ಬಿಗ್ ಬಾಸ್ ಕನ್ನಡ ಸೀಸನ್ 11, 9 ನೇ ವಾರಕ್ಕೆ ಕಾಲಿಡುತ್ತಿದೆ, ಈ ವಾರ ದೊಡ್ಮನೆಯಲ್ಲಿ ಎಲ್ಲಾ ಟಾಸ್ಕ್ ಗಳು ಕೂಡ ತುಂಬಾನೇ ವಿಭಿನ್ನವಾಗಿದ್ದು ,ಕಂಟೆಸ್ಟೆಂಟ್ಗಳು ಎರಡು ತಂಡವಾಗಿ ಅಷ್ಟೇ ಜೋಶ್ ನಲ್ಲಿ ಆಟವನ್ನು ಆಡಿದ್ದಾರೆ.

ಇನ್ನು ಶುಕ್ರವಾರ ಬಂತು ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಯಾರು ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡೋದು ಸಹಜ, ಜೊತೆಗೆ ಉತ್ತಮ ಹಾಗೂ ಕಳಪೆ ಯಾರಿಗೆ ಸಿಗುತ್ತೆ ಅನ್ನುವ ಊಹೆಯನ್ನು ಜನ ಮಾಡ್ತಾನೆ ಇರ್ತಾರೆ. ಈ ವಾರ ಹೆಚ್ಚಿನ ಆಟಗಳಲ್ಲಿ ಗೆದ್ದು ಕ್ಯಾಪ್ಟನ್ಸಿ ಆಟಕ್ಕೆ ಶೋಭಾ ಶೆಟ್ಟಿ ಅವರ ತಂಡ ಆಯ್ಕೆಯಾಗಿದೆ.

ಕ್ಯಾಪ್ಟನ್ಸಿ ಓಟದಲ್ಲಿ ಶೋಭ ಶೆಟ್ಟಿ ,ಉಗ್ರ ಮಂಜು, ರಜತ್, ಹನುಮಂತ ಹಾಗೂ ಚೈತ್ರ ಕುಂದಾಪುರ ಆಡಿದ್ದು. ಪ್ರತಿಯೊಬ್ಬರು ಕೂಡ ಜಿದ್ದಾ ಜಿದ್ದಿಗೆ ಬಿದ್ದು ಆಡಿ ಈ ರೇಸ್ ನಲ್ಲಿ ಉಗ್ರಂ ಮಂಜು ಗೆದ್ದು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗ್ತಾರೆ..ಇನ್ನು ಗೋಲ್ಡ್ ಸುರೇಶ್ ಮೇಲೆ ಬಳಸಿದಂತ ಕೆಟ್ಟ ಪದಗಳು ಸರಿ ಅಲ್ಲವೆಂದು ಹೆಚ್ಚು ಸ್ಪರ್ಧಿಗಳು ರಜತ್ ಹೆಸರನ್ನು ಆಯ್ಕೆ ಮಾಡಿ ಕಳಪೆ ನೀಡುತ್ತಾರೆ..

ಬಿಗ್ ಬಾಸ್ ನ ಫಾಲೋ ಮಾಡುವ ಪ್ರೇಕ್ಷಕರು, ಮಾನಸ ಅವರಿಗೆ ಕೆಟ್ಟದಾಗಿ ಮಾತನಾಡಿದ ಕಾರಣ ಲಾಯರ್ ಜಗದೀಶ್ ಮನೆಯಿಂದ ಹೊರ ಬಂದಿದ್ದಾರೆ, ಹಾಗಿದ್ರೆ ರಜತ್ ಬಳಸಿದ ಪದಗಳು ಅಷ್ಟೆ ಕೆಟ್ಟದಾಗಿತ್ತು, ಹಾಗಾಗಿ ಈ ವಾರ ಮನೆಯಿಂದ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಹೊರ ಬರಬೇಕು ಎಂಬ ಮಾತುಗಳು ಜೋರಾಗಿ ನಡಿತಾ ಇದೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಮಂಜು ಹಾಗೂ ತ್ರಿವಿಕ್ರಮ್ ಪ್ಲಾನ್ ಮಾಡಿದಂತೆ ಈ ವಾರ ಮಂಜು ಅವರು ರೇಸ್ ನಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.