ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ(Rameshwaram cafe ) ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ . ಬಾಂಬ್ ಬ್ಲಾಸ್ಟ್ (Bomb blast) ಮಾಡಲು ಸಹಾಯ ಮಾಡಿದಂತಹ ವ್ಯಕ್ತಿಯನ್ನು NIA ಬಂಧಿಸಿದೆ. ಕಳೆದ ಹಲವು ದಿನಗಳಿಂದ ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎನ್ಐಎ(NIA) ಇದೀಗ ಮುಜಾಹಿಲ್ ಶಾರಿಪ್ (Mujaahil shaarif)ಎಂಬ ವ್ಯಕ್ತಿಯನ್ನು ಅರೆಸ್ಟ್ (Arrest) ಮಾಡಿದೆ.

ಬಾಂಬ್ ಬ್ಲಾಸ್ಟ್ (Bomb blast) ನಡೆಸುವ ಈ ಕೃತ್ಯಕ್ಕೆ ಈಗ ಅರೆಸ್ಟ್ ಆಗಿರುವ ಮುಜಾಹಿಲ್ ಶರೀಫ್ ಲೋಜಿಸ್ಟಿಕ್ (Logistic) ಸಪ್ಪೋರ್ಟ್ ಮಾಡಿದ್ದಾನೆ ಅನ್ನೋದು ಎನ್ಐಎ(NIA) ತನಿಖೆ ವೇಳೆಯಲ್ಲಿ ಕಂಡುಬಂದಿದೆ . ಸ್ಪೋಟಗೊಳ್ಳುವುದಕ್ಕೆ ಬೇಕಾಗಿರುವಂತಹ ಕಚ್ಚಾ ವಸ್ತುಗಳನ್ನು ತಯಾರಿಸಿ ಅದನ್ನ ಒಂದು ಸ್ಪೋಟಕ ಬಾಂಬೆ ಈತ ಸಹಾಯ ಮಾಡಿರೋದು ತನಿಖೆಯ ವೇಳೆ ಬಯಲಾಗಿದೆ.

ಇದೀಗ ಮುಜಾಹಿಲ್ ಶರೀಫ್ (mujaahil shareef) ನನ್ನ ಬಂಧಿಸಿರುವ NIA ಆತನ ಸಂಪೂರ್ಣ ಹಿನ್ನಲೆಯ ಮಾಹಿತಿಯನ್ನು ಕಲೆ ಹಾಕೋದಕ್ಕೆ ಮುಂದಾಗಿದೆ . ಈತ ಚಿಕ್ಕಮಗಳೂರಿನ ಕಳಸಾ ಮೂಲದವನು ಎಂದು ತಿಳಿದುಬಂದಿದೆ . ಬೆಂಗಳೂರಿನ ಬಸವೇಶ್ವರನಗರದ ಚಿಕನ್ ಕೌಂಟಿ (chicken countee) ರೆಸ್ಟೋರೆಂಟ್ ನಲ್ಲಿ ಈತ ನೌಕರನಾಗಿ ಕೆಲಸ ಮಾಡುತ್ತಿದ್ದ ಅನ್ನೋ ಮಾಹಿತಿಯನ್ನು ಸದ್ಯ NIA ಕಲೆಹಾಕಿದೆ.






