
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಹಾಗೂ ಎ.ಎಸ್ ಪೊನ್ನಣ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್‌ನ ಯುವ ವಕೀಲರ ಬಳಗದಿಂದ ಡಿ.ಕೆ ಶಿವಕುಮಾರ್‌ಗೆ ದೂರು ಸಲ್ಲಿಕೆ ಆಗಿದೆ.

ವಕೀಲರ ಸಂಘದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿರುವ ರಮೇಶ್ ಬಾಬು ಹಾಗೂ ಎ.ಎಸ್ ಪೊನ್ನಣ್ಣ ಜೆಡಿಎಸ್ ಅಭ್ಯರ್ಥಿ ಎ.ಪಿ ರಂಗನಾಥ್‌ಗೆ ನೆರವಾಗುತ್ತಿದ್ದಾರೆ ಎಂದು ದೂರು ಸಲ್ಲಿಕೆ ಆಗಿದೆ. ರಮೇಶ್ ಬಾಬು ಹಾಗೂ ಪೊನ್ನಣ್ಣ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದಾರೆಂದು ಡಿ.ಕೆ ಶಿವಕುಮಾರ್ ಬಳಿ ದೂರಿದ್ದಾರೆ.
ರಮೇಶ್ ಬಾಬು ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಡಿ.ಕೆ ಶಿವಕುಮಾರ್‌ಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ವಕೀಲರ ತಂಡದ ಅಭ್ಯರ್ಥಿ ಆಗಿರೋ ಟಿ ಜೆ ರವಿಗೆ ಬೆಂಬಲ ನೀಡದೆ ಜೆಡಿಎಸ್‌ನ ಎ.ಪಿ ರಂಗನಾಥ್‌ಗೆ ಬೆಂಬಲ ಆಗುವಂತೆ ನಡೆದುಕೊಳ್ತಿದ್ದಾರೆ ಎಂದು ದೂರಲಾಗಿದೆ.

ವಕೀಲರ ಸಂಘದ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಮನಕ್ಕೆ ತರದೆ ರಮೇಶ್ ಬಾಬು ವಕೀಲರಿಗೆ ಪತ್ರ ಬರೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಡಿ.ಕೆ ಶಿವಕುಮಾರ್‌ಗೆ ರಮೇಶ್ ಬಾಬು ಮೇಲೆ ಕ್ರಮಕ್ಕೆ ಕಾಂಗ್ರೆಸ್‌ನ ವಕೀಲರ ತಂಡ ದೂರು ಸಲ್ಲಿಸಿದ್ದಾರೆ.