ಸಂಸದೆ ಸುಮಲತಾರನ್ನ(sumalatha ) ಕಾಂಗ್ರೆಸ್ ನಿರ್ಲಕ್ಷಿಸಿದ್ದೇ ಇದೀಗ ಮಂಡ್ಯದಲ್ಲಿ(Mandya) ಕಾಂಗ್ರೆಸ್ ಗೆ ದುಬಾರಿಯಾಗಿ ಪರಿಣಮಿಸಲಿದ್ಯಾ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ಇಂದು ತಮ್ಮ ನಿರ್ಧಾರ ಘೋಷಿಸುವ ಸಂದರ್ಭದಲ್ಲಿ ಸಂಸದೆ ಸುಮಲತಾ ಆಡಿದ ಆ ಮಾತುಗಳು. ಬಿಜೆಪಿ (BJP)ಸೇರ್ಪಡೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಪರೋಕ್ಷವಾಗಿ ಡಿಕೆಶಿ (Dk shivakumar) ಗೆ ಟಕ್ಕರ್ ಕೊಟ್ಟಿದ್ದಾರೆ.

ಕಾಂಗ್ರೆಸ್ (Congress) ಗೆ ಈ ಹಿಂದೆಯೂ ನನ್ನ ಅವಶ್ಯಕತೆ ಇರಲಿಲ್ಲ, ಈಗಲೂ ಇಲ್ಲ, ಇನ್ಮುಂದೆಯೂ ನನ್ನ ಅವಶ್ಯಕತೆ ಇಲ್ಲ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಕೊಟ್ಟಿದ್ದಾರೆ. ಸೋ ನನಗೂ ಕಾಂಗ್ರೆಸ್ ನ ಅವಶ್ಯಕತೆ ಇಲ್ಲ . ಹೀಗಾಗಿ ನಾನು ಕಾಂಗ್ರೆಸ್ ಬಗ್ಗೆ ಆಸಕ್ತಿ ಹೊಂದಿಲ್ಲ. ಮೋದಿಯವರ (narendra modi) ಆಡಳಿತ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಮಂಡ್ಯದಲ್ಲಿ ಕಾಂಗ್ರೆಸ್ ಸುಮಲತಾರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ.

ಕಾಂಗ್ರೆಸ್ ನಾಯಕರು ತಮ್ಮನ ಸರಿಯಾಗಿ ನಡೆಸಿಕೊಂಡಿಲ್ಲ, ಅವಮಾನಿಸುವ ರೀತಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಸುಮಲತಾ, ಬಿಜೆಪಿಯಲ್ಲಿ ಇದ್ದುಕೊಂಡೇ ಮಂಡ್ಯಗಾಗಿ ಕೆಲಸ ಮಾಡ್ತಿನಿ. ಹಾಗಾಗಿ ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡೋದಾಗಿ ಘೋಷಿದ್ದಾರೆ. ಆ ಮೂಲಕ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಿ ಬುದ್ಧಿ ಕಲಿಸಬೇಕೆಂಬ ಲೆಕ್ಕಾಚಾರ ಸುಮಲತಾ ಅವರದ್ದು. ಕಾಂಗ್ರೆಸ್ ಈ ಮೈತ್ರಿಯನ್ನ ಹೇಗೆ ಎದುರಿಸಲಿದೆ. ಇದಕ್ಕೆ ಪ್ರತಿಯಾಗಿ ಡಿಕೆಶಿ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.