ಬೆಂಗಳೂರು :ಏ.05: ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯನ್ನು ನಟ ಚೇತನ್ ಅಹಿಂಸಾ ಟೀಕಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಫೇಜ್ ಚೇತನ್ ಬರೆದುಕೊಂಡಿದಾರೆ..
ಚೇತನ್ ಫೇಸ್ ಬುಕ್ ನಲ್ಲಿ ಏನೆಂದು ಬರೆದಿದ್ದಾರೆ :
ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ʼಮಾರಾಟʼ ಎನ್ನುತ್ತಾರೆ, ಏಕೆ? ಏಕೆಂದರೆ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ಮಾರಾಟ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ಅಷ್ಟೆ ಅಲ್ದೆ
ನೆನಪಿಡಿ : ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡ ಬೇಕು. ಎಂದು ಫೇಸ್ ಬುಕ್ ಫೇಜ್ ನಲ್ಲಿ ಬರೆದುಕೊಂಡಿದಾರೆ.

ನಟ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ ಮೇಲೆ ನಟ ಚೇತನ್ ಅಹಿಂಸಾ ಬಿಜೆಪಿ ಅಷ್ಟೆ ಅಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧವೂ ತಮ್ಮ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.