ರಾಮಮಂದಿರ ನಿರ್ಮಾಣದ ಕಾರ್ಯ ಈಗ ಯಾವ ಹಂತದಲ್ಲಿದೆ, ಏನೇನು ಕಾರ್ಯಗಳು ಆಗಿವೆ, ಯಾವ ವೇಗದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ, ಯಾವಾಗ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎನ್ನುವ ಪ್ರಶ್ನೆಗೆ ರಾಮಮಂದಿರ ನಿರ್ಮಾಣ ಸಮಿತಿ ಮಂಗಳವಾರ ಉತ್ತರಿಸಿದೆ.
ಹೌದು, ಅಯೋಧ್ಯೆಯಲ್ಲಿ ರಾಮಮಂದಿರದ ಮೇಲ್ವಿಚಾರಣಾ ಕಾರ್ಯವು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಗರ್ಭಗುಡಿಯ ಸ್ತಂಭವು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಮಂದಿರ ನಿರ್ಮಾಣ ಸಮಿತಿ ಮಂಗಳವಾರ ತಿಳಿಸಿದೆ.
ಈ ಕುರಿತು ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು, , “ನೆಲ ಮಹಡಿಯ ಗರ್ಭಗುಡಿ ಡಿಸೆಂಬರ್ 2023ರ ವೇಳೆಗೆ ಪೂರ್ಣಗೊಳ್ಳಲಿದೆ, ಆದರೆ ದೇವಾಲಯದಲ್ಲಿ ಉಳಿದಿರುವ ಕೆಲಸವನ್ನು ಡಿಸೆಂಬರ್ 2024 ರೊಳಗೆ ಮಾಡಲಾಗುತ್ತದೆ.” 2024ರ ಆರಂಭದಲ್ಲಿ ದೇವಾಲಯವನ್ನು ಸಾರ್ವಜನಿಕರಿಗೆ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾದ ಕಾಮಗಾರಿ ಆಗಸ್ಟ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಗ್ರಾನೈಟ್ ಕಲ್ಲಿನಿಂದ ಸ್ತಂಭವನ್ನು ನಿರ್ಮಿಸಲಾಗಿದೆ. ಸ್ತಂಭ ನಿರ್ಮಾಣಕ್ಕೆ ಸುಮಾರು 17 ಸಾವಿರ ಕಲ್ಲುಗಳನ್ನು ಬಳಸಲಾಗುತ್ತಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಖರೀದಿಸಲಾಗುತ್ತಿದೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಅಯೋಧ್ಯೆಗೆ ಗ್ರಾನೈಟ್ ಸಾಗಣೆಗೆ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.
ದೇವಾಲಯದ ಮೇಲ್ವಿನ್ಯಾಸವು ರಾಜಸ್ಥಾನದ ಬನ್ಸಿ ಪಹಾರ್ಪುರ್ ಶಿಲೆಯಲ್ಲಿ ಕೆತ್ತಲಾಗುತ್ತಿದೆ ಎಂದು ಮಿಶ್ರಾ ಹೇಳಿದ್ದಾರೆ. ಕೆತ್ತನೆ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಸರಿಸುಮಾರು 75,000 cft (ಘನ ಅಡಿ) ಕೆತ್ತನೆ ಪೂರ್ಣಗೊಂಡಿದೆ, ಆದರೆ ಒಟ್ಟು 4.45 ಲಕ್ಷ cft ಕಲ್ಲುಗಳು ಕೆತ್ತನೆಯಾಗಬೇಕಿದೆ ಎಂದು ಹೇಳಿದ್ದಾರೆ. ಸ್ತಂಭದ ಹಂತ ಹಂತವಾಗಿ ಪೂರ್ಣಗೊಳ್ಳುವುದರೊಂದಿಗೆ, ಅಂತಿಮ ಸೂಪರ್ಸ್ಟ್ರಕ್ಚರ್ ನಿರ್ಮಾಣವು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ಮಿಶ್ರಾ ಹೇಳಿದರು.






