ಕಳೆದ ಭಾನುವಾರ ಟಿಬಿ ಡ್ಯಾಂನ (TB dam) 19ನೇ ಕ್ರಸ್ಟ್ ಗೇಟ್ ಕಿತ್ತು ಹೋದ ಹಿನ್ನೆಲೆಯಲ್ಲಿ ಸದ್ಯ ಸ್ವಾಪ್ ಲಾಗ್ ಗೇಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ನಿನ್ನೆ ಸಂಜೆ ನಂತರ ಕತ್ತಲು ಕವಿದಿದ್ದರಿಂದ ಸ್ಟಾಪ್ ಲಾಗ್ ಕ್ರೇನ್ ಮೂಲಕ ಇಳಿಸಲು ಕಷ್ಟವಾದ ಕಾರಣ ನಿರ್ಮಾಣ ಕಾರ್ಯ ನಿಲ್ಲಿಸಲಾಗಿತ್ತು.
ಮಂದ ಬೆಳಕಿನಲ್ಲಿ ಕ್ರೇನ್ (Crane) ಬ್ಯಾಲೆನ್ಸ್ ವ್ಯತ್ಯಾಸವಾಗುವ ಸಾಧ್ಯತೆ ಇರೋದ್ರಿಂದ ರಿಸ್ಕ್ ಬೇಡ ಅಂತ ನುರಿತ ತಂತ್ರಜ್ಞರು ಕನ್ನಯ್ಯ ನಾಯ್ಡು (Kannaiah naidu) ಅವರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಕೈಗೊಂಡು, ಕಾರ್ಯಾಚರಣೆ ಬೆಳಗಿನವರೆಗೆ ಸ್ಥಗಿತಗೊಳಿಸಲಾಯ್ತು.
ಇಂದು ಬೆಳಗ್ಗಿನಿಂದಲೇ ಗೇಟ್ ಇಳಿಸುವ ಕಾರ್ಯ ಚುರುಕುಗೊಳ್ಳಲಿದ್ದು, 4 ಕ್ರೇನ್‌ಗಳ ಸಹಾಯದ ಮೂಲಕ ಸ್ಟಾಪ್‌ಲಾಗ್ ಗೇಟ್ ಕೆಳಗಿಸಿ, ಆ ಮೂಲಕ ಕನಿಷ್ಠ 90 ಟಿಎಂಸಿ ನೀರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕನ್ನಯ್ಯ ಮತ್ತು ತಂಡ ಶತಪ್ರಯತ್ನ ನಡೆಸಲಿದ್ದಾರೆ.