
ಹುಬ್ಬಳ್ಳಿ: BJP ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಉಚ್ಛಾಟಿತ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಓಪನ್ ಚಾಲೆಂಜ್ ಮಾಡಿದ್ದಾರೆ. ನೀನು ರಾಜೀನಾಮೆ ಕೊಡು, ನಾನು ರಾಜೀನಾಮೆ ಕೊಡ್ತೀನಿ. ಇಬ್ಬರೂ ಉಪ ಚುನಾವಣೆಗೆ ಹೊಗೋಣ ಎಂದು ಹುಬ್ಬಳ್ಳಿಯಲ್ಲಿ ಯತ್ನಾಳ್ ಓಪನ್ ಚಾಲೆಂಜ್ ಮಾಡಿದ್ದಾರೆ.

ನಾನು ಕೇವಲ ಭಗವಧ್ವಜದ ಮೇಲೆ ಗೆಲ್ತೀನಿ, ನನಗೆ ಸಾಬರ (ಮುಸ್ಲಿಂ) ವೋಟ್ ಬೇಡ. ವಿಜಯೇಂದ್ರಗೆ ತಾಕತ್ ಇದೆಯಾ..? ನಾನು ಚುನಾವಣೆಗೆ ರೆಡಿ ಎಂದಿದ್ದಾರೆ ಯತ್ನಾಳ್. ಹಂದಿ ಬಗ್ಗೆ ಮಾತನಾಡಿಸಬೇಡ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರೇಣುಕಾಚಾರ್ಯಗೆ ಹಂದಿ ಎಂದಿದ್ದಾರೆ ಯತ್ನಾಳ್. ಕುಟುಂಬ ಮುಕ್ತ ಆದ ಮೇಲೆ ನಾನು ಬಿಜೆಪಿಗೆ ಹೋಗ್ತೀನಿ ಅಂತಾನೂ ತಿಳಿಸಿದ್ದಾರೆ.

ಬಿಜೆಪಿ ಪಕ್ಷ ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ಮತ್ತೆ ಬಿಜೆಪಿಗೆ ಹೋಗ್ತಿನಿ. ಒಂದು ದಿನ ಹೋಗಲೇಬೇಕು. ನಾನು ಒಳ್ಳೆಯವನು, ದುಷ್ಟರಿಗೆ ನಾನು ದುಷ್ಟ. ನೀವ್ ಅದನ್ನೆ ಬರೀರಿ. ಪಂಚಮಸಾಲಿ ಟ್ರಸ್ಟ್ ಪ್ರಭಣ್ಣ ಲಫಂಗ.. ಬದ್ಮಾಷ್. ಮಠದ ಆಸ್ತಿಯನ್ನು ಹೊಡೆದಿದ್ದಾರೆ. ಕೂಡಲ ಸಂಗಮದ ಆಸ್ತಿಯನ್ನು ತನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾನೆ.
ವಿಜಯೇಂದ್ರ ಧಮ್ ಇದ್ರೆ ನನಗೆ ನೇರವಾಗಿ ಮಾತಾಡು, ಹಂದಿಗಳ ಕಡೆ ಮಾತನಾಡಿಸಬೇಡ. ಹಂದಿಗಳು ಹೊರಗೆ ಇರಬೇಕು, ಮನೆ ಒಳಗೆ ಕರಕೋಬಾರದು. ಸ್ವಾಮೀಗಾಗಿ SC ಸರ್ಟಿಫಿಕೇಟ್ ತಗೊಂಡಿದ್ದಾನೆ. ನಾಚಿಕೆ ಆಗಲ್ವಾ..? ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ದ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.

ಆ ಕುಟುಂಬದವರು ಉತ್ತರ ಕರ್ನಾಟಕದ ಜೊತೆ ಯಾವ ರೀತಿ ನಡೆದುಕೊಂಡಿದ್ದಾರೆ..? ನೀರಾವರಿ ವಿಚಾರದಲ್ಲಿ ಬಹಳ ದೊಡ್ಡ ದ್ರೋಹ ಆಗಿದೆ. ಬಿಜೆಪಿಯಲ್ಲಿ ಎಷ್ಟು ಜನ ಮುಖ್ಯಮಂತ್ರಿ ಆಗಿದ್ದಾರೆ..? ಎಲ್ಲರೂ ಉತ್ತರ ಕರ್ನಾಟಕದವರ ಆಶೀರ್ವಾದದಿಂದ ಆಗಿದ್ದು. ಬೆಂಗಳೂರಲ್ಲಿ ಮತ್ತೊಂದು ಇಂಟರ್ನ್ಯಾಷನಲ್ ಏರ್ಪೋರ್ಟ್ ಮಾಡ್ತಾರಂತೆ. ಅದರ ಬದಲು ಧಾರವಾಡ ಬೆಳಗಾವಿ ಮತ್ತೆ ಒಂದು ಕಡೆ ನ್ಯಾಷನಲ್ ಏರ್ಪೋರ್ಟ್ ಮಾಡ್ಲಿ ಎಂದು ಆಗ್ರಹಿಸಿದ್ದಾರೆ.