• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಹರ್ಷ ಕೊಲೆ ಪ್ರಕರಣ: ಮುಸ್ಲಿಂ ಹೆಸರಿನಲ್ಲಿ ಬಿಜೆಪಿ MLCಗೆ ಬೆದರಿಕೆ ಹಾಕಿದ್ದ ಹಿಂದೂ ಯುವಕ ಬಂಧನ

ಪ್ರತಿಧ್ವನಿ by ಪ್ರತಿಧ್ವನಿ
March 23, 2022
in ಇದೀಗ
0
ಹರ್ಷ ಕೊಲೆ ಪ್ರಕರಣ: ಮುಸ್ಲಿಂ ಹೆಸರಿನಲ್ಲಿ ಬಿಜೆಪಿ MLCಗೆ ಬೆದರಿಕೆ ಹಾಕಿದ್ದ ಹಿಂದೂ ಯುವಕ ಬಂಧನ
Share on WhatsAppShare on FacebookShare on Telegram

ADVERTISEMENT

ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ‌ ಸಾವನ್ನು ಎದುರಿಟ್ಟು ದೊಡ್ಡ ಮಟ್ಟದ ಗಲಭೆಯನ್ನು ಸೃಷ್ಟಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು ಎಂಬ ಅನುಮಾನ ಹುಟ್ಟಿದೆ.


ವಿಧಾನ ಪರಿಷತ್‌ ಸದಸ್ಯ ಡಿಎಸ್‌ ಅರುಣ್‌ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ಇದೀಗ ಪೊಲೀಸ್‌ ಬಲೆಗೆ ಬಿದ್ದಿದ್ದು, ಆತ ಮುಸಲ್ಮಾನರ ಹೆಸರಿನಲ್ಲಿ ನಕಲಿ ಖಾತೆ ತೆರದು ಅರುಣ್‌ ವಿರುದ್ಧ ಬೆದರಿಕೆ ಹಾಕಿದ್ದ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಬಂಧಿತ ಆರೋಪಿಯನ್ನು ಬೆಳಗಾವಿ ತಾಲ್ಲೂಕಿನ ಗೋಕಾಕದ ಶಿಂದಿಕುರಬೆಟ್‌ನ ಸಿದ್ಧಾರೂಢ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಬಾಗಲಕೋಟೆ ಪೊಲೀಸರು ಬೇರೊಂದು ಪ್ರಕರಣದಲ್ಲಿ ಶ್ರೀಕಾಂತ್‌ ನನ್ನು ಬಂಧಿಸಿದಾಗ ಮುಸ್ಲಿಂ ಯುವಕನ ಹೆಸರಲ್ಲಿ ಅರುಣ್‌ಗೆ ಬೆದರಿಕೆ ಹಾಕಿರುವ ವಿಷಯ ಬೆಳಕಿಗೆ ಬಂದಿದೆ.

ಫೆಬ್ರವರಿ 20ರ ರಾತ್ರಿ ಹರ್ಷನ ಕೊಲೆ ನಡೆದಿದ್ದು, ಪ್ರಕರಣ ಸಂಬಂಧ ಡಿ.ಎಸ್.ಅರುಣ್ ಅವರು ಈ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು.

MLC ಡಿಎಸ್ ಅರುಣ್

ಫೆಬ್ರವರಿ 21ರಂದು ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಸ್ತಾಕ್ ಅಲಿ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ‘ನಿಮ್ಮ ತಲೆಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ, ಮುಂದಿನ ದಿನ ನಿಮ್ಮ ಪತ್ನಿ, ಮಕ್ಕಳೇ ಟಾರ್ಗೆಟ್ ನೆನಪಿಸಿ, ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೆ’ ಎಂದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಅರುಣ್‌ ಆಪ್ತ ಸಹಾಯಕ ವಾಗೀಶ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್‌ ಅವರಿಗೆ ದೂರು ನೀಡಿದ್ದರು.

ಅದರ ಆಧಾರದ ಮೇಲೆ ಮುಸ್ತಾಕ್‌ ಅಲಿ ಎಂಬುವವರ ವಿರುದ್ಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಫೆ. 20ರ ರಾತ್ರಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯಾದ ನಂತರ ಅರುಣ್‌ ಅವರು, ‘ಕೃತ್ಯದ ಹಿಂದೆ ಮುಸ್ಲಿಮರು ಇದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ʼಮುಸ್ತಾಕ್‌ ಅಲಿʼ ಹೆಸರಿನಲ್ಲಿ ಶ್ರೀಕಾಂತ್‌ ಹಿಂದೂಗಳಿಗೆ ಬೆದರಿಕೆ ಹಾಕಿದ್ದು, ಅದನ್ನು ಮುಸ್ಲಿಮರ ಮೇಲೆ ಕಟ್ಟಲು, ಆ ಮೂಲಕ ಸಮಾಜದ ಸ್ವಾಸ್ಥ್ಯ ಕದಡಲು ಪ್ರಯತ್ನಿಸಿದ್ದ ಎಂದು ಬಹಿರಂಗಗೊಂಡಿದೆ.

Tags: BJPCongress PartyCovid 19ಬಿಜೆಪಿ
Previous Post

ಮುಸ್ಲಿಂ ವ್ಯಾಪಾರಿಗಳ ಉಪಸ್ಥಿತಿ ಇಲ್ಲದೇ ಕಾಪು ಜಾತ್ರೆ ಆರಂಭ, ಮುಕ್ತಾಯ

Next Post

ಕ್ಯಾಂಪಸ್‌ಗಳಲ್ಲಿ ಪಿಎಫ್‌ಐ ಪ್ರಭಾವ ಕುಗ್ಗಿಸಲು ಆರ್‌ಎಸ್‌ಎಸ್‌ ಯೋಜನೆ : ವರದಿ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ಕ್ಯಾಂಪಸ್‌ಗಳಲ್ಲಿ ಪಿಎಫ್‌ಐ ಪ್ರಭಾವ ಕುಗ್ಗಿಸಲು ಆರ್‌ಎಸ್‌ಎಸ್‌ ಯೋಜನೆ : ವರದಿ

ಕ್ಯಾಂಪಸ್‌ಗಳಲ್ಲಿ ಪಿಎಫ್‌ಐ ಪ್ರಭಾವ ಕುಗ್ಗಿಸಲು ಆರ್‌ಎಸ್‌ಎಸ್‌ ಯೋಜನೆ : ವರದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada