• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೊಡಗಿನ ವೀರ ಸೇನಾನಿಗಳ ವಿರುದ್ದ ಅವಹೇಳನಕಾರಿ ಕಾಮೆಂಟ್‌ ;ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
November 22, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಮಡಿಕೇರಿ: ಕೊಡಗಿನ ವೀರ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ (KM Cariappa) ಹಾಗು ಜನರಲ್ ತಿಮ್ಮಯ್ಯನವರ ಬಗ್ಗೆ ಶ್ರೀವತ್ಸ ಭಟ್‌ ಎಂಬಾತ ವಾಟ್ಸಾಆಪ್ ಗ್ರೂಪ್ ಒಂದರಲ್ಲಿ ಹೀನಾಯ ಪದ ಬಳಕೆ ಮಾಡಿರುವ ವಿರುದ್ಧ ಜಿಲ್ಲಾದ್ಯಂತ ತೀವ್ರ ಆಕ್ರೋಶ ಭುಗಿಲೆದ್ದಿದೆ.

ADVERTISEMENT

ಹತ್ತಾರು ಜನಪರ ಮತ್ತು ಕೊಡವ ಸಂಘಟನೆಗಳು ಅವಹೇಳನೆಯನ್ನು ತೀವ್ರವಾಗಿ ಖಂಡಿಸಿದ್ದು ಮಡಿಕೇರಿ ಕೊಡವ ಸಮಾಜ ತೀವ್ರ ರೀತಿಯಲ್ಲಿ ಖಂಡನೇ ವ್ಯಕ್ತ ಪಡಿಸಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇಡೀ ವಿಶ್ವವೇ ಹೆಮ್ಮೆ ಪಡುವ ವೀರಸೇನಾನಿಗೆ ಹಾಗು ಕೊಡವ ಜನಾಂಗಕ್ಕೆ ಅಪಮಾನ ಮಾಡಿರುವುದು ದೇಶಕ್ಕೆ ಅಪಮಾನ ಎಸಗಿದಂತೆ ಅಂತ ವ್ಯಕ್ತಿಯನ್ನು ಕೂಡಲೇ ಬಂಧಿಸುವ ಮೂಲಕ ಕಠಿಣಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.

ಭಾರತದ ಹೆಮ್ಮೆಯ ಸೇನಾನಿ ಪ್ರಥಮ ಮಹಾ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತು ಕೊಡವ ಜನಾಂಗದ ಬಗ್ಗೆ ವ್ಯಾಟ್ಸ್ಆ್ಯಪ್ ಮೂಲಕ ಅವಹೇಳನಕಾರಿ ಸಂದೇಶವನ್ನು ಹರಿಬಿಟ್ಟ ಕಿಡಿಗೇಡಿ ಕೃತ್ಯವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್‌ ಗೌಡ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ರೀತ್ಯಾ ಶಿಕ್ಷೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕರು ಸೂಚಿಸಿದ್ದಾರೆ.ವೀರಾಜಪೇಟೆ ಶಾಸಕ ಏ ಎಸ್‌ ಪೊನ್ನಣ್ಣ ಅವರೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಆರೋಪಿಯ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಯುವ ವಿಭಾಗದ ಅದ್ಯಕ್ಷ ಚಮ್ಮಟೀರ ಪ್ರವೀಣ್‌ ಉತ್ತಪ್ಪ ಅವರು ಕೊಡಗಿನ ಪರಂಪರೆ , ಹಿನ್ನೆಲೆ , ಇತಿಹಾಸ ತಿಳಿಯದ ಮೂರ್ಖರು ಮಾತ್ರ ಈ ರೀತಿಯ ಅಸಭ್ಯ ಕಾಮೆಂಟ್‌ ಮಾಡಲು ಸಾದ್ಯ. ಇದು ಆತನ ಹೀನ ಮನಸ್ಥಿತಿಯನ್ನು ತೋರಿಸುತ್ತದೆಯಲ್ಲದೆ ವೀರ ಸೇನಾನಿಗಳ ಕುರಿತು ಜನತೆ ಹೊಂದಿರುವ ಉನ್ನತ ಭಾವನೆ ಕುಂದಾಗಿಲ್ಲ ಎಂದರಲ್ಲದೆ ಇಂತವರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈತನು ಮಂಗಳೂರು ಮೂಲದವನಾಗಿದ್ದು ಮಡಿಕೇರಿಯಲ್ಲಿ ವಕೀಲಿ ವೃತ್ತಿ ಮಾಡುತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Tags: brave soldiers of KodaguGeneral ThimmaiahKariappaMadikeriMarshal K.M.WhatsApp group.
Previous Post

ರಾಜ್ಯಾದ್ಯಂತ ಬಿಜೆಪಿ ವಕ್ಫ್‌ ಹೋರಾಟ..

Next Post

ಒಂದೇ ವಾರಕ್ಕೆ ಎಲಿಮಿನೇಟ್ ಆಗ್ತಾರಾ ರಜತ್ ?ಕ್ಯಾಪ್ಟನ್ಸಿ ರೇಸ್ ನಲ್ಲಿ ಗೆದ್ದವರು ಯಾರು?

Related Posts

ನಾಸಾದಿಂದ ಮಹತ್ವದ ಎಚ್ಚರಿಕೆ:ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ!
Top Story

ನಾಸಾದಿಂದ ಮಹತ್ವದ ಎಚ್ಚರಿಕೆ:ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ!

by ಪ್ರತಿಧ್ವನಿ
June 8, 2026
0

ಸೂರ್ಯನ ಮೇಲ್ಮೈಯಲ್ಲಿ ಸಂಭವಿಸಿರುವ ಪ್ರಬಲ ಸ್ಫೋಟದ ಪರಿಣಾಮವಾಗಿ ಭೂಮಿಯತ್ತ ಸೌರ ಕಣಗಳ ಪ್ರವಾಹ ವೇಗವಾಗಿ ಸಾಗುತ್ತಿದ್ದು, ಭೂಕಾಂತೀಯ ಬಿರುಗಾಳಿ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ...

Read moreDetails
“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

“ಮತ್ತೊಬ್ಬ ಡಿಕೆ ಶಿವಕುಮಾರ್ ಸೃಷ್ಟಿಸಲು ಬಿಜೆಪಿ-ಜೆಡಿಎಸ್‌ಗೆ ಸಾಧ್ಯವಿಲ್ಲ”; ಕನಕಪುರದಲ್ಲಿ ಸಿಎಂ ಸವಾಲು

June 8, 2026
“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

“2028ರಲ್ಲೂ ಜನಸೇವೆ ಮಾಡುವ ಅವಕಾಶ ನೀಡಿ”; ಕನಕಪುರ ಜನರ ಮುಂದೆ ಸಿಎಂ ಡಿಕೆ ಶಿವಕುಮಾರ್ ಮನವಿ

June 8, 2026
ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಕ್ಷಣಗಣನೆ; ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ

June 8, 2026
ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

ಡಿಜಿಟಲ್‌ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು

June 8, 2026
Next Post
ಒಂದೇ ವಾರಕ್ಕೆ ಎಲಿಮಿನೇಟ್ ಆಗ್ತಾರಾ ರಜತ್ ?ಕ್ಯಾಪ್ಟನ್ಸಿ ರೇಸ್ ನಲ್ಲಿ ಗೆದ್ದವರು ಯಾರು?

ಒಂದೇ ವಾರಕ್ಕೆ ಎಲಿಮಿನೇಟ್ ಆಗ್ತಾರಾ ರಜತ್ ?ಕ್ಯಾಪ್ಟನ್ಸಿ ರೇಸ್ ನಲ್ಲಿ ಗೆದ್ದವರು ಯಾರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada