ಡಾ.ಸುಧಾರಕ್ ಕಾಂಗ್ರೆಸ್ ನಲ್ಲಿದ್ದಾಗ ಹಿಂದಿ ವಿರೋಧಿ ಹೇಳಿಕೆಯನ್ನು ಟ್ವೀಟ್ ಮಾಡಿ ಹಿಂದಿ ದಿವಸ್ ಮತ್ತು ಹಿಂದಿ ಹೇರಿಕೆಯ ವಿರುದ್ಧ ಹರಿಹಾಯ್ದಿದ್ದರು. ಬಿಜೆಪಿಗೆ ಸೇರಿದ ನಂತರ ಈಗ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು ಕನ್ನಡ ಪರ ಹೋರಾಟಗಾರ ಕಣ್ಣು ಕೆಂಪಾಗಿಸಿದೆ ಈ ಕುರಿತು ರೂಪೇಶ್ ರಾಜಣ್ಣ ಟ್ವೀಟರ್ ನಲ್ಲಿಯೇ ಡಾ.ಸುಧಾರಕ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಡಾ.ಸುಧಾಕರ್ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ನಲ್ಲಿದ್ದಾಗ ಹಿಂದಿ ವಿರೋಧಿ ಹೇಳಿಕೆಯನ್ನು ಟ್ವೀಟ್ ಮಾಡಿ ಹಿಂದಿ ದಿವಸ್ ಮತ್ತು ಹಿಂದಿ ಹೇರಿಕೆಯ ವಿರುದ್ಧ ಹರಿಹಾಯ್ದಿದ್ದರು. ಬಿಜೆಪಿಗೆ ಸೇರಿದ ನಂತರ ತಮ್ಮ ಕನ್ನಡಪರ ನಿಲುವನ್ನೆ ಬದಲಿಸಿದ್ದಾರೆ. ಈಗ ಬಿಎಲ್ ಸಂತೋಷ್ ಜೊತೆ ತೆಗಿಸಿಕೊಂಡ ಚಿತ್ರವನ್ನು ಫೋಸ್ಟ್ ಮಾಡಿ “ಇಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಬಿಎಲ್ ಸಂತೋಷ್ ಜಿ ಅವರನ್ನು ಭೇಟಿ ಮಾಡಿದೆ. ಕರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಪ್ರಯತ್ನಗಳನ್ನು ಸಂತೋಷ್ ಜಿ ಶ್ಲಾಘಿಸಿದರು ಮತ್ತು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ಈಗ ಕನ್ನಡ ಪರ ಹೋರಾಟಗಾರರ ಕಣ್ಣಿಗೆ ಬಿದಿದ್ದು ಟ್ವೀಟರ್ ನಲ್ಲೇ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
“ಪಕ್ಕದ ರಾಜ್ಯದವರ ನೋಡಿ ಕಲಿರಿ. ಇಬ್ಬರು ಕನ್ನಡಿಗರೇ ಆದ್ರೆ ಎಂಎಲ್ಎ ಡಾ.ಸುಧಾಕರ್ ಅವರು 2018 ರಲ್ಲಿ ಮಾಡಿದ್ದ ಟ್ವಿಟ್ ನೋಡಿ ಈಗ ಮಾಡ್ತಿರೋ ಹಿಂದಿ ಗುಲಾಮಗಿರಿ ನೋಡಿ. ನಿಮಗೆಲ್ಲಾ ಎಲ್ರಿ ಸ್ವಾಭಿಮಾನ ಅನ್ನೋದು ಬರಬೇಕು. ನಿಮ್ಮ ಈ ಆಟಗಳು, ನೀವು ಏನ್ ಮಾಡಿದ್ರು ಸಮರ್ಥನೆ ಮಾಡಿಕೊಳ್ಳೋ ಕೆಲವು ಗುಲಾಮಗಿರಿ ಮಕ್ಕಳು ಅಲ್ಲಿಗೆ ಕರ್ನಾಟಕದ ಸ್ಥಿತಿ ಅಷ್ಟೇ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದ್ದಾರೆ.
ತಮಿಳುನಾಡಿನಲ್ಲಿ ಭಾಷೆ, ನೆಲ, ಜಲ ಮತ್ತು ಜನ ಅಂತ ಬಂದರೆ ತಮ್ಮ ನಿಲುವನ್ನು ಮತ್ತು ತಮ್ಮ ತನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಅದನ್ನು ರೂಪೇಶ್ ರಾಜಣ್ಣ ಟ್ವೀಟ್ನ ಮೊದಲ ಸಾಲಿನಲ್ಲಿ ತಿಳಿಸಿದ್ದಾರೆ. ಡಾ.ಸುಧಾಕರ್ ಮತ್ತು ಬಿಎಲ್. ಸಂತೋಷ್ ಇಬ್ಬರೂ ಕನ್ನಡಿಗರೂ ಆದರೆ ಹಿಂದಿ ಗುಲಾಮರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
.