ಚಿಕ್ಕಮಗಳೂರು: ಸಿನಿಮಾ ಚಿತ್ರೀಕರಣ ಮಾಡುವಾಗಲೇ ನಿರ್ದೇಶಕ(Director) ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ನಡೆದಿದೆ. ಪಾತ್ರಧಾರಿ ಸಿನಿಮಾ ನಿರ್ದೇಶಕ ಸಂಗೀತ್ ಸಾಗರ್ (Sangeeth Sagar) ಮೃತ ದುರ್ದೈವಿ.

ಸಂಗೀತ್ ಸಾಗರ್ ಅವರು ಪಾತ್ರಧಾರಿ ಎನ್ನುವ ಸಿನಿಮಾ ಮಾಡುತ್ತಿದ್ದರು. ಕಳೆದ 20 ದಿನಗಳಿಂದ ಹರಿಹರಪುರ, ತೀರ್ಥಹಳ್ಳಿ ತಾಲೂಕು ಸುತ್ತಮುತ್ತ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದರು. ನಿನ್ನೆ ಹರಿಹರಪುರದಲ್ಲಿ ಚಿತ್ರೀಕರಣ ಮಾಡುವ ವೇಳೆ ಏಕಾಏಕಿ ಹೃದಯಾಘಾತವಾಗಿದೆ.

ಎದೆನೋವಿನಿಂದ ಕುಸಿದು ಬಿದ್ದ ನಿರ್ದೇಶಕರನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಂಗೀತ್ ಸಾಗರ್ ಮೃತಪಟ್ಟಿದ್ದಾರೆ. ಇನ್ನು ಸಂಗೀತ್ ಸಾಗರ್ ಕನ್ನಡದ ಸುಮಾರು ಏಳಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.












