• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾನು ಕೆಟ್ಟವನು ರಾಜಕಾರಣಕ್ಕೆ ಬರಲ್ಲ! ಸತ್ತರೂ ಕಲಾವಿದನಾಗಿ ಸಾಯ್ತೀನಿ… ಕರುಣಾನಿಧಿ ಕರೆದರೂ ರಾಜಕೀಯ ನೋ ಅಂದಿದ್ದರು ಭಾರತಿರಾಜಾ

ಕರುಣಾನಿಧಿ, ಜಯಲಲಿತಾ ಕರೆದರೂ ರಾಜಕೀಯ ಪ್ರವೇಶಿಸಲಿಲ್ಲ....

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in Top Story, ಇದೀಗ, ದೇಶ, ಸಿನಿಮಾ
0
ನಾನು ಕೆಟ್ಟವನು ರಾಜಕಾರಣಕ್ಕೆ ಬರಲ್ಲ! ಸತ್ತರೂ ಕಲಾವಿದನಾಗಿ ಸಾಯ್ತೀನಿ… ಕರುಣಾನಿಧಿ ಕರೆದರೂ ರಾಜಕೀಯ ನೋ ಅಂದಿದ್ದರು ಭಾರತಿರಾಜಾ
Share on WhatsAppShare on FacebookShare on Telegram

ಬೆಂಗಳೂರು : “ನಾನು ಕೆಟ್ಟವನು. ಹಾಗಾಗಿ ರಾಜಕೀಯ ಪ್ರವೇಶಿಸುವುದಿಲ್ಲ. ನಾನು ಸತ್ತರೂ ಚಲನಚಿತ್ರ ಕಲಾವಿದನಾಗಿ ಸಾಯುವುದು ನನ್ನ ಆಸೆ…
-ಹೀಗೆ ಹೇಳಿದ್ದರಂತೆ ಖ್ಯಾತ ನಿರ್ದೇಶಕ ಭಾರತಿ ರಾಜಾ. ಹೌದು, ಭಾರತಿ ರಾಜಾ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕ. ಹಲವು ಸೂಪರ್‌ ಹಿಟ್‌ ಸಿನಿಮಾ ಕೊಡುವ ಮೂಲಕ ಯಶಸ್ವೀ ನಿರ್ದೇಶಕರಾಗಿ ಗುರುತಿಸಿಕೊಂಡವರು.

ADVERTISEMENT
Sushmita Dev on Mamata : ರಾಜಕೀಯದಲ್ಲಿ ಯಾವ ನಿರ್ಧಾರ ಪಡೆಯಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ..!

ಹೊಸ ಅಲೆಯ ಸಿನಿಮಾ ಮೂಲಕ ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದವರು ರಾಜಾ. ಅನೇಕ ಸೆಲಿಬ್ರಿಟೀಸ್‌ ರಾಜಕಾರಣಕ್ಕೆ ಬಂದಿರುವುದು ಗೊತ್ತೇ ಇದೆ. ಆದರೆ, ಭಾರತಿ ರಾಜಾ ಅವರಿಗೆ ರಾಜಕೀಯ ಪ್ರವೇಶಿಸುವಂತೆ ಹಲವು ಪಕ್ಷದ ಮುಖಂಡರು ಒತ್ತಾಯ ಮಾಡಿದ್ದರು. ಆದರೆ, ಭಾರತಿ ರಾಜ ಮಾತ್ರ ಯಾರ ಮಾತಿಗೂ ಬಗ್ಗದೆ ನೋ ಅಂದಿದ್ದರು.

ಕರುಣಾನಿಧಿ, ಜಯಲಲಿತಾ ಕರೆದರೂ ರಾಜಕೀಯ ಪ್ರವೇಶಿಸಲಿಲ್ಲ:

ಈ ಹಿಂದೆ ಹಿರಿಯ ನಿರ್ದೇಶಕ ಭಾರತಿರಾಜ ಅವರಿಗೆ ರಾಜಕೀಯ ಪ್ರವೇಶಿಸಲು ಆಹ್ವಾನ ಬಂದಿದ್ದು ನಿಜ. ಆದರೆ, ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಥೇಣಿ ಜಿಲ್ಲೆಯವರಾದ ಭಾರತಿರಾಜ ಅವರು 1977 ರಲ್ಲಿ ಬಿಡುಗಡೆಯಾದ ’16 ವಯತಿನಿಲೆ’ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದರು. ನಂತರದ ದಿನಗಳಲ್ಲಿ ‘ಕೆಜಕೆ ಪೋಗಮ್ ರೈಲ್’ ಮತ್ತು ‘ಸಿಕ್ಕಪ್ಪು ರೋಜಕ್ಕಲ್’ ಸೇರಿದಂತೆ ಹಲವು ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದರು.
ತಮಿಳು ಸಿನಿಮಾವನ್ನು ಸ್ಟುಡಿಯೋದಿಂದ ಹೊರಗೆ ತಂದ ಕೀರ್ತಿ ಭಾರತಿರಾಜ ಅವರಿಗೆ ಸಲ್ಲುತ್ತದೆ. ಭಾರತಿರಾಜ ಅವರು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದವರು. ಅವರಿಗೆ 2004 ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ಇದನ್ನೂ ಓದಿ : ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಚಿತ್ರರಂಗದಲ್ಲಿ ಅದ್ಭುತ ನಟರು ಹೌದು, ನಿರ್ದೇಶಕರೂ ಹೌದು. ಆದರೆ, ರಾಜಕೀಯದಲ್ಲಿ ಛಾಪು ಮೂಡಿಸುವ ಅವಕಾವಿತ್ತಾದರೂ, ಅದನ್ನು ನಿರಾಕರಿಸಿದರು. ಮಣಿರತ್ನಂ ಅವರ ‘ಆಯುಧ ಏಶುತ್’ ಚಿತ್ರದಲ್ಲಿ ರಾಜಕಾರಣಿಯ ಪಾತ್ರ ನಿರ್ವಹಿಸಿದ್ದ ಅವರು, ರಿಯಲ್ ರಾಜಕಾರಣಿಯಾಗಲು ಇಷ್ಟಪಡಲಿಲ್ಲ. ಯಾಕೆ ರಾಜಕೀಯ ಪ್ರವೇಶಿಲಿಲ್ಲ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಭಾರತಿರಾಜ್.

Gruhalakshmi Scheme : ಗ್ಯಾರೆಂಟಿ ಯೋಜನೆಯಲ್ಲಿ ಪರಿಷ್ಕರಣೆ.! #pratidhvani

ಈ ಹಿಂದೆ ಆಂಧ್ರದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಕಲ್ಯಾಣ ಸಚಿವೆಯಾಗಿದ್ದ ನಟಿ ರೋಜಾ ಅವರಿಗೆ ತಮಿಳು ಚಲನಚಿತ್ರೋದ್ಯಮದ ಪರವಾಗಿ ನಿರ್ದೇಶಕ ಭಾರತಿರಾಜ ಅವರ ನೇತೃತ್ವದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಆಗ ಮಾತನಾಡಿದ ಭಾರತಿರಾಜ, “ರೋಜಾ ನನಗೆ ಮೊದಲು ಪರಿಚಯವಾದಾಗ, ಅವರು ನನಗೆ ಗುಲಾಬಿ ಹೂವುಗಳಿಂದ ಹಾರ ಹಾಕಿದರು, ಆದ್ದರಿಂದ ನಾನು ಅವರಿಗೆ ರೋಜಾ ಎಂದು ಹೆಸರಿಟ್ಟಿದ್ದೆ ಎಂಬುದನ್ನು ಹೇಳಿಕೊಂಡಿದ್ದರು. ಒಳ್ಳೆಯ ನಿರ್ದೇಶಕರಾಗಿದ್ದ ಅವರಿಗೆ ಜನಮನ್ನಣೆ ಸಾಕಷ್ಟು ಇತ್ತು.

ಸ್ವತಃ ಎಂಜಿಆರ್‌, ಕರುಣಾನಿಧಿ, ಜಯಲಲಿತಾ ಸೇರಿದಂತೆ ಅನೇಕ ರಾಜಕೀಯ ನಾಯಕರು ರಾಜಕೀಯ ಪ್ರವೇಶಿಸುವಂತೆ ಕೋರಿದ್ದರು. ಆಗ, ನಾನು ಕೆಟ್ಟವನು. ನಾನು ಸತ್ತರೂ ಚಲನಚಿತ್ರ ಕಲಾವಿದನಾಗಿ ಸಾಯುವುದು ನನ್ನ ಆಸೆʼ ಹಾಗಾಗಿ ರಾಜಕೀಯ ಬೇಡ ಎಂದಿದ್ದೆ ಎಂದು ಹೇಳಿಕೆ ಕೊಟ್ಟಿದ್ದರು.

Tags: BharatirajaCinema newsEntertainment Newsindian film industryJ JayalalithaM KarunanidhiNational award winnerPratidhvaniState Award WinnerTamil DirectorTamil Politics
Previous Post

ದುಬೈನಿಂದ ಚಿನ್ನ ಸಾಗಣೆಗೆ ಹೈಟೆಕ್ ಐಡಿಯಾ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಯಲಾಯಿತು ರಹಸ್ಯ

Next Post

ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯವೇ? ಖರ್ಗೆ-ಬಿಜೆಪಿ ನಡುವೆ ತೀವ್ರ ವಾಗ್ಯುದ್ಧ

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯವೇ? ಖರ್ಗೆ-ಬಿಜೆಪಿ ನಡುವೆ ತೀವ್ರ ವಾಗ್ಯುದ್ಧ

ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯವೇ? ಖರ್ಗೆ-ಬಿಜೆಪಿ ನಡುವೆ ತೀವ್ರ ವಾಗ್ಯುದ್ಧ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada