• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹5,000 ಬರ ಪರಿಹಾರ ನೀಡಲು ಸರ್ಕಾರ ನಿರ್ಧಾರ

Shivakumar by Shivakumar
November 6, 2026
in Top Story, ಕರ್ನಾಟಕ
0
Good news for the state's farmers: Government decides to provide ₹5,000 as drought relief
Share on WhatsAppShare on FacebookShare on Telegram

ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಾಗೂ ಬರಗಾಲದಿಂದ ಕಂಗಾಲಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು, ಸಂಕಷ್ಟದಲ್ಲಿರುವ ಪ್ರತಿ ರೈತರಿಗೆ ಗರಿಷ್ಠ 2 ಹೆಕ್ಟೇರ್ ಮಿತಿಗೊಳಿಸಿ 5,000 ರೂಪಾಯಿಗಳ ಬರ ಪರಿಹಾರ (Drought Relief) ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಘೋಷಿಸಿದ್ದಾರೆ.

ADVERTISEMENT

ವಿಧಾನಸೌಧದಲ್ಲಿ ಮುಂಗಾರು ಅವಧಿಯ ಬೆಳೆ ಹಾನಿಗೆ ಸಂಬಂಧಿಸಿದಂತೆ ಮೊದಲ ಕಂತಿನ ಮಧ್ಯಂತರ ಪರಿಹಾರವಾಗಿ 2,500 ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಪ್ರಕ್ರಿಯೆಗೆ ಸಿಎಂ ಅಧಿಕೃತವಾಗಿ ಚಾಲನೆ ನೀಡಿದರು.

ರಾಜ್ಯದ 226 ತಾಲೂಕುಗಳು ಬರಪೀಡಿತ ಎಂದು ಅಧಿಸೂಚನೆ

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ತೀವ್ರ ಬರಕ್ಕೆ ತುತ್ತಾಗಿವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು. ಒಟ್ಟು 240 ತಾಲ್ಲೂಕುಗಳ ಪೈಕಿ 226 ತಾಲ್ಲೂಕುಗಳನ್ನು ಹಾಗೂ 850 ಹೋಬಳಿಗಳ ಪೈಕಿ 765 ಹೋಬಳಿಗಳನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶಗಳೆಂದು ಅಧಿಸೂಚನೆ ಹೊರಡಿಸಲಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 16ರ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ 495 ಮಿಲಿಮೀಟರ್ ಮಳೆಯಾಗಿದ್ದು, ವಾಡಿಕೆ ಮಳೆಯಾದ 766 ಮಿಲಿಮೀಟರ್‌ಗೆ ಹೋಲಿಸಿದರೆ ಒಟ್ಟಾರೆ ಶೇಕಡಾ 35ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇಕಡಾ 47ರಷ್ಟು, ಉತ್ತರ ಒಳನಾಡಿನಲ್ಲಿ ಶೇಕಡಾ 42ರಷ್ಟು, ಮಲೆನಾಡಿನಲ್ಲಿ ಶೇಕಡಾ 37ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇಕಡಾ 27ರಷ್ಟು ಮಳೆ ಕೊರತೆಯಾಗಿದೆ ಎಂದು ಅವರು ವಿವರಿಸಿದರು.

57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ; ₹62,481 ಕೋಟಿ ಆರ್ಥಿಕ ನಷ್ಟ

ಕಂದಾಯ ಮತ್ತು ಕೃಷಿ ಇಲಾಖೆಗಳು ನಡೆಸಿದ ಜಂಟಿ ಬೆಳೆಹಾನಿ ಸಮೀಕ್ಷೆಯ ವರದಿಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ರಾಜ್ಯದಾದ್ಯಂತ ನಿಗದಿಯಾಗಿದ್ದ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 69.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು ಎಂದು ತಿಳಿಸಿದರು. ಇದರಲ್ಲಿ ಬರೋಬ್ಬರಿ 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ಶೇಕಡಾ 83.26 ರಷ್ಟು ಬಿತ್ತನೆ ಪ್ರದೇಶ ನಾಶವಾಗಿದೆ. ಪರಿಣಾಮವಾಗಿ ರಾಜ್ಯದ ಕೃಷಿ ಕ್ಷೇತ್ರಕ್ಕೆ ಒಟ್ಟು 62,481.88 ಕೋಟಿ ರೂಪಾಯಿಗಳಷ್ಟು ಭಾರೀ ಆರ್ಥಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

₹22,400 ಕೋಟಿ ಎನ್‌ಡಿಆರ್‌ಎಫ್ ನೆರವಿಗಾಗಿ ಕೇಂದ್ರಕ್ಕೆ ಮನವಿ

ರಾಜ್ಯದಲ್ಲಿ ಉಂಟಾಗಿರುವ ಅಭೂತಪೂರ್ವ ನಷ್ಟವನ್ನು ಸರಿದೂಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ 22,400.58 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ತಿಳಿಸಿದರು. ಇದರಲ್ಲಿ ಬೆಳೆಹಾನಿ ಇನ್‌ಪುಟ್ ಸಬ್ಸಿಡಿಗೆ 7,943.55 ಕೋಟಿ, ಕುಡಿಯುವ ನೀರಿಗೆ 1,727 ಕೋಟಿ, ಜಾನುವಾರು ರಕ್ಷಣೆಗೆ 583.04 ಕೋಟಿ ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗೆ 12,146.99 ಕೋಟಿ ರೂಪಾಯಿಗಳ ಅನುಗ್ರಹ ಪರಿಹಾರ ಒಳಗೊಂಡಿದೆ. ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್ ನಿಯಮಗಳನ್ನು ಸಡಿಲಿಸಿ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ಗೃಹ ಸಚಿವರಿಗೆ ಈಗಾಗಲೇ ಐದಕ್ಕೂ ಹೆಚ್ಚು ಬಾರಿ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಡಿಬಿಟಿ ಮೂಲಕ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ

ಪರಿಹಾರ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿ, ವಿಳಂಬ ಮತ್ತು ಅಕ್ರಮಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ‘ಪರಿಹಾರ’ ಪೋರ್ಟಲ್, ಡಿಜಿಟಲ್ ಬೆಳೆ ಸಮೀಕ್ಷೆ ಹಾಗೂ ‘ಫ್ರೂಟ್ಸ್’ (FRUITS) ದತ್ತಾಂಶಗಳನ್ನು ಸಂಯೋಜಿಸಿ ಪಾರದರ್ಶಕ ಡಿಜಿಟಲ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ವಿವರಿಸಿದರು. ಈ ವ್ಯವಸ್ಥೆಯಿಂದಾಗಿ ರೈತರು ಯಾವುದೇ ಕಚೇರಿಗಳಿಗೆ ಅಲೆಯದೆ ಅಥವಾ ಭೌತಿಕ ದಾಖಲೆಗಳನ್ನು ನೀಡದೆ, ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.

ರಾಜ್ಯದ ಸ್ವಂತ ಸಂಪನ್ಮೂಲದಿಂದಲೇ ಮೊದಲ ಕಂತು ಭರಿಸಿದ ಸರ್ಕಾರ

ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಇನ್ನೂ ಬಿಡುಗಡೆಯಾಗದಿದ್ದರೂ, ರೈತರ ಸಂಕಷ್ಟವನ್ನು ಗಮನಿಸಿ ಸದ್ಯಕ್ಕೆ ರಾಜ್ಯ ಸರ್ಕಾರದ ಸ್ವಂತ ಸಂಪನ್ಮೂಲಗಳಿಂದಲೇ ಈ ಮೊದಲ ಕಂತಿನ ಪರಿಹಾರವನ್ನು ಭರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪ್ರಸ್ತುತ 1,743.53 ಲಕ್ಷ ರೂಪಾಯಿಗಳ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಯಾದಗಿರಿ ಜಿಲ್ಲೆಯ ಅರ್ಹ ರೈತರಿಗೆ 16,830 ಲಕ್ಷ ರೂಪಾಯಿ ಇನ್‌ಪುಟ್ ಸಬ್ಸಿಡಿ ನಿಗದಿಯಾಗಿದೆ. ಉಳಿದ ಜಿಲ್ಲೆಗಳಲ್ಲೂ ಪರಿಹಾರ ವಿತರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೇಂದ್ರದಿಂದ ಎನ್‌ಡಿಆರ್‌ಎಫ್ ಅನುದಾನ ಬಂದ ತಕ್ಷಣ ಬಾಕಿ ಪರಿಹಾರ ಮೊತ್ತವನ್ನು ಪರಿಷ್ಕೃತ ದರಗಳಲ್ಲೇ ಒಂದೇ ಕಂತಿನಲ್ಲಿ ಪಾವತಿಸಲಾಗುವುದು. ಇದರೊಂದಿಗೆ ಬೆಳೆ ವಿಮೆ ಪರಿಹಾರವನ್ನೂ ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪರಿಹಾರ ಬಿಡುಗಡೆ ಕುರಿತು ಚರ್ಚಿಸಲು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಗಳನ್ನು ಭೇಟಿ ಮಾಡಲು ಸಮಯಾವಕಾಶ ಕೋರಲಾಗಿದ್ದು, ಶೀಘ್ರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ಹೇಳಿದರು.

Tags: CM DK ShivakumarDrought Reliefgood news
Previous Post

ಇನ್ಮುಂದೆ ಹೋಟೆಲ್‌, ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ನೀಡುವ ಅಗತ್ಯವಿಲ್ಲ! UIDAI ಮಹತ್ವದ ನಿರ್ಧಾರ

Next Post

ಬೆಂಗಳೂರಲ್ಲಿ ಭೀಕರ ನರಮೇಧ : ಪತ್ನಿ ಸೇರಿ 7 ಮಂದಿಯನ್ನು ಬರ್ಬರ ಹ*ತ್ಯೆಗೈದ ಸೈಕೋಪಾತ್ ಪತಿ!

Related Posts

Central government relaxes passport and visa rules for foreign nationals residing in India
Top Story

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

by Shivakumar
November 6, 2026
0

ಭಾರತದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ  ಶ್ರೀಲಂಕಾ ತಮಿಳರು, ಟಿಬೆಟಿಯನ್ನರು ಹಾಗೂ ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತ ನಿರಾಶ್ರಿತರು ಸೇರಿದಂತೆ ಹಲವು ವರ್ಗಗಳ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್ (passport) ಮತ್ತು ವೀಸಾ...

Read moreDetails
Application filed by actor Darshan seeking treatment for spinal pain to be heard today

ಬೆನ್ನುಹುರಿ ನೋವಿಗೆ ಚಿಕಿತ್ಸೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ

November 6, 2026
ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

November 6, 2026
Horrific massacre in Bengaluru: Psychopathic husband brutally murders 7 people, including his wife!

ಬೆಂಗಳೂರಲ್ಲಿ ಭೀಕರ ನರಮೇಧ : ಪತ್ನಿ ಸೇರಿ 7 ಮಂದಿಯನ್ನು ಬರ್ಬರ ಹ*ತ್ಯೆಗೈದ ಸೈಕೋಪಾತ್ ಪತಿ!

November 6, 2026
No need to provide a photocopy of your Aadhaar card at hotels and hospitals anymore! A significant decision by the UIDAI

ಇನ್ಮುಂದೆ ಹೋಟೆಲ್‌, ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ನೀಡುವ ಅಗತ್ಯವಿಲ್ಲ! UIDAI ಮಹತ್ವದ ನಿರ್ಧಾರ

November 6, 2026
Next Post
Horrific massacre in Bengaluru: Psychopathic husband brutally murders 7 people, including his wife!

ಬೆಂಗಳೂರಲ್ಲಿ ಭೀಕರ ನರಮೇಧ : ಪತ್ನಿ ಸೇರಿ 7 ಮಂದಿಯನ್ನು ಬರ್ಬರ ಹ*ತ್ಯೆಗೈದ ಸೈಕೋಪಾತ್ ಪತಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada