• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರಲ್ಲಿ ಭೀಕರ ನರಮೇಧ : ಪತ್ನಿ ಸೇರಿ 7 ಮಂದಿಯನ್ನು ಬರ್ಬರ ಹ*ತ್ಯೆಗೈದ ಸೈಕೋಪಾತ್ ಪತಿ!

Shivakumar by Shivakumar
November 6, 2026
in Top Story, ಕರ್ನಾಟಕ
0
Horrific massacre in Bengaluru: Psychopathic husband brutally murders 7 people, including his wife!
Share on WhatsAppShare on FacebookShare on Telegram

ಬೆಂಗಳೂರು : ಬೆಂಗಳೂರಿನಲ್ಲಿ (Bengaluru) ಬೆಚ್ಚಿಬೀಳಿಸುವ ಘೋರ ಕೃತ್ಯವೊಂದು ನಡೆದಿದ್ದು, ಕ್ಯಾಬ್ ಚಾಲಕನೊಬ್ಬ ಪತ್ನಿಯ ಮೇಲಿನ ದ್ವೇಷಕ್ಕೆ ಆಕೆಯ ತವರು ಮನೆಯ ಏಳು ಮಂದಿಯನ್ನು ಬರ್ಬರವಾಗಿ ಕೊಲೆ (Murder) ಮಾಡಿದ್ದಾನೆ.

ADVERTISEMENT

ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪ ಘಟನೆ ನಡೆದಿದೆ. ಆರೋಪಿ ಇಂದೂಶೇಖರ್ ಎಂಬ ಕ್ಯಾಬ್ ಚಾಲಕ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸುನೀತಾ ಎಂಬಾಕೆಯನ್ನು ವಿವಾಹವಾಗಿದ್ದನು. ಪತಿ-ಪತ್ನಿ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ದಾಂಪತ್ಯ ಕಲಹದ ವೇಳೆ ಸುನೀತಾ ಅವರ ತವರು ಮನೆಯವರು ಆಕೆಯ ಪರವಾಗಿ ನಿಂತು ರಾಜಿ ಸಂಧಾನ ಮಾಡುತ್ತಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಶೇಖರ್, ಪತ್ನಿಯ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದನು.

ಭಾಷ್ಯಂ ಸರ್ಕಲ್ ಸಮೀಪವಿರುವ ತನ್ನ ಮನೆಗೆ ಆರೋಪಿ ಕುಟುಂಬಸ್ಥರನ್ನು ಒಬ್ಬೊಬ್ಬರನ್ನಾಗಿ ಕರೆಸಿಕೊಂಡಿದ್ದಾನೆ. ಪಾರ್ಟಿ ಮಾಡುವ ನೆಪವೊಡ್ಡಿ ಬಾಮೈದರನ್ನು ಮನೆಗೆ ಕರೆಸಿಕೊಂಡಿದ್ದಲ್ಲದೆ, ಉಳಿದವರನ್ನೂ ಒಂದೊಂದಾಗಿ ಕರೆಸಿ ಒರಳಕಲ್ಲಿನಿಂದ ತಲೆಗೆ ಹೊಡೆದು ರಾಕ್ಷಸೀಯವಾಗಿ ಕೊಂದಿದ್ದಾನೆ. ಪತ್ನಿ ಸುನೀತಾ, ಅತ್ತೆ ರೂಪವತಿ, ಬಾಮೈದರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯ ಹಾಗೂ ನಳಿನಿ ಮತ್ತು ಏಳು ವರ್ಷದ ಬಾಲಕ ಪುನೀತ್ ಸೇರಿದಂತೆ ಒಟ್ಟು ಏಳು ಜನರನ್ನು ಈತ ಬಲಿ ಪಡೆದಿದ್ದಾನೆ.

ಕೊಲೆಯಾದವರ ಪೈಕಿ ನಳಿನಿ ಎಂಬಾಕೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಅನುಮಾನದ ಮೇರೆಗೆ ಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಭೀಕರ ಸರಣಿ ಹತ್ಯಾಕಾಂಡ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆಯೇ ಈ ಕೃತ್ಯ ನಡೆದಿದ್ದು, ತಡವಾಗಿ ಬಯಲಾಗಿದೆ.

ಹತ್ಯೆ ಮಾಡಿದ ಬಳಿಕ ಆರೋಪಿ ಮೃತದೇಹಗಳನ್ನು ಚಿಕ್ಕಬಳ್ಳಾಪುರದ ನಂದಿಬೆಟ್ಟದ ತಪ್ಪಲಿನಲ್ಲಿ ಎಸೆದು ಬಂದಿದ್ದಾನೆ. ಸದ್ಯ ಪೊಲೀಸರು ಏಳು ವರ್ಷದ ಪುನೀತ್ ಎಂಬ ಬಾಲಕನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಉಳಿದವರ ಮೃತದೇಹಗಳ ಶೋಧ ಕಾರ್ಯ ಮುಂದುವರಿದಿದೆ. ಆರೋಪಿ ಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದು, ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹5,000 ಬರ ಪರಿಹಾರ ನೀಡಲು ಸರ್ಕಾರ ನಿರ್ಧಾರ

Tags: bengaluruhusbandmurder
Previous Post

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹5,000 ಬರ ಪರಿಹಾರ ನೀಡಲು ಸರ್ಕಾರ ನಿರ್ಧಾರ

Next Post

ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

Related Posts

Central government relaxes passport and visa rules for foreign nationals residing in India
Top Story

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

by Shivakumar
November 6, 2026
0

ಭಾರತದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ  ಶ್ರೀಲಂಕಾ ತಮಿಳರು, ಟಿಬೆಟಿಯನ್ನರು ಹಾಗೂ ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತ ನಿರಾಶ್ರಿತರು ಸೇರಿದಂತೆ ಹಲವು ವರ್ಗಗಳ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್ (passport) ಮತ್ತು ವೀಸಾ...

Read moreDetails
Application filed by actor Darshan seeking treatment for spinal pain to be heard today

ಬೆನ್ನುಹುರಿ ನೋವಿಗೆ ಚಿಕಿತ್ಸೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ

November 6, 2026
ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

November 6, 2026
Good news for the state's farmers: Government decides to provide ₹5,000 as drought relief

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹5,000 ಬರ ಪರಿಹಾರ ನೀಡಲು ಸರ್ಕಾರ ನಿರ್ಧಾರ

November 6, 2026
No need to provide a photocopy of your Aadhaar card at hotels and hospitals anymore! A significant decision by the UIDAI

ಇನ್ಮುಂದೆ ಹೋಟೆಲ್‌, ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ನೀಡುವ ಅಗತ್ಯವಿಲ್ಲ! UIDAI ಮಹತ್ವದ ನಿರ್ಧಾರ

November 6, 2026
Next Post
ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada