ಉತ್ತರ ಕಾಶ್ಮೀರದ ಬಾರಾಮುಲ್ಲಾದ ಹೈಸೆಕ್ಯುರಿಟಿ ವಲಯದಲ್ಲಿರುವ ಮದ್ಯದಂಗಡಿಯ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿಯಾಗಿದೆ. ದಾಳಿ ವೇಳೆ ವೈಲ್ ಸಾಪ್ನ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇತ್ತೀಚೆಗೆ ತೆರೆಯಲಾದ ಅಂಗಡಿ ಮೇಲೆ ಗ್ರೆನೇಡ್ ದಾಳಿ ನಡೆದಿದ್ದು ಈ ಕುರಿತು ಪೊಲೀಸರು, ದಾಳಿಕೋರರು ಮುಸುಕು ಹಾಕಿಕೊಂಡಿದ್ದರು ಮತ್ತು ಗ್ರೆನೇಡ್ ಎಸೆದು ಮೋಟಾರ್ ಬೈಕ್ನಲ್ಲಿ ಪರಾರಿಯಾಗಿದ್ದಾರೆ ಎಂಸು ಹೇಳಿದ್ದಾರೆ.
ನಾಲ್ವರು ಮದ್ಯದಂಗಡಿ ಉದ್ಯೋಗಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಾಲ್ವರಲ್ಲಿ ಒರ್ವ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬ ಉದ್ಯೋಗಿಯನ್ನು ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ನಾಲ್ವರು ಜಮ್ಮು ಪ್ರದೇಶದ ವಿವಿಧ ಭಾಗಗಳಿಂದ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನಪ್ಪಿದ ವ್ಯಕ್ತಿಯನ್ನು ಬಕ್ರ ರಾಜೌರಿಯ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಕಥುವಾದ ಗೋವರ್ಧನ್ ಸಿಂಗ್ ಮತ್ತು ರವಿಕುಮಾರ್ ಮತ್ತು ಕಂಗ್ರಾ ರಾಜೌರಿಯ ಮತ್ತು ಗೋವಿಂದ್ ಸಿಂಗ್ ಎಂದು ಗುರಿತಿಸಲಾಗಿದೆ. ಗೋವಿಂದ್ ಸಿಂಗ್ ಗಂಭೀರರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.






