• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಬಾಯಲ್ಲಿ ಬೆಣ್ಣೆ.. ಬಗಲಲ್ಲಿ ದೊಣ್ಣೆ.. ಬಿಜೆಪಿಗೆ ಈ ಮಾತು ಅನ್ವರ್ಥ..

ಪ್ರತಿಧ್ವನಿ by ಪ್ರತಿಧ್ವನಿ
July 6, 2023
in ಅಂಕಣ, ಅಭಿಮತ
0
ಬಿಜೆಪಿ ಸೋಲಿಸಲು ವಿಪಕ್ಷಗಳ ಒಗ್ಗಟ್ಟು; ಕೇಸರಿಪಡೆ ವಿರುದ್ಧ ಸಮರಕ್ಕೆ ಸನ್ನದ್ಧವಾದ 16 ಪಕ್ಷಗಳು
Share on WhatsAppShare on FacebookShare on Telegram

ಬಾಯಲ್ಲಿ ಬೆಣ್ಣೆ.. ಬಗಲಲ್ಲಿ ದೊಣ್ಣೆ ಎನ್ನುವುದು ಕರುನಾಡಿನಲ್ಲಿ ಬಾಯಿಂದ ಬಾಯಿಗೆ ಬಂದಿರೋ ಗಾಧೆ ಮಾತು. ವೇದ ಸುಳ್ಳಾದರೂ ಗಾಧೆ ಸುಳ್ಳಾಗದು ಅನ್ನೋ ಮಾತಿದೆ. ಯಾಕಂದ್ರೆ ಜನ ಸಾಮಾನ್ಯರು ತಮ್ಮ ಅನುಭವದಿಂದ ಈ ಮಾತುಗಳನ್ನು ಬಳಕೆ ಮಾಡಿಕೊಂಡು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅಂದರೆ ಬಾಯಲ್ಲಿ ಮುದ್ದು ಮುದ್ದಾಗಿ ಮಾತನಾಡಿ, ಬಗಲು ಅಂದ್ರೆ ಕಂಕುಳಲ್ಲಿ ದೊಣ್ಣೆ ಹಿಡಿದು ಬೆದರಿಸುವುದು ಎಂದರ್ಥ. ಇದನ್ನು ಬಿಜೆಪಿ ಹೈಕಮಾಂಡ್‌ ಅಕ್ಷರಶಃ ಪಾಲನೆ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸೋತು ಸುಣ್ಣ ಆಗಿದ್ದರೂ ಕೂಡ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುವುದನ್ನು ಮಾತ್ರ ಬಿಜೆಪಿ ಹೈಕಮಾಂಡ್‌ ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ.

ADVERTISEMENT

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆಗೆ ಬೇಕು ಬಿಎಸ್‌ ಯಡಿಯೂರಪ್ಪ..!

ಕಾಂಗ್ರೆಸ್‌ ವಿರುದ್ಧ ಗಟ್ಟಿ ದನಿಯಲ್ಲಿ ಮಾತನಾಡುವುದಕ್ಕೂ ಬಿಜೆಪಿಯಲ್ಲಿ ನಾಯಕರು ಇಲ್ಲದ ಪರಿಸ್ಥಿತಿ ಎದುರಾಗಿದೆ. ಇದೇ ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವಂತೆ ಸೂಚಿಸಿತ್ತು. ಮಂಗಳವಾರ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್‌ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿದ್ದರು. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಹೈಕಮಾಂಡ್‌ ಪರದಾಡುತ್ತಿರುವಾಗಲೂ ಯಡಿಯೂರಪ್ಪ, ಭಾರತೀಯ ಜನತಾ ಪಾರ್ಟಿಯ ದೆಹಲಿ ನಾಯಕರ ಬಗ್ಗೆ ಉತ್ತಮ ಮಾತನ್ನು ಹೇಳಿದ್ದರು. ಆದರೆ ಹೈಕಮಾಂಡ್‌ ಮಾತ್ರ ಯಡಿಯೂರಪ್ಪನನ್ನು ಟಾರ್ಗೆಟ್‌ ಮಾಡುವುದನ್ನು ನಿಲ್ಲಿಸುವ ಲಕ್ಷಣ ಕಾಣಿಸ್ತಿಲ್ಲ.

ರೇಣುಕಾಚಾರ್ಯ ಬಳಿಕ ಮತ್ತೋರ್ವ ಆಪ್ತನಿಗೆ ನೋಟಿಸ್..!

ಹೊನ್ನಾಳಿಯ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮಾಜಿ ಸಿಎಂ ಯಡಿಯೂರಪ್ಪ ಅವರ ಅತ್ಯಾಪ್ತರಲ್ಲಿ ಒಬ್ಬರು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಬೇರೆ ಯಾರಿಗೂ ನೋಟಿಸ್‌ ನೀಡದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ರೇಣುಕಾಚಾರ್ಯಗೆ ಮಾತ್ರ ನೋಟಿಸ್‌ ನೀಡಿತ್ತು. ಇದೀಗ ರಾಜ್ಯ ಬಿಜೆಪಿಯಲ್ಲೊ ಕೋಲ್ಡ್‌ ವಾರ್‌ ಜೋರಾಗಿದ್ದು, ಮತ್ತೋರ್ವ ಯಡಿಯೂರಪ್ಪ ಆಪ್ತನನ್ನು ಟಾರ್ಗೆಟ್‌ ಮಾಡಿ ನೋಟಿಸ್‌ ನೀಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರುದ್ರೇಶ್ ವಿರುದ್ಧ ದೂರು ಕೊಡಲಾಗಿತ್ತು. ಪಕ್ಷ ವಿರೋಧಿ ಕೃತ್ಯವೆಸಗಿದ್ದಾರೆ ಅಂತ ವಿ.ಸೋಮಣ್ಣ ದೂರು ನೀಡಿದ್ದರು. ಇದೀಗ ರುದ್ರೇಶ್‌ಗೆ ಪಕ್ಷವಿರೋಧಿ ಚಟುವಟಿಕೆ ಆರೋಪದ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಇದು ಯಡಿಯೂರಪ್ಪ ಅವರನ್ನು ಕುಗ್ಗಿಸಲು ಹೈಕಮಾಂಡ್‌ ಮಾಡ್ತಿರೋ ಕುತಂತ್ರ ಅನ್ನೋ ಮಾತು ಬಿಜೆಪಿಯಲ್ಲೇ ಕೇಳಿ ಬರ್ತಿದೆ.

ಪ್ರತಿಭಟನೆ ಮಾಡಿಸಿದ್ದೂ ಬಿಜೆಪಿ, ಗುರ್‌‌ ಅಂದಿದ್ದೂ ಬಿಜೆಪಿ..!

ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಳಸಿಕೊಂಡು ಪ್ರತಿಭಟನೆ ಮಾಡಿಸಿದ್ದು ಬಿಜೆಪಿ ನಾಯಕರೇ ಸರಿ. ಆದರೆ ಯಡಿಯೂರಪ್ಪ ಜೊತೆಯಲ್ಲಿ ರುದ್ರೇಶ್ ಕಾಣಿಸಿಕೊಂಡಿದ್ದಕ್ಕೆ ಬಿಜೆಪಿ ನಾಯಕರಲ್ಲಿ ಅಸಮಾಧಾನದ ಕಿಚ್ಚು ಹೊತ್ತಿಕೊಂಡಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ ಪ್ರತಿಭಟನೆ ವೇಳೆ ರುದ್ರೇಶ್ ಪ್ರತ್ಯಕ್ಷ ಆಗಿದ್ದಕ್ಕೆ ಮಾಜಿ ಸಚಿವ ವಿ ಸೋಮಣ್ಣ ಅಸಮಧಾನಗೊಂಡಿದ್ದರು. ರುದ್ರೇಶ್ ವೇದಿಕೆ ಹತ್ತುತ್ತಿದ್ದ ಹಾಗೆ ವೇದಿಕೆಯಿಂದ ಸೋಮಣ್ಣ ಆಪ್ತರು ಹೊರನಡೆದಿದ್ದರು. ಇದೀಗ ವಿ.ಸೋಮಣ್ಣ ಹಾಗು ಅರುಣ್ ಸೋಮಣ್ಣ ನೀಡಿದ್ದ ದೂರಿನ ಆಧಾರದಲ್ಲಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಪ್ರತಿಭಟನೆಗೆ ಕರೆದಿದ್ದೂ ಬಿಜೆಪಿ. ಈಗ ಆಪ್ತರನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ಯಡಿಯೂರಪ್ಪನನ್ನು ಟಾರ್ಗೆಟ್‌ ಮಾಡುತ್ತಿರುವುದು ಕೂಡ ಬಿಜೆಪಿ. ಇದಕ್ಕೇ ಅಲ್ವಾ..? ದೊಡ್ಡವರು ಹೇಳೋದು ಬಾಯಲ್ಲಿ ಬೆಣ್ಣೆ.. ಬಗಲಲ್ಲಿ ದೊಣ್ಣೆ ಅಂತಾ..

ಕೃಷ್ಣಮಣಿ

Tags: Amit ShahBJPbsyediyurappabyvijayendractravijpnaddaNarendra Modi
Previous Post

ಮಾಜಿ ಸಿಎಂ ಕುಮಾರಸ್ವಾಮಿ ಕಂಡ ಕಂಡವರ ಮೇಲೆ ಗುಮ್ಮ ತೋರುತ್ತಿರೋದ್ಯಾಕೆ..?

Next Post

ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ, ರಾಜಕೀಯ ತಿರುವು ಪಡೆದ ಪ್ರಕರಣ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
Next Post
ಮೈಸೂರು ಎಕ್ಸ್​​ಪ್ರೆಸ್​ ವೇ ಹೆದ್ದಾರಿ ಟೋಲ್​ ಏರಿಕೆ : ರಾಜ್ಯ ಸರ್ಕಾರದ ವಿರುದ್ಧ ಹೆಚ್​ಡಿಕೆ ಗರಂ

ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ, ರಾಜಕೀಯ ತಿರುವು ಪಡೆದ ಪ್ರಕರಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada