
11ಜನರ ಕಾಲ್ತುಳಿತ ಪ್ರಕರಣ, ಹೈಕಮಾಂಡ್ ಫುಲ್ ಗರಂ
ಸಿದ್ದು-ಡಿಕೆಶಿ ರಾಜೀನಾಮೆಗೆ ಹೈಕಮಾಂಡ್ ಸೂಚಿಸಿದ್ರಾ..!?
• ಕಾಲ್ತುಳಿತ ಪ್ರಕರಣ ರಾಜ್ಯ ನಾಯಕರಿಗೆ ಹೈಕಮಾಂಡ್ ಫುಲ್‌ಕ್ಲಾಸ್…!
• ಸಿಎಂ ಕನಸು ಕಾಣುತ್ತಿದ್ದ ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಬಿಗ್‌ಶಾಕ್ ನೀಡಿದೆ…!
• ಕಾಂಗ್ರೇಸ್ ನಾಯಕರ ಪೇಚಾಟ ಕಂಡು, ಹೆಚ್.ಡಿ.ಕೆ. & ವಿಜಯೇಂದ್ರ ರಣ ಕೇಕೆ ಹಾಕ್ತಿದ್ದಾರೆ…!
• ಮುಖ್ಯಮಂತ್ರಿ ಬದಲಾವಣೆ ಆದರೇ ಸರ್ಕಾರ ಪತನ..? ಬಸವನಗೌಡ ಪಾಟೀಲ್ ಯತ್ನಾಳ್ ನುಡಿದ ಭವಿಷ್ಯ ನಿಜವಾಗುತ್ತಾ..!?
ಇರಲಾರದವನು ಇರುವೆ ಬಿಟ್ಟುಕೊಂಡನಂತೆ ಎನ್ನುವ ಗಾದೆ ಮಾತಿನಂತೆ ರಾಜ್ಯದ ಅಭಿವೃದ್ಧಿ ಪರ ಗಮನ ಹರಿಸುವುದನ್ನು ಬಿಟ್ಟು ಆರ್.ಸಿ.ಬಿ. ತಂಡದೊಂದಿಗೆ ಸೆಲ್ಫಿ ಹುಚ್ಚಿಗೆ ಬಿದ್ದ ರಾಜ್ಯ ಸರ್ಕಾರ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇಂದು ರಾಜ್ಯ ಕಾಂಗ್ರೇಸ್ ನಾಯಕರನ್ನು ದೆಹಲಿಗೆ ಕರೆಸಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿದ್ದು, ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ದೊಡ್ಡ ಬದಲಾವಣೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಶೀರ್ಘದಲ್ಲೇ ಸಚಿವ ಸಂಪುಟ ವಿಸ್ತರಣೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಮೊನ್ನೆ ನಡೆದ 11 ಜನರ ಕಾಲ್ತುಳಿತ ಪ್ರಕರಣದಲ್ಲಿ ಕೆಂಡಾ ಮಂಡಲವಾಗಿರುವ ಹೈಕಮಾಂಡ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಖಾತೆ ಬದಲಾವಣೆಗೂ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ನಡೆಯನ್ನು ಕಂಡು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಶಾಕ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇಷ್ಟು ದೊಡ್ಡ ಬದಲಾವಣೆಯನ್ನ ಹೈಕಮಾಂಡ್ ನಿಂದ ರಾಜ್ಯ ಕಾಂಗ್ರೇಸ್ ನಾಯಕರು ನಿರೀಕ್ಷಿಸಿರಲಿಲ್ಲ.

11 ಜನರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ವರದಿ ಒಪ್ಪಿಸಿ ಬಂದರೆ ನಮ್ಮ ಕೆಲಸ ಮುಗಿಯಿತು ಎಂಬ ಆಲೋಚನೆಯೊಂದಿಗೆ ದೆಹಲಿ ತಲುಪಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಪೂರ್ವ ಸಿದ್ದತೆಯೊಂದಿಗೆ ದೆಹಲಿ ತಲುಪಿದ್ದರು.
ಮೃತರ ಕುಟುಂಬಕ್ಕೆ ತಲಾ 25ಲಕ್ಷ ನೀಡಿದ್ದೇವೆ, ಡಿಕೆ ಶಿವಕುಮಾರ್ ಅವರು ಕಣ್ಣೀರು ಸುರಿಸಿ ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದ್ದಾರೆ, ಇಷ್ಟೂ ಅವಘಡಕ್ಕೆ ಪೊಲೀಸರ ವೈಫಲ್ಯವೇ ಕಾರಣ, ಅಂತಹ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದ್ದೇವೆ, ಅಲ್ಲದೇ ಇಷ್ಟೆಲ್ಲಾ ಕಾರ್ಯಕ್ರಮದ ನೇರ ಹೊಣೆ ಎಂಎಲ್‌ಸಿ ಗೋವಿಂದರಾಜು ಅವರನ್ನು ಕೂಡ ಅಮಾನತುಗೊಳಿಸಿದ್ದೇವೆ ಎಂದು ಹೈಕಮಾಂಡ್ ಮುಂದೆ ವರದಿ ಒಪ್ಪಿಸಿ ಬರಲು ಹೋದ ಕಾಂಗ್ರೇಸ್ ನಾಯಕರಿಗೆ ಹೈಕಮಾಂಡ್ ದೊಡ್ಡ ಆಘಾತ ನೀಡಿದೆ.
ಆರ್ ಸಿ ಬಿ ತಂಡಕ್ಕೆ ಒಂದೇ ಒಂದು ಸನ್ಮಾನ…..

ಮಕ್ಕಳು, ಮೊಮ್ಮಕ್ಕಳ ಜೊತೆಗಿನ ಒಂದೇ ಒಂದು ಸೆಲ್ಫಿ ಹುಚ್ಚು ಈ ಹಂತಕ್ಕೆ ಬಂದು ನಿಲ್ಲುತ್ತೆ ಅಂತ ಸ್ವತಃ ಕಾಂಗ್ರೇಸ್ ನ ಅನುಭವಿ ರಾಜಕಾರಣಿಗಳಿಗೆ ಗೊತ್ತಿರಲಿಲ್ಲ.
ಶೀರ್ಘದಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಸೂಚನೆ ನೀಡಿದ್ದು, ಹಿರಿಯ ಅನುಭವಿ ರಾಜ್ಯ ನಾಯಕರ ಹೆಗಲಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ವಿರೋಧ ಪಕ್ಷದವರಿಗೂ ಇದೇ ಬೇಕಾಗಿತ್ತು, ಅಂದು ಅಧಿವೇಶನದ ವೇಳೆ ಬವನಗೌಡ ಪಾಟೀಲ ಯತ್ನಾಳ್ ಅವರು ಭವಿಷ್ಯ ನುಡಿದಿದ್ದರು. ಸಿಎಂ ಸಿದ್ದರಾಮಯ್ಯ ನವರನ್ನು ಒರತು ಪಡಿಸಿ ಕಾಂಗ್ರೇಸ್ ನಲ್ಲಿ ಯಾರಾದರೂ ಮುಖ್ಯಮಂತ್ರಿ ಆದರೇ ಕಾಂಗ್ರೇಸ್ ಸರ್ಕಾರ ಪತನ ಗ್ಯಾರಂಟಿ ಅಂತ ಹೇಳಿದ್ದರು, ಈ ಮಾತಿಗೆ ಅಂದು ಸಿದ್ದರಾಮಯ್ಯ ಅವರು ಮುಗುಳ್ನಕ್ಕಿ ಸುಮ್ಮನಾಗಿದ್ರು.
ಇದು ರಾಜಕೀಯ, ಯಾವಾಗ ಏನು ಬೇಕಾದರೂ ಬದಲಾವಣೆ ಆಗಹುದು ಏನಂತೀರಿ..?