Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಭಾರತೀಯ ಸೇನೆಗೆ ಹೊಸ ಸಮವಸ್ತ್ರ: ಹೊಸ ವಿನ್ಯಾಸದ ಸಮಗ್ರ ಮಾಹಿತಿ ಇಲ್ಲಿದೆ

ಶ್ರುತಿ ನೀರಾಯ

ಶ್ರುತಿ ನೀರಾಯ

January 16, 2022
Share on FacebookShare on Twitter

ಭಾರತೀಯ ಸೇನೆಯು ಹೊಸ ಸಮವಸ್ತ್ರ ಧರಿಸಿ ಶನಿವಾರ (ಜನವರಿ 15, 2022) ಸೇನಾ ದಿನದ ಪರೇಡ್‌ ಪ್ರದರ್ಶಿಸಿಸಿದ್ದು, ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಈ ಹೊಸ ಸಮವಸ್ತ್ರವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಸೇನೆಗೆ ಈ ಹೊಸ ಸಮವಸ್ತ್ರ ವಿನ್ಯಾಸಗೊಳಿಸುವ ಯೋಜನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಒಳಗೊಂಡ ಎಂಟು ತಂಡ ರಚಿಸಲಾಗಿತ್ತು. ಸೇನೆಯಲ್ಲಿರುವ ಪುರುಷರು ಮತ್ತು ಮಹಿಳೆಯರು ಧರಿಸಲು ಸುಲಭ ಮತ್ತು ಆರಾಮದಾಯಕವಾಗಿರುವಂತೆ ಸಮವಸ್ತ್ರ ಸಿದ್ಧಪಡಿಸಲು ಸೂಚಿಸಲಾಗಿತ್ತು. ಈಗ ಈ ಎಲ್ಲ ವಿಶೇಷಣಗಳನ್ನು ಒಳಗೊಂಡ ಸಮವಸ್ತ್ರವನ್ನು ಭಾರತೀಯ ಸೇನೆ ಒದಗಿಸಿದೆ.

ಯುದ್ಧದ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಟು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಯುದ್ಧ ಕಾರ್ಯಾಚರಣೆಯಲ್ಲಿ ಆರಾಮದಾಯಕವಾಗಿರಲಿದೆ. ಮೊದಲು ಜಂಗಲ್ ವಾರ್ಫೇರ್, ಡೆಸರ್ಟ್ ವಾರ್ಫೇರ್ಗೆ ಸಮವಸ್ತ್ರಗಳು ಇದ್ದವು. ಈಗ ವಿವಿಧ ಭೂಪ್ರದೇಶಗಳಿಗೆ ವಿಭಿನ್ನ ಸಮವಸ್ತ್ರಗಳನ್ನು ಹೊಂದುವ ಅಗತ್ಯತೆಯನ್ನು ಈ ಸಮವಸ್ತ್ರ ದೂರಮಾಡಿದೆ.

ಹಗುರವಾದ ಫ್ಯಾಬ್ರಿಕ್ ಬಟ್ಟೆಯಲ್ಲಿ ಇದು ಸಿದ್ಧವಾಗಿದ್ದು, ಕಠಿಣ ಹವಾಮಾನ ಪರಿಸ್ಥಿತಿಗಳಿಂದ ರಕ್ಷಿಸಲು ಇದು ಸಹಕಾರಿಯಾಗಿದೆ. ಇದು ಶೇ. ೭೦ ರಷ್ಟು ಹತ್ತಿ ಮತ್ತು ಶೇ.೩೦ ರಷ್ಟು ಪಾಲಿಯೆಸ್ಟರ್‌ನ ಸಂಯೋಜನೆಯಲ್ಲಿ ಸಿದ್ಧವಾಗಿದೆ. ಈ ಸಂಯೋಜನೆಯಿಂದಾಗಿ ವಿವಿಧ ಹವಾಮಾನ ಪರಿಸ್ಥಿತಿ, ಮಳೆ ಅಥವಾ ಬೇಸಿಗೆಯಲ್ಲಿ ಧರಿಸಲು ಸುಲಭವಾಗಿದೆ. ಮಳೆಯಿಂದ ತೋಯ್ದರೆ ಬೇಗವಾಗಿ ಒಣಗುವ ವಿಶೇಷತೆ ಹೊಂದಿದೆ.

ಹೊಸ ಸಮವಸ್ತ್ರವು ತಿಳಿ ಹಸಿರು ಹಾಗೂ ಮಣ್ಣಿನ ಬಣ್ಣ ಒಳಗೊಂಡಿದೆ. ವಿವಿಧ ಭೂಪ್ರದೇಶ ಮತ್ತು ಸೈನ್ಯದ ನಿಯೋಜನೆಯ ಪ್ರದೇಶ ಹಾಗೂ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ದಪಡಿಸಲಾಗಿದೆ.

ಈ ಹೊಸ ಸಮವಸ್ತ್ರದಿಂದ ಟಕ್ ಮಾಡಲಾಗುವುದಿಲ್ಲ. ಒಳಗೆ ಟಿ-ಶರ್ಟ್ ಇರುತ್ತದೆ. ಜೊತೆಗೆ ಈ ಸಮವಸ್ತ್ರವು ಬಹು-ಭೂಪ್ರದೇಶ ಸ್ನೇಹಿಯಾಗಿದೆ. ಇದು ಕೇವಲ ಬಣ್ಣಗಳ ಸಂಯೋಜನೆವಾಗಿರದೇ ವಾಸ್ತವವಾಗಿ ಮರೆಮಾಚುವಿಕೆ ದೃಷ್ಟಿಯಿಂದ ಸಹಾಯಕವಾಗಲಿದೆ. ಮಹಿಳಾ ಅಧಿಕಾರಿಗಳಿಗೂ ಸ್ವಲ್ಪ ಬದಲಾವಣೆ ಮಾಡಲಾಗಿದೆ.

ಒಟ್ಟಾರೆ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಸಮವಸ್ತ್ರವನ್ನು ಸಿದ್ಧಪಡಿಸಲಾಗಿದೆ. ಇದನ್ನು ಸಿದ್ಧಪಡಿಸುವ ಮೊದಲು ಇತರ ದೇಶಗಳ ಸಮವಸ್ತ್ರಗಳನ್ನು ಅಧ್ಯಯನ ಮಾಡಿ ವಿನ್ಯಾಸ ಮಾಡಲಾಗಿದೆ.

ಇದು ಎಲ್‌ಟಿಟಿಇ ಸಮವಸ್ತ್ರವನ್ನು ಹೋಲುತ್ತದೆಯೇ? ಎನ್ನುವ ಪ್ರಶ್ನೆಗಳು ಕೂಡ ಕೇಳಿಬಂದಿದ್ದವು. ಭಾರತೀಯ ಸೇನೆಯು ಈ ಹೋಲಿಕೆಯನ್ನು ಅಲ್ಲಗಳೆದಿದ್ದು, ಸಮವಸ್ತ್ರಗಳು ಎಲ್‌ಟಿಟಿಇ ಸಮವಸ್ತ್ರಕ್ಕಿಂತ ʼವಿಶಿಷ್ಟವಾಗಿ ವಿಭಿನ್ನವಾಗಿವೆʼ ಎಂದು ಹೇಳಿದೆ.

RS 500
RS 1500

SCAN HERE

don't miss it !

ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ : ಮೋಹನ್‌ ದಾಸರಿ ಆಗ್ರಹ
ಕರ್ನಾಟಕ

ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ : ಮೋಹನ್‌ ದಾಸರಿ ಆಗ್ರಹ

by ಪ್ರತಿಧ್ವನಿ
May 18, 2022
ಕರ್ನಾಟಕ

ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ: ಹರಿಪ್ರಸಾದ್‌ ಕಿಡಿ

by ಪ್ರತಿಧ್ವನಿ
May 17, 2022
ಪಕ್ಷದಲ್ಲಿ ತುರ್ತು ಬದಲಾವಣೆ ಅಗತ್ಯ: ಸೋನಿಯಾ ಗಾಂಧಿ
ರಾಜಕೀಯ

ಗರಿಷ್ಠ 2 ಬಾರಿ ಮಾತ್ರ ರಾಜ್ಯಸಭಾ ಸದಸ್ಯತ್ವ: ಕಾಂಗ್ರೆಸ್‌ ಚಿಂತನೆ

by ಪ್ರತಿಧ್ವನಿ
May 14, 2022
ಭಾರತದ ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಬಲ್ಲ ಗಿಗ್ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿದೆಯೇ?
ಅಭಿಮತ

ಭಾರತದ ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಬಲ್ಲ ಗಿಗ್ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿದೆಯೇ?

by ಫಾತಿಮಾ
May 12, 2022
ಎಲ್ಲೆಮೀರಿ ಹಿಗ್ಗುತ್ತಿರುವ ಹಣದುಬ್ಬರ, ಏಪ್ರಿಲ್ ತಿಂಗಳಲ್ಲಿ ಶೇ.7.79ಕ್ಕೆ ಜಿಗಿತ
ದೇಶ

ಎಲ್ಲೆಮೀರಿ ಹಿಗ್ಗುತ್ತಿರುವ ಹಣದುಬ್ಬರ, ಏಪ್ರಿಲ್ ತಿಂಗಳಲ್ಲಿ ಶೇ.7.79ಕ್ಕೆ ಜಿಗಿತ

by ಪ್ರತಿಧ್ವನಿ
May 12, 2022
Next Post
ಕೋವಿಡ್ ಹಾಗೂ ಓಮಿಕ್ರಾನ್ : ಎರಡು ಔಷಧಗಳ ಕೊರತೆ ಎದುರಿಸುತ್ತಿರುವ ಕರ್ನಾಟಕ

ಕೋವಿಡ್ ಹಾಗೂ ಓಮಿಕ್ರಾನ್ : ಎರಡು ಔಷಧಗಳ ಕೊರತೆ ಎದುರಿಸುತ್ತಿರುವ ಕರ್ನಾಟಕ

ಶಾಸ್ತ್ರೀಯ ಕನ್ನಡ ಅಧ್ಯಯನವನ್ನು ಕಡೆಗಣಿಸಿ ಸಂಸ್ಕೃತಕ್ಕೆ ಮಣೆಹಾಕುವುದು ಅಕ್ಷಮ್ಯ ಭಾಗ-೧

ಶಾಸ್ತ್ರೀಯ ಕನ್ನಡ ಅಧ್ಯಯನವನ್ನು ಕಡೆಗಣಿಸಿ ಸಂಸ್ಕೃತಕ್ಕೆ ಮಣೆಹಾಕುವುದು ಅಕ್ಷಮ್ಯ ಭಾಗ-೧

ಒಂದು ವಾರ ಮೊದಲೇ ಚುನಾವಣೆ ನಡೆಸುವಂತೆ ಕೋರಿ ಪತ್ರ ಬರೆದ ಪಂಜಾಬ್ ಸಿಎಂ ಚನ್ನಿ

ಒಂದು ವಾರ ಮೊದಲೇ ಚುನಾವಣೆ ನಡೆಸುವಂತೆ ಕೋರಿ ಪತ್ರ ಬರೆದ ಪಂಜಾಬ್ ಸಿಎಂ ಚನ್ನಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist