ಸ್ವದೇಶೀ ನಿರ್ಮಿತ ಹೊಸ ತಲೆಮಾರಿನ ಅಗ್ನಿ ಪ್ರೈಮ್ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ.
ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಗುರುವಾರ ಬೆಳಿಗ್ಗೆ ೯.೪೫ರ ಸುಮಾರಿಗೆ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಇಲಾಖೆ (DRDO) ಹೇಳಿಕೆ ಬಿಡುಗಡೆ ಮಾಡಿದೆ.
ಅಗ್ನಿ ಪ್ರೈಮ್ ಕ್ಷಿಪಣಿಯು 1000 ದಿಂದ 2000 ಕಿ.ಮೀ. ದೂರದವರೆಗೆ ಚಿಮ್ಮುವ ಶಕ್ತಿ ಹೊಂದಿದ್ದು, ನಿಖರ ಗುರಿ ತಲುಪುವ ಈ ಕ್ಷಿಪಣಿಯ ಹಾರಾಟದ ಎಲ್ಲಾ ಆಯಾಮಗಳನ್ನು ಪರೀಶೀಲಿಸಲಾಗಿದೆ ಎಂದು ಡಿಆರ್ ಡಿಒ ಹೇಳಿದೆ.