• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಚಂದ್ರನ ಮೇಲೆ ವಾಸ ಮಾಡಲು ಸಾಧ್ಯವಿದೆಯೆ?, ಖನಿಜ ಸಂಪತ್ತಿನ ಆಗರ ಚಂದ್ರಲೋಕ..

ಕೃಷ್ಣ ಮಣಿ by ಕೃಷ್ಣ ಮಣಿ
August 31, 2023
in ಅಂಕಣ, ಅಭಿಮತ
0
ಚಂದ್ರಯಾನ 3

ಚಂದ್ರನ ಮೇಲೆ ಇಳಿಯುವ ಮುನ್ನ ಚಂದ್ರಯಾನ 3 ಗಗನನೌಕೆಯು ಹೊಸ ಫೊಟೊಗಳನ್ನು ತೆಗೆದೊದೆ

Share on WhatsAppShare on FacebookShare on Telegram

ಚಂದ್ರಲೋಕ ಎನ್ನುವುದು ನಿರೀಕ್ಷೆಗೆ ನಿಲುಕದ ಗ್ರಹ. ಚಂದ್ರನಿಂದಲೇ ವಿಶ್ವಕ್ಕೆ ತಂಪು ಸಿಗುತ್ತಿದೆ ಎನ್ನುವುದು ನಮ್ಮ ಪುರಾಣಗಳಿಂದ ಗೊತ್ತಾಗಿರುವ ಅಂಶ. ಆದರೆ ಭಾರತದ ಚಂದ್ರಯಾನ 3 ಯಶಸ್ಸಿನ ಬಳಿಕ ಚಂದ್ರನ ಮೇಲೆ ವಾಸ ಮಾಡಲು ಯೋಗ್ಯ ವಾತಾವರಣ ಇದೆ ಎನ್ನುವ ಬಗ್ಗೆ ಮಾಹಿತಿಗಳು ಸಿಗುತ್ತಿದೆ. ಚಂದ್ರನ ಮೇಲ್ಮೈ ಮೇಲೆ ಭಾರತದ ಕಳುಹಿಸಿದ ವಿಕ್ರಮ್​ ಲ್ಯಾಂಡರ್​​ ರಾಕೆಟ್​​ ಯಾವುದೇ ಸಮಸ್ಯೆ ಇಲ್ಲದೆ ಇಳಿದ ಬಳಿಕ ಮಾನವರನ್ನು ಚಂದ್ರನ ಮೇಲೆ ಇಳಿಸುವುದು ಕಷ್ಟದ ಕೆಲಸವಲ್ಲ ಅನ್ನೋ ಚರ್ಚೆಗಳು ಶುರುವಾಗಿದೆ. ಅದರ ಜೊತೆಗೆ ಚಂದ್ರನ ಮೇಲೆ ಭೂಮಿಯಲ್ಲಿ ಸಿಗಬಹುದಾದ ಎಲ್ಲಾ ಸಂಪತ್ತುಗಳು ಇವೆ ಅನ್ನೋದನ್ನು ಚಂದ್ರಯಾನ – 03ರಲ್ಲಿದ್ದ ಪ್ರಗ್ಯಾನ್​​ ರೋವರ್​​ ಪತ್ತೆ ಹಚ್ಚಿದೆ.

ADVERTISEMENT
ಚಂದ್ರಯಾನ 3

ಚಂದ್ರಲೋಕ ಎಂಬುದು ಖನಿಜಾಂಶಗಳ ಬಂಡಾರ..!

ಆಗಸ್ಟ್​ 23ರಂದು ಚಂದ್ರನ ಅಂಗಳಕ್ಕೆ ಇಳಿದ ವಿಕ್ರಮ್​​ ಲ್ಯಾಂಡರ್​ ಹಾಗು ಪ್ರಗ್ಯಾನ್​​ ರೋವರ್​​, ಒಟ್ಟು 14 ದಿನಗಳ ಕಾಲ ಇಸ್ರೋ ವಿಜ್ಞಾನಿಗಳಿಗೆ ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿಯನ್ನು ಕಳುಹಿಸಲಿದೆ. ಈಗಾಗಲೇ ಚಂದ್ರನ ಮೇಲೆ ಅಲ್ಯೂಮಿಯಂ, ಸಿಲಿಕಾನ್​, ಗಂಧಕ, ಸಲ್ಫರ್​, ಮ್ಯಾಂಗನೀಸ್, ಆಮ್ಲಜನಕ, ಕ್ಯಾಲ್ಸಿಯಂ, ಟೈಟಾನಿಯಂ ಪತ್ತೆಯಾಗಿದೆ. ಇನ್ನುಳಿದ ದಿನಗಳಲ್ಲಿ ಚಂದ್ರನ ಮೇಲೆ ಹೈಡ್ರೋಜನ್​ ಲಭ್ಯದ ಬಗ್ಗೆ ಪ್ರಗ್ಯಾನ್​ ರೋವರ್​​ ಅಧ್ಯಯನ ನಡೆಸಲಿದ್ದು, ಒಂದು ವೇಳೆ ಹೈಡ್ರೋಜನ್​ ಕೂಡ ಪತ್ತೆಯಾದರೆ ಚಂದ್ರನ ಮೇಲೆ ನೀರು ಲಭ್ಯವಿದೆ ಎನ್ನುವುದು ಪತ್ತೆಯಾಗಲಿದೆ. ಖನಿಜಾಂಶಗಳ ಬಂಡಾರವೇ ಆಗಿರುವ ಚಂದ್ರ ವಿಶ್ವದ ಪ್ರಮುಖ ದೇಶಗಳ ಆಕರ್ಷಣೆಯ ಕೇಂದ್ರಬಿಂದು ಆಗಿದೆ.

