• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಮಲ್​ ಕ್ಷಮೆ ಕೇಳಿಲ್ಲ.. ಸಿನಿಮಾ ರಿಲೀಸ್​ ಆಗಲ್ಲ.. ಕೋರ್ಟ್​ ಏನ್​ ಹೇಳುತ್ತೆ..?

ಕೃಷ್ಣ ಮಣಿ by ಕೃಷ್ಣ ಮಣಿ
June 2, 2025
in Top Story, ಕರ್ನಾಟಕ, ದೇಶ, ಸಿನಿಮಾ
0
ಕಮಲ್​ ಕ್ಷಮೆ ಕೇಳಿಲ್ಲ.. ಸಿನಿಮಾ ರಿಲೀಸ್​ ಆಗಲ್ಲ.. ಕೋರ್ಟ್​ ಏನ್​ ಹೇಳುತ್ತೆ..?
Share on WhatsAppShare on FacebookShare on Telegram

ಕನ್ನಡ ಭಾಷೆಗೆ ಅಪಮಾನ ಮಾಡಿದ್ದ ತಮಿಳು ನಟ ಕಮಲ್ ಹಾಸನ್​ ನಟಿಸಿರುವ ಥಗ್​ ಲೈಫ್ ಸಿನಿಮಾ ಬ್ಯಾನ್ ರಾಜ್ಯದಲ್ಲಿ ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ. ಇಂದು ಫಿಲಂ ಚೇಂಬರ್​ನಲ್ಲಿ ಸಭೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಕಮಲ್ ಹಾಸನ್ ವಿರುದ್ಧ ಕನ್ನಡಪರ ಸಂಘಟನೆಗಳು ಈಗಾಗಲೇ ಕಿಡಿ ಕಾರಿದೆ. ರಾಜ್ಯದೆಲ್ಲೆಡೆ ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತವಾಗ್ತಿದ್ದು, ಇದೀಗ ಥಗ್ ಲೈಫ್ ಸಿನಿಮಾದ ಮುಂಗಡ ಬುಕಿಂಗ್​ಗೆ ಅವಕಾಶ ಕೊಡದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಮೌಖಿಕ ಸೂಚನೆ ನೀಡಿದೆ ಎನ್ನಲಾಗಿದೆ. ಕ್ಷಮೆ ಕೇಳುವವರೆಗೂ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡದಿರಲು ನಿರ್ಧಾರ ಮಾಡಲಾಗಿದೆ.

ADVERTISEMENT
#watch Viral Reels: ತನ್ನಂತೆ ಯಾರೂ ರೀಲ್‌ಗಳನ್ನು ಮಾಡಬೇಡಿ ಎಂದು ವಿಡಿಯೋ ಬಿಡುಗಡೆ ಮಾಡಿದ ಯುವತಿ.! #reels #train

ಈ ಮಧ್ಯೆ, ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ಭಾರೀ ವಿರೋಧ ಹಿನ್ನಲೆ‌, ನಟ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರ ಪ್ರದರ್ಶನ ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಿಸಬೇಕೆಂದು ಅರ್ಜಿ ಹಾಕಿದ್ದಾರೆ. ಇದೇ ವೇಳೆ, ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ರಾಜ್ ಕಮಲ್ ಫಿಲ್ಮ್ ಇಂಟರ್ ನ್ಯಾಷನಲ್ ಸಂಸ್ಥೆಯ ಸಿಇಒ ಮೂಲಕ ಕಮಲ್ ಹಾಸನ್ ಅರ್ಜಿ ಸಲ್ಲಿಸಿದ್ದಾರೆ.

ಕಮಲ್​ ಹಾಸನ್​ ಕೋರ್ಟಿಗೆ ಹೋದ್ರು ನಾವು ಜಗ್ಗಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಮ್ಮ ಎಲ್ಲಾ ವಿತರಕರು, ಪ್ರದರ್ಶಕರು ನಮ್ಮ ಜೊತೆ ಇದ್ದಾರೆ. ಅವರು ಕೋರ್ಟ್​ಗೆ ಹೋಗಲಿ ನಾವು ಕೇವಿಟ್ ಹಾಕ್ತಿವಿ.. ನಾವು ಕಾನೂನ ಬಾಹಿರವಾಗಿ ಏನು ಮಾಡ್ತಿಲ್ಲ. ಕ್ಷಮೆ ಕೇಳದಿದ್ರೆ ಥಗ್ ಲೈಫ್​ ಸಿನಿಮಾ ರಿಲೀಸ್ ಮಾಡಲ್ಲ ಎಂದಿದ್ದಾರೆ.

