇರಳ ಉಚ್ಛನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಲಕ್ಷದ್ವೀಪದ ಆಡಳಿತಾಧಿಕಾರಿ ಕೋವಿಡ್ ನಿಯಮಗಳನ್ನು ಸಡಿಲಗೊಳಿಸುವ ಮೂಲಕ ವೈರಸ್ಸಿಗೆ ತೆರೆದುಕೊಳ್ಳುವ ಅಪಾಯಕಾರಿ ಪರಿಸ್ಥಿತಿಗೆ ದ್ವೀಪವಾಸಿಗಳನ್ನು ಒಡ್ಡಿದ್ದಾರೆ. ಇದೊಂದು ರೀತಿಯ ಜೈವಿಕ ಯುದ್ಧ ಎಂದು ಮಾಧ್ಯಮ ಚರ್ಚೆಯೊಂದರಲ್ಲಿ ಅಯೆಷಾ ಸುಲ್ತಾನ ಟೀಕಿಸಿದ್ದರು.

ಅದನ್ನು ಭಾರತ ಸರಕಾರದ ವಿರುದ್ಧ ದ್ವೀಪವಾಸಿಗಳನ್ನು ಎತ್ತಿಕಟ್ಟುವ ಹುನ್ನಾರವೆಂದು ಆರೋಪಿಸಿ ಕವರೆಟ್ಟಿ ಪೋಲಿಸ್ ಠಾಣೆಯಲ್ಲಿ ಐಪಿಸಿ ಕಲಂ 124 ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದೀಗ ಕೇರಳ ಹೈಕೋರ್ಟ್ ಅಯೇಷಾ ಸುಲ್ತಾನರನ್ನು ಬಂಧಿಸದಂತೆ ಆದೇಶಿಸಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.