ಚಂದ್ರಯಾನ 3
ಚಂದ್ರಯಾನ 3

ಚಂದ್ರನ ಮೇಲೆ ರೋವರ್​ಗೆ ಸಿಕ್ಕಿತು ದೊಡ್ಡ ಗುಂಡಿ..

ಮುಂದಿನ ದಿನಗಳಲ್ಲಿ ಚಂದಿನ ಮೇಲೂ ನಾವು ಕೂಡ ವಾಸ ಮಾಡಬಹುದು ಎಂದು ಇಸ್ರೋ ವಿಜ್ಞಾನಿಗಳು ಊಹಿಸಿದ್ದಾರೆ. ಚಂದ್ರನ ಮೇಲೆ ಎಷ್ಟು ಸಾಧ್ಯವೋ ಅಷ್ಟು ಪ್ರಗ್ಯಾನ್​​ ರೋವರ್​ ಓಡಾಟ ಮಾಡಲಿದೆ. ಮುಂದಿನ 4 ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆ ಆಗಲಿದೆ. ಅಷ್ಟರೊಳಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಡಾ ಬಿ.ಎಚ್.ಎಂ ದಾರುಕೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೂರ್ಯನ ಬೆಳಕಿನ ಅವಧಿ ಮುಗಿಯುವ ಮುನ್ನವೇ ಪ್ರಗ್ಯಾನ್​​ ತನ್ನ ಕೆಲಸ ಮುಗಿಸಬೇಕು. 14 ದಿನ ಕಳೆದ ಮೇಲೂ ಪ್ರಗ್ಯಾನ್​​ ಕಾರ್ಯ ನಿರ್ವಹಿಸಿದರೆ ವೈಜ್ಞಾನಿಕ ಅಚ್ಚರಿಗೆ ಕಾರಣವಾಗಲಿದೆ. ಚಂದ್ರನ ಮೇಲೆ ಪ್ರಗ್ಯಾನ್​ ಸಂಚರಿಸುವಾಗ ಗುಂಡಿ ಸಿಕ್ಕಿದ್ದು, ಕೂಡಲೇ ಪ್ರಗ್ಯಾನ್​​ ಗುಂಡಿಯನ್ನು ಗಮನಿಸಿ ಮಾಹಿತಿ ನೀಡಿದಾಗ ದಿಕ್ಕು ಬದಲಿಸುವಂತೆ ಇಸ್ರೋ ಕೇಂದ್ರದಿಂದ ಕಮಾಂಡ್ ನೀಡಲಾಯ್ತು ಎಂದಿದ್ದಾರೆ.

ಚಂದ್ರಯಾನ 3
ಚಂದ್ರನ ಮೇಲೆ ಇಳಿಯುವ ಮುನ್ನ ಚಂದ್ರಯಾನ 3 ಗಗನನೌಕೆಯು ಹೊಸ ಫೊಟೊಗಳನ್ನು ತೆಗೆದೊದೆ

ಕಲ್ಪನೆಯಲ್ಲ, ವಾಸ್ತವ.. ಇನ್ಮುಂದೆ ಚಂದ್ರನ ಮೇಲೆ ವಾಸ..

ಚಂದ್ರನ ಮೇಲೆ ಎಷ್ಟು ದೊಡ್ಡ ಗುಂಡಿ ಇದೆ..? ಅದರಲ್ಲಿ ಪ್ರಗ್ಯಾನ್​​ ಇಳಿಯಬಹುದೇ ಎಂದು ಪರಿಶೀಲನೆ ನಡೆಸಬಹುದಿತ್ತು. ಆದರೆ ನಾವು ಚಂದ್ರಯಾನ 03 ಯೋಜನೆಯ ಪ್ರಮುಖ ಉದ್ದೇಶಕ್ಕೆ ಅಡ್ಡಿಯಾಗಬಾರದು ಅನ್ನೋ ಕಾರಣಕ್ಕೆ ಪ್ರಗ್ಯಾನ್​ ರೋವರ್ ವಾಪಸ್ ಬರುವಂತೆ ಸೂಚನೆ ನೀಡಿದೆವು. ಹೀಗಾಗಿ ದಿಕ್ಕು ಬದಲಿಸಿದ ಪ್ರಗ್ಯಾನ್​​ ಬೇರೆ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾನೆ. ಚಂದ್ರನ ಮೇಲೆ ವಾಸ ಮಾಡಬಹುದು ಎನ್ನುವುದು ಇಲ್ಲಿಯವರೆಗೂ ಕಲ್ಪನೆಯಾಗಿತ್ತು. ಆದರೆ ಚಂದ್ರನ ಮೇಲೂ ವಾಸ್ತವವಾಗಿ ಇದು ಮುಂದೆ ವಾಸ ಮಾಡಲು ಸಾಧ್ಯವಾಗಲಿದೆ ಎಂದು ಭರವಸೆ ನೀಡಿದ್ದಾರೆ ಇಸ್ರೋ ಹಿರಿಯ ವಿಜ್ಞಾನಿ ಡಾ ಬಿ.ಎಚ್.ಎಂ ದಾರುಕೇಶ್. ಅಂದರೆ ಇಷ್ಟರಲ್ಲೇ ಚಂದ್ರನ ಮೇಲೆ ಮಾನವ ಸಹಿತ ಚಂದ್ರಯಾನಕ್ಕೆ ಇಸ್ರೋ ಪ್ರಯತ್ನಿಸಲಿದೆ ಎನ್ನುವ ಅಂಶ ಈ ಮಾತಿನಿಂದ ಗೊತ್ತಾಗುತ್ತಿದೆ ಎನ್ನಬಹುದು.

ಕೃಷ್ಣಮಣಿ

Tags: Chandrayaan 3IndiaISROmoonMoonlanding
Previous Post

ಕುಮಾರಸ್ವಾಮಿಗೆ ಅನಾರೋಗ್ಯ.. ಏನಾಗಿದೆ..?

Next Post

ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ- ಭಾಗ 2

Related Posts

The Opaque World of Political Party Finances
Top Story

ರಾಜಕೀಯ ಪಕ್ಷಗಳ ಹಣಕಾಸಿನ ಅಸ್ಪಷ್ಟ ಲೋಕ

by ನಾ ದಿವಾಕರ
September 29, 2026
0

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸದಾ ಕಾಲ ಕಾಣಬಹುದಾದ ವಿರೋಧಾಭಾಸಗಳಲ್ಲಿ ಪ್ರಮುಖವಾದುದೆಂದರೆ, ಚುನಾವಣಾ ಪ್ರಜಾತಂತ್ರದ ಪ್ರಧಾನ ಭಾಗಿದಾರರಾದ (Stake holders) ರಾಜಕೀಯ ಪಕ್ಷಗಳು ಸಂವಿಧಾನದ ಹತ್ತನೆಯ ಷೆಡ್ಯೂಲ್ ಹೊರತುಪಡಿಸಿ,...

Read moreDetails
A theatrical portrayal of delicate human relationships

ಸೂಕ್ಷ್ಮ ಮನುಜ ಸಂಬಂಧಗಳ ರಂಗ ರೂಪಕ

September 27, 2026
ಅಧಃಪತನದ ದಾರಿಯಲ್ಲಿ ನೂರೆಂಟು ಸವಾಲುಗಳು

ಅಧಃಪತನದ ದಾರಿಯಲ್ಲಿ ನೂರೆಂಟು ಸವಾಲುಗಳು

September 25, 2026
ವಿಕಾಸದ ಹಾದಿಯಲ್ಲಿ ಕತ್ತಲೆಯ ದ್ವೀಪಗಳು

ವಿಕಾಸದ ಹಾದಿಯಲ್ಲಿ ಕತ್ತಲೆಯ ದ್ವೀಪಗಳು

September 22, 2026
ಪುಟಿದೇಳುತ್ತದೆಯೇ ಪ್ರಾದೇಶಿಕ ಪಕ್ಷ..?

ಪುಟಿದೇಳುತ್ತದೆಯೇ ಪ್ರಾದೇಶಿಕ ಪಕ್ಷ..?

September 15, 2026
Next Post
ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ- ಭಾಗ 2

ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ- ಭಾಗ 2

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada