2006ರಲ್ಲಿ ನಾನು ಸಿಎಂ ಆಗಿದ್ದಾಗ ಮೂರು ಸ್ಯಾಟಲೈಟ್ ನಗರ ಮಾಡಲು ಮುಂದಾದೆ ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್ ವಿರೋಧಿಸಿತ್ತು ಈಗ ಬೆಂಗಳೂರು ಏನು ಮಾಡಿದ್ದಾರೆ ಗೊತ್ತಿಲ್ವಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನೆಲಮಂಗಲ ಈಗಾಗಲೇ ಸಾಕಷ್ಟು ಬೆಳದಿದೆ ನೆಲಮಂಗಲ ಈಗಾಗಲೇ ಬೆಂಗಳೂರಿಗೆ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್ ಟೌನ್ ಮಾಡೋದು ಬಹುಷ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ಪರೋಕ್ಷವಾಗಿ ಸಚಿವ ಸುಧಾಕರ್ ವಿರುದ್ದ ವ್ಯಂಗ್ಯವಾಡಿದ್ದಾರೆ.
ನಾನು ಕಾಂಪಿಟ್ ಟೂ ಚೈನಾ ಅಂತ ಕಾರ್ಯಕ್ರಮ ಮಾಡಿದ್ದೆ ಆದ್ರೆ ಬಿಜೆಪಿಯವರು ಬಂದು ರದ್ದು ಮಾಡಿದ್ರು ಬೀದಿ ಬದಿ ವ್ಯಾಪಾರಿಗಳಿಗೆ ಬಡಿರಹಿತ ಸಾಲ ನೀಡುವ ಕಾರ್ಯಕ್ರಮ ನೀಡಿದೆ ಅದನ್ನೂ ಕೂಡ ಬಿಜೆಪಿ ಸರ್ಕಾರ ರದ್ದು ಮಾಡಿದ್ರು. ಒಂದು ಬಾರಿ ಸ್ವಾತಂತ್ರ್ಯ ಸರ್ಕಾರಕ್ಕೆ ಅವಕಾಶ ನೀಡಿದ್ರೆ ಪಂಚರತ್ನ ಯೋಜನೆ ಜಾರಿಗೆ ತರ್ತೀವಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಾಲ ಮನ್ನ ಮಾಡಿಕೊಡಿ ಅಂತ ಮನವಿ ಮಾಡ್ತಿದ್ದಾರೆ ನೀವು ಅಧಿಕಾರ ನೀಡಿದ್ರೆ, ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ.

ಸ್ತ್ರೀ ಶಕ್ತಿ ಸಾಲ ಮನ್ನ ಮಾಡಿದ್ರೆ ಯುವಕರು ಚಪ್ಪಾಳೆ ತಟ್ಟಿದ್ರು ಯಾಕ್ರಪ್ಪ ಸ್ತ್ರೀ ಶಕ್ತಿ ಸಾಲ ಮನ್ನ ಮಾಡಿದ್ರೆ, ನಿವ್ಯಾಕೆ ಚಪ್ಪಾಳೆ ಹೊಡೀತಿದ್ದೀರಾ ಅಂತ. ಅದಕ್ಕೆ ಯುವಕರು ಸಾಲ ಅವರೇ ತಂದ್ರು, ನಾವೇ ಉಪಯೋಗಿಸಿಕೊಳ್ಳೋದು ಅಂದ್ರು ಎಂದಿದ್ದಾರೆ.
ಮುಸ್ಲಿಂ ಅಂಗಡಿಯಲ್ಲಿ ವ್ಯಾಪಾರ ಮಾಡಬೇಡಿ ಅಂದ್ರು ಅಲ್ಲೆಲ್ಲೋ ಕುಕ್ಕರ್ ಬ್ಲಾಸ್ಟ್ ಅಂದ್ರು ಅವರ್ಯಾರೋ ಅಮಾಯಕರು ಸಾಯ್ತಿರೋದು ಇದರಿಂದ ಬಡವರು ಬೀದಿ ಪಾಲಾಗ್ತಿದ್ದಾರೆ. ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ನಾಯಕರು ಹೇಳಿದ್ರು ಜೆಡಿಎಸ್‌ಗೆ ಮತ ನೀಡಬೇಡಿ ಅಂತ ಬಿಜೆಪಿ ಸರ್ಕಾರ ಬರೋದಕ್ಕೆ ಇದೇ ಕಾಂಗ್ರೆಸ್‌ನವರೇ ಕಾರಣ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.






