• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟೌನ್ ಶಿಪ್ ನಿರ್ಮಾಣ ಮಾಡೋಕೆ ಹೋದ್ರೆ ರಕ್ತ ಕ್ರಾಂತಿ ಆಗುತ್ತದೆ : ರಮೇಶ್ ಗೌಡ ಎಚ್ಚರಿಕೆ..!

ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಯೋಗ್ಯತೆ ಇಲ್ಲದಿದ್ರೆ, ಸರ್ಕಾರಿ ಅಂಗ ಸಂಸ್ಥೆಗಳನ್ನು ಮುಚ್ಚಿ ಬಿಡಿ : ಕಾಂಗ್ರೆಸ್‌ ಸರ್ಕಾರದಮ ಕಿಡಿಕಾರಿದ ಜೆಡಿಎಸ್‌ ನಾಯಕ..

ಪ್ರತಿಧ್ವನಿ by ಪ್ರತಿಧ್ವನಿ
June 19, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಟೌನ್ ಶಿಪ್ ನಿರ್ಮಾಣ ಮಾಡೋಕೆ ಹೋದ್ರೆ ರಕ್ತ ಕ್ರಾಂತಿ ಆಗುತ್ತದೆ : ರಮೇಶ್ ಗೌಡ ಎಚ್ಚರಿಕೆ..!
Share on WhatsAppShare on FacebookShare on Telegram

ಬೆಂಗಳೂರು : ಬಿಡದಿ ಟೌನ್‌ ಶಿಪ್‌ ರೈತರ ಹಿಡುವಳಿ ಜಮೀನನ್ನು ರಿಯಲ್ ಎಸ್ಟೇಟ್ ದಂಧೆಗೆ ತಳ್ಳಿ ದುಡ್ಡು ಮಾಡುವ ಯೋಜನೆಯಾಗಿದೆ. ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವುದು ಇದ್ಯಾವ ಸರ್ಕಾರ ಎಂದು ಜೆಡಿಎಸ್‌ ಮಾಜಿ ವಿಧಾನಪರಿಷತ್‌ ಸದಸ್ಯ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನತಾದಳದ ಅಧ್ಯಕ್ಷ ಹೆಚ್.ಎಂ. ರಮೇಶ್‌ ಗೌಡ ಪ್ರಶ್ನಿಸಿದ್ದಾರೆ.

ADVERTISEMENT
Ramesh Gowda : ಸಿಎಂ ಡಿಕೆಶಿ ಆಪ್ತನ ವಿರುದ್ಧ ರಮೇಶ್ ಗೌಡ ವಾಗ್ದಾಳಿ..! #magadi #balakrishna #pratidhvani

ನಗರದಲ್ಲಿಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿರುವ ಬಡ ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್‌ ಸರ್ಕಾರದ ಅಂತಿಮ ಗೆಜೆಟ್‌ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಅಲ್ಲದೆ ಇದು ರೈತರ ಮೇಲೆ ದಬ್ಬಾಳಿಕೆ ನಡೆಸುವ ಕೆಲಸವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರವು ಜಾರಿಗೆ ತರಲಿರುವ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್‌ ರಿಯಲ್‌ ಎಸ್ಟೇಟ್‌ ದಂಧೆ ಅಡಗಿದೆ. ಮಾಗಡಿ ಶಾಸಕ ಬಾಲಕೃಷ್ಣ ಗೋಸುಂಬೆ ರಾಜಕಾರಣ ಬಿಡಬೇಕಾಗುತ್ತದೆ, ಅಧಿಕಾರದಲ್ಲಿದ್ದಾಗ ಒಂದು, ಇಲ್ಲದಿದ್ದಾಗ ಇನ್ನೊಂದು ಹೇಳಿಕೆ ನೀಡುತ್ತಿರುವುದನ್ನು ನೋಡಿದಾಗ ಎಲ್ಲವೂ ಗೊತ್ತಾಗುತ್ತದೆ. ಕುಮಾರಸ್ವಾಮಿಯವರ ಮಾತನಾಡುವ ಅವರು ರೈತರ ಪರವಾಗಿ ನಿಲ್ಲಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : 4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ, ಯಾರೆಂದು ಗೊತ್ತಿದೆ: ಹೆಚ್.ಡಿ ಕುಮಾರಸ್ವಾಮಿ

ನಾವು ಯಾವತ್ತೂ ರೈತರ ಪರವಾಗಿದ್ದೇವೆ, ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ನಾವು ಬಿಡೋದಿಲ್ಲ. ಟೌನ್ ಶಿಪ್ ನಿರ್ಮಾಣ ಮಾಡೋಕೆ ಹೋದ್ರೆ ರಕ್ತ ಕ್ರಾಂತಿ ಆಗುತ್ತದೆ. ಪೋಸ್ಟರ್‌ ಅಂಟಿಸುವ ನೀಚ ಕೆಲಸ ಮಾಡೋದಕ್ಕೆ ಕಾಂಗ್ರೆಸ್ ಕೆಲವರನ್ನು ಇಟ್ಕೊಂಡಿದೆ. ಆದರೆ ಬಿಡದಿಯಲ್ಲಿ ಅಂಟಿಸಿದ್ದ ಪೋಸ್ಟರ್‌ ಕಂಡು ನಮ್ಮ ಕಾರ್ಯಕರ್ತರು ಆಕ್ರೋಶಗೊಂಡು ಕುಮಾರಸ್ವಾಮಿ ಬಳಿ ಬಂದಿದ್ದರು. ಆಗ ಕಾರ್ಯಕರ್ತರು ತಾಳ್ಮೆ ವಹಿಸುವಂತೆ ತಿಳಿಸಿದ್ದೇವೆ. ನಮ್ಮ ನಿಲುವು ಸ್ಪಷ್ಟವಾಗಿದೆ, ಟೌನ್‌ ಶಿಪ್‌ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

CJP'S Abhijeet Dipke is Anti National..? :‌ ಪೋಷಕರು ಸಿಡಿದೆದ್ರೆ ಸರ್ಕಾರಕ್ಕೆ ಸಂಕಷ್ಟ ಫಿಕ್ಸ್! #pratidhvani

ಈಗಲ್‌ ಟನ್‌ ರೆಸಾರ್ಟ್‌ಗೆ ನೀಡಿದಂತೆ ರೈತರಿಗೂ ಎಕರೆಗೆ 12 ಕೋಟಿ ರೂಪಾಯಿ ಪರಿಹಾರ ನೀಡಿ ಏನಾಗುತ್ತದೆ? ರೈತರಿಗೂ ಅನುಕೂಲ ಮಾಡಿಕೊಡಿ, ದ್ವಂದ್ವ ನಿಲುವಿನಿಂದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಹೊರಗೆ ಬರಲಿ. ಈ ಸರ್ಕಾರಕ್ಕೆ ನಿಜವಾಗಿಯೂ ಪಾಪ ಪ್ರಜ್ಞೆ ಇದ್ರೆ, ಕಾರಂತ್ ಬಡಾವಣೆಯ ಸಮಸ್ಯೆ ಬಗೆಹರಿಸಲಿ. ಹೀಗೆ ಬಡಾವಣೆಗಳಲ್ಲಿ ನಡೆದ ಅನಾನುಕೂಲಗಳನ್ನು ಪರಿಹರಿಸಲಿ. ಈ ಬಿಡದಿ ಟೌನ್ ಶಿಪ್ ಯೋಜನೆ ಬರೀ ದುಡ್ಡು ಹೊಡೆಯೋ ಸ್ಕೀಂ ಆಗಿದೆ ಎಂದು ರಮೇಶ್‌ ಗೌಡ ಲೇವಡಿ ಮಾಡಿದ್ದಾರೆ.

Tags: Bidadi TownshipCM DK Shivakumarcongress karnatakaFormers LandH M Ramesh Gowdahd kumarawamyJDS KarnatakaKarnataka GovernmentPratidhvani
Previous Post

4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ, ಯಾರೆಂದು ಗೊತ್ತಿದೆ: ಹೆಚ್.ಡಿ ಕುಮಾರಸ್ವಾಮಿ

Next Post

ದಾಸ ಜೈಲಲ್ಲಿದ್ರೂ ಜೈ ಅಂತಾರೆ ಫ್ಯಾನ್ಸ್!‌ ಕಲಾಸಿಪಾಳ್ಯ ರೀ-ರಿಲೀಸ್‌ ಕ್ರೇಜ್‌ ಸಖತ್‌ ಗುರು

Related Posts

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ
Top Story

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ: ಹಿರೇಬಾಗೇವಾಡಿಯಲ್ಲಿ ಪಂಜಿನ ಮೆರವಣಿಗೆ, ರಸ್ತೆ ತಡೆ ಪ್ರತಿಭಟನೆ

by ಪ್ರತಿಧ್ವನಿ
August 6, 2026
0

ಬೆಳಗಾವಿ: ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಬುಧವಾರ ಸಂಜೆ...

Read moreDetails
‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

August 6, 2026
ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

August 6, 2026
ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

August 5, 2026
ನೂತನ ಸಚಿವರು, ಶಾಸಕರಿಗೆ ಕೊಠಡಿ ಹಂಚಿಕೆ: ಯಾರು ಯಾವ ರೂಮ್ ಪಡೆದರು? ಇಲ್ಲಿದೆ ಸಂಪೂರ್ಣ ಪಟ್ಟಿ

ನೂತನ ಸಚಿವರು, ಶಾಸಕರಿಗೆ ಕೊಠಡಿ ಹಂಚಿಕೆ: ಯಾರು ಯಾವ ರೂಮ್ ಪಡೆದರು? ಇಲ್ಲಿದೆ ಸಂಪೂರ್ಣ ಪಟ್ಟಿ

August 5, 2026
Next Post
ದಾಸ ಜೈಲಲ್ಲಿದ್ರೂ ಜೈ ಅಂತಾರೆ ಫ್ಯಾನ್ಸ್!‌ ಕಲಾಸಿಪಾಳ್ಯ ರೀ-ರಿಲೀಸ್‌ ಕ್ರೇಜ್‌ ಸಖತ್‌ ಗುರು

ದಾಸ ಜೈಲಲ್ಲಿದ್ರೂ ಜೈ ಅಂತಾರೆ ಫ್ಯಾನ್ಸ್!‌ ಕಲಾಸಿಪಾಳ್ಯ ರೀ-ರಿಲೀಸ್‌ ಕ್ರೇಜ್‌ ಸಖತ್‌ ಗುರು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada