ಒಬ್ಬರ ಅಕೌಂಟ್ ಇಂದ ಇನ್ನೊಬ್ಬರ ಅಕೌಂಟ್ ಗೆ ಹಣ ವರ್ಗಾವಣೆ ಮಾಬೇಕು ಅಂದ್ರೆ ಮೊದಲೆಲ್ಲಾ ಬ್ಯಾಂಕ್ಗಳಿಗೆ ಹೋಗಬೇಕಿತ್ತು. ಆದ್ರೆ ಈಗ ಎಲ್ಲವೂ ಫುಲ್ ಚೇಂಜ್ ಆಗಿದೆ. ಕೇವಲ ಸೆಕೆಂಡುಗಳಲ್ಲಿ ಹಣ ಹಾಕಬಹುದು ಅಥವಾ ನಮ್ಮ ಅಕೌಂಟ್ ಗೆ ಹಣ ಹಾಕಿಸಿಕೊಳ್ಳಬಹುದು.
ಹೌದು, UPI (UNIFIED PAYMENT INTERFACE) ತರಕಾರಿ ಗಾಡಿಯಿಂದ – ಫೈಸ್ಟಾರ್ ಹೋಟೆಲ್ಗಳ ವರೆಗೂ ಈ ಯುಪಿಐ ಪೇಮೆಂಟ್ ಪ್ರಖ್ಯಾತಿ ಹೊಂದಿದೆ. ಯಾರಿಗಾದರೂ ಹಣ ಕಳುಹಿಸಬೇಕು ಅಂದ್ರೆ ಅವರ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇದ್ರೆ ಸಾಕು, ಹಣ ಅವರ ಅಕೌಂಟ್ ತಲುಪಿರುತ್ತೆ. ಈ ಪೈಕಿ ಯುಪಿಐ ಪೇಮೆಂಟ್ ಗೆ ಫೋನ್ ಪೇ ಜನರ ಫೇವರೆಟ್ ಅಪ್ಲಿಕೇಶನ್ ಆಗಿ ಹೊರ ಹೊಮ್ಮಿದೆ.
ಹೌದು, ಅತಿಹೆಚ್ಚು ರೇಟಿಂಗ್ ಪಡೆಯುವ ಮೂಲಕ ಫೋನ್ ಪೇ, ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್ನ್ನು ಹಿಂದಿಕ್ಕಿದೆ. ಈ ಆ್ಯಪ್ನಲ್ಲಿ ಸುಮಾರು 60.4 ಲಕ್ಷ ರೇಟಿಂಗ್ಗಳು ಬಂದಿದ್ದು, 4.7ಸ್ಟಾರ್ಸ್ಗಳನ್ನು ಪಡೆದ ಆ್ಯಪ್ ಆಗಿ ಪ್ರಸಿದ್ದಿಯನ್ನು ಪಡೆದಿದೆ.