ಕಮಲ್ ಹಾಸನ್ ಕೋರ್ಟ್ ಗೆ ಹೋಗಿರುವ ವಿಚಾರದ ಬಗ್ಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ನಾನು ಸರ್ಕಾರದ ಪ್ರತಿನಿಧಿಯಾಗಿ ಪತ್ರ ಬರೆದಿದ್ದೆ. ವಾಣಿಜ್ಯ ಮಂಡಳಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಕೋರ್ಟ್​​​ ಏನು ಮಾಡುತ್ತೆ ನೋಡೋಣ. ನಮ್ಮ ನಿಲುವನ್ನ ನಾವು ಕೋರ್ಟ್​​​ಗೆ ತಿಳಿಸುತ್ತೇವೆ. ಮುಂದೆ ಏನು ಆಗುತ್ತೆ ನೋಡೋಣ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಶಾಸಕ ಗಣಿಗ ರವಿಕುಮಾರ್ ಕೂಡ ಪ್ರತಿಕ್ರಿಯಿಸಿ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.

ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಈ ವಿಚಾರದ ಬಗ್ಗೆ ಮಾತಾಡಲ್ಲ.. ಯಾಕೆಂದ್ರೆ ನನಗೆ ಇತಿಹಾಸ ಗೊತ್ತಿಲ್ಲ. ನಾನು ವಾಸ್ತವಾಂಶ ಏನಿದೆ ಅಂತ ತಿಳಿದುಕೊಂಡು ಪ್ರತಿಕ್ರಿಯಿಸ್ತೇನೆ. ಆದ್ರೆ ನಾವು ಮತ್ತು ತಮಿಳರು ನೆರೆಹೊರೆಯವರು.. ನಾವು ಸೌಹಾರ್ದತೆಯಿಂದ ಬಾಳಬೇಕು.. ನಾವು ಅವರಿಗೆ ಕಾವೇರಿ ನೀರು ಕೊಡ್ತೇವೆ. ತಮಿಳುನಾಡಿನಿಂದ ತುಂಬಾ ಜನ ಇಲ್ಲಿ ಬಂದು ಕೆಲಸ ಮಾಡ್ತಿದ್ದಾರೆ. ನಾವೆಲ್ಲರೂ ಶಾಂತಿ ಕಾಪಾಡಿಕೊಳ್ಳೋದು ಮುಖ್ಯ.. ಯಾವುದು ಶಾಶ್ವತ ಅಲ್ಲ ಎಂದಿದ್ದಾರೆ.

Tags: KAMAL HAASANkamal haasan about kannadakamal haasan controversykamal haasan kannada controversykamal haasan kannada remarkkamal haasan language rowkamal haasan newskamal haasan speechkamal haasan statementkamal haasan tamil and kannadakamal haasan thug lifekamal hassankamal hassan kannadakamal hassan kannada statementpro kannada groups condemn kamal haasan statementvatal nagaraj on kamal haasan
Previous Post

RCB ಅಭಿಮಾನಿಗಳಿಗೆ ನಾಳೆ ಹಬ್ಬ.. ಏನೆಲ್ಲಾ ಸಿದ್ಧತೆ ಆಗ್ತಿದೆ ಗೊತ್ತಾ..?

Next Post

ಕೋಮುವಾದ ಮಾಡುತ್ತಿದ್ದವರ ಗಡಿಪಾರಿಗೆ 26 ಮಂದಿ ಗೆ ಕಟ್ಟು ನಿಟ್ಟಿನ ಕ್ರಮ

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ಕೋಮುವಾದ ಮಾಡುತ್ತಿದ್ದವರ ಗಡಿಪಾರಿಗೆ 26 ಮಂದಿ ಗೆ ಕಟ್ಟು ನಿಟ್ಟಿನ ಕ್ರಮ

ಕೋಮುವಾದ ಮಾಡುತ್ತಿದ್ದವರ ಗಡಿಪಾರಿಗೆ 26 ಮಂದಿ ಗೆ ಕಟ್ಟು ನಿಟ್ಟಿನ ಕ್ರಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada