ಹೆಚ್ಚು ಜನರ ಕಂಪ್ಲೇಂಟ್ ಏನ್ ಅಂದ್ರೆ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆ ಎಂದು..ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ,ಅದ್ರಲ್ಲೂ ವಿಶೇಷವಾಗಿ ಬೈಕ್ ಓಡಿಸುವವರು ಹಾಗೂ ಕನ್ಸ್ಟ್ರಷನ್ ಕೆಲಸ ಮಾಡುವವರು ಹೆಲ್ಮೆಟ್ ಧರಿಸಲೇಬೇಕು.. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆ ಈ ಟಿಪ್ಸ್ ಫಾಲೋ ಮಾಡಿ

ನೆತ್ತಿಯ ಸೀರಮ್
ಹೆಲ್ಮೆಟ್ ಧರಿಸುವವರು ತಮ್ಮ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನಒ ತಪ್ಪದೆ ಸ್ಕಾಲ್ಪ್ ಸಿರೇಮ್ ಅಥವ ಎಣ್ಣೆಯನ್ನು ಬಳಸಿ..ಇದರಿಂದ ಆರೋಗ್ಯಕರ ಕೂದಲಿನ ಬೆಳವಣಿಗೆ ಆಗುತ್ತದೆ.

ಸ್ಕಾಲ್ಪ್ ಮಾಸ್ಕ್ ಧರಿಸಿ
ಹೆಲ್ಮೆಟ್ ಧರಿಸುವ ಮುನ್ನ ಸ್ಕಾಲ್ಪ್ ಮಾಸ್ಕ್ ಧರಿಸುವುದನ್ನ ಮರಿಬೇಡಿ.ಇಲ್ಲ ತಲೆಗೆ ಬಟ್ಟೆ ಆದ್ರು ಕಟ್ಟಿ ಇದರಿಂದ ಬೆವರು ಕಡಿಮೆ ಆಗುತ್ತದೆ ಹಾಗೂ ಕೂದಲು ಉದುರುವುದು ಕಮ್ಮಿ ಆಗುತ್ತದೆ.
ಹೆಲ್ಮೆಟ್ ಸ್ವಚ್ಛಗೊಳಿಸಿ
ವಾರಕ್ಕೆ ಎರಡರಿಂದ ಮೂರು ಭಾರಿ ಹೆಲ್ಮೆಟ್ ನ ಕ್ಲೀನ್ ಮಾಡಿ..ಸಾಧ್ಯವಾದರೆ ವಾರಕ್ಕೆ ಒಮ್ಮೆ ಹೆಲ್ಮೆಟ್ ವಾಶ್ ಮಾಡಿ ಬಿಸಿಲಲ್ಲಿ ಡ್ರೈ ಮಾಡಿ.

ಉತ್ತಮ ಗಾಳಿ
ನೀವು ಹೆಲ್ಮೆಟ್ ಧರಿಸಿದಾಗ ಬೆವರು ಮತ್ತು ತೇವಾಂಶ ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡಲು ಉತ್ತಮ ಗಾಳಿ ಬರುವಂತ ಹೆಲ್ಮೆಟ್ ಧರಿಸಿ